ದೇಶ, ರಾಜ್ಯ, ನಗರ ಮತ್ತು ಹಳ್ಳಿಗಳಲ್ಲಿ ಕೊರೊನಾ ಎಂಬ ಹೆಮ್ಮಾರಿ ತಾಂಡವವಾಡುತ್ತಿದೆ. ಈ ಹೆಮ್ಮಾರಿಯನ್ನ ಕಟ್ಟಿ ಹಾಕಲು ಆಯಾ ರಾಜ್ಯ ಸರ್ಕಾರಗಳು ಲಾಕ್ಡೌನ್ ಮಾದರಿಯ ಕ್ರಮಗಳ ಮೊರೆ ಹೋಗಿವೆ. ಆದರೂ ಕೊರೊನಾ ಹತೋಟಿಗೆ ಬರುತ್ತಿಲ್ಲ.
ಆಸ್ಪತ್ರೆಗಳಲ್ಲಿ ಬೆಡ್, ಆಕ್ಸಿಜನ್‌ಗಾಗಿ ಜನರು ಪರದಾಡುತ್ತಿದ್ದಾರೆ. ಇಂತಹ ಸಮಯದಲ್ಲಿ ಬಾಲಿವುಡ್ ನಟ ಸೋನು ಸೂದ್ ಕೊರೊನಾ ಸೋಂಕಿತರ ಕಷ್ಟಕ್ಕೆ ನಿಂತಿದ್ದಾರೆ.
ಈಗ ಕನ್ನಡದ ನಟರ ಪೈಕಿ ನಟ ಸುದೀಪ್ ಇದೇ ಮೊದಲು ದೊಡ್ಡ ಮಟ್ಟದಲ್ಲಿ ಕೊರೊನಾ ಸೋಂಕಿತರ ನೆರವಿಗೆ ಬಂದಿದ್ದಾರೆ. ಕಿಚ್ಚ ಸುದೀಪ್ ಚಾರಿಟಬಲ್ ಟ್ರಸ್ಟ್ ಮೂಲಕ ಸರಿಸುಮಾರು 300 ಆಕ್ಸಿಜನ್ ಸಿಲಿಂಡರ್ಗಳನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗಳಿಗೆ ನೀಡುವ ಮೂಲಕ, ಕೊರೊನಾ ಸೋಂಕಿತರ ಸಹಾಯಕ್ಕೆ ಬಂದಿದ್ದಾರೆ.
ಮತ್ತೊಂದು ಕಡೆ ಬಾಲಿವುಡ್ ನಟ ಸೋನು ಸೂದ್, ಬೆಂಗಳೂರಿನಲ್ಲಿರುವ ಕೆಲ ಆಸ್ಪತ್ರೆ ಹಾಗೂ ಪೊಲೀಸರ ಸಹಾಯಕ್ಕೆ ಬರ್ತಾ ಇದ್ದಾರೆ.
ಯಾಕೆ ನಮ್ಮ ಕನ್ನಡದ ನಟರು ಯಾರು ಸಹಾಯ ಮಾಡ್ತಾ ಇಲ್ಲ ಅಂತಾ ಸೋಷಿಯಲ್ ಮೀಡಿಯಾದಲ್ಲಿ ಮಾತುಗಳು ಕೇಳಿ ಬಂದಿದ್ದವು.
ಇದರ ಬೆನ್ನಲ್ಲೇ ಕಿಚ್ಚ ಸುದೀಪ್ ಈಗ ಕೆಲ ಖಾಸಗಿ ಆಸ್ಪತ್ರೆಗೆ ಆಕ್ಸಿಜನ್ ನೀಡುವ ಮೂಲಕ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.