ಮಜಾ ಟಾಕೀಸ್ ಮನರಂಜನೆಯನ್ನು ಒಳಗೊಂಡಿದೆ. ಈ ಹೊಸ ಚಾನಲ್ ಮಾಹಿತಿಯನ್ನು ನೀಡಲಿದೆ. ನಾವು ಮಾಹಿತಿಯನ್ನು ಹಾಗೂ ಜನರಿಗೆ ಜ್ಞಾನವನ್ನು ನೀಡಬೇಕೆಂಬ ಉದ್ದೇಶವಿದೆ. ಜನರು ಸ್ವೀಕರಿಸುತ್ತಾರೆ ಎಂಬ ನಂಬಿಕೆ ನಮಗಿದೆ. ನಾನು ಹೊಸ ಪಯಣ ಆರಂಭವಾಗುವುದರತ್ತ ನೋಡುತ್ತಿದ್ದೇನೆ. ಕನ್ನಡಿಗರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತದೆ ಎಂದು ನಂಬಿದ್ದೇನೆ ಎಂಬುದು ಸೃಜನ್ ಲೋಕೇಶ್ ಮಾತು.
- " class="align-text-top noRightClick twitterSection" data="
">
ಮಜಾ ಟಾಕೀಸ್ನ ಕೊನೆಯ ಸಂಚಿಕೆ ಇತ್ತೀಚೆಗಷ್ಟೇ ಪ್ರಸಾರವಾಗಿದ್ದು, ಅದರಲ್ಲಿ ಉಪೇಂದ್ರ ಅತಿಥಿಯಾಗಿ ಭಾಗವಹಿಸಿದ್ದರು. ಮಜಾ ಟಾಕೀಸ್ನ ರೂವಾರಿ ನಿರೂಪಕ ಸೃಜನ್ ಲೋಕೇಶ್ ಸಾಮಾಜಿಕ ಜಾಲತಾಣದಲ್ಲಿ ವೀಕ್ಷಕರಿಗೆ ಧನ್ಯವಾದಗಳನ್ನು ಹೇಳಿದ್ದಾರೆ.
ನಾವು ಮಜಾ ಟಾಕೀಸ್ನಿಂದ ತಾತ್ಕಾಲಿಕ ಬ್ರೇಕ್ ಪಡೆದುಕೊಳ್ಳುತ್ತಿದ್ದೇವೆ. ಆದರೆ ನಾವು ಇದಕ್ಕಿಂತ ಉತ್ತಮವಾಗಿ ರಂಜಿಸಲು ಮತ್ತೆ ಬರುತ್ತೇವೆ. ಮಜಾ ಟಾಕೀಸ್ ಆರು ವರ್ಷಗಳನ್ನು ಮುಗಿಸಿದೆ. ವೀಕ್ಷಕರ ಪ್ರೋತ್ಸಾಹ ಇಲ್ಲದೇ ಇದು ಸಾಧ್ಯವಿಲ್ಲ. ಹೀಗಾಗಿ ಎಲ್ಲಾ ಕ್ರೆಡಿಟ್ ಇಷ್ಟು ವರ್ಷ ನಮ್ಮೊಂದಿಗಿದ್ದ ವೀಕ್ಷಕರಿಗೆ ಸೇರಬೇಕು ಎಂದು ಸೃಜನ್ ಹೇಳಿದ್ದಾರೆ.
ಯೂಟ್ಯೂಬ್ ಚಾನಲ್ ಪ್ರಾರಂಭಿಸಿರುವ ಸೃಜನ್ ಒಟ್ಟು ಏಳು ಕ್ರಿಯೇಟಿವ್ ಶೋಗಳನ್ನು ನಡೆಸಲಿದ್ದಾರೆ. ಅವು ಯಾವುವು ಎಂಬುದನ್ನು ಮುಂಬರುವ ದಿನಗಳಲ್ಲಿ ತಿಳಿಯಬಹುದಾಗಿದೆ.