ETV Bharat / sitara

ವೈರಲ್​ ಫೀವರ್​​: ತಮಿಳುನಾಡಿನ ಖ್ಯಾತ ನಟ ಸಿಂಬು ಆಸ್ಪತ್ರೆಗೆ ದಾಖಲು - ಸಿಂಬು ಆಸ್ಪತ್ರೆಗೆ ದಾಖಲು

ಕಾಲಿವುಡ್​​ನ ಖ್ಯಾತ ನಟ ಸಿಂಬು ಅವರಲ್ಲಿ ವೈರಲ್​ ಜ್ವರ ಕಾಣಿಸಿಕೊಂಡಿದ್ದು, ಇದರ ಬೆನ್ನಲ್ಲೇ ಅವರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Actor Simbu admitted hospital
Actor Simbu admitted hospital
author img

By

Published : Dec 11, 2021, 7:28 PM IST

ಚೆನ್ನೈ(ತಮಿಳುನಾಡು): ವೈರಲ್​​​​ ಫೀವರ್​​​ನಿಂದ ಬಳಲುತ್ತಿರುವ ತಮಿಳುನಾಡಿನ ಖ್ಯಾತ ನಟ ಸಿಂಬು ಅವರನ್ನ ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ ಎಂದು ತಿಳಿದು ಬಂದಿದೆ.

ಕಾಲಿವುಡ್​ನ ಖ್ಯಾತ ನಟರಾಗಿರುವ ಸಿಂಬು ಅಲಿಯಾಸ್​ ಸಿಲಂಬರಸನ್​​ ಕಳೆದ ಕೆಲ ದಿನಗಳಿಂದ ಹೊಸ ಚಿತ್ರದ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದರು. ಇದರ ಬೆನ್ನಲ್ಲೇ ಅವರಿಗೆ ವೈರಲ್​​ ಸೋಂಕು ಕಾಣಿಸಿಕೊಂಡಿದೆ.

ಇಂದು ಬೆಳಗ್ಗೆ ತೀವ್ರ ಜ್ವರ ಹಾಗೂ ಗಂಟಲು ನೋವು ಕಾಣಿಸಿಕೊಂಡಿದ್ದ ಕಾರಣ ಆಸ್ಪತ್ರೆಗೆ ತೆರಳಿದ್ದರು. ವೈರಲ್​ ಸೋಂಕು ಇರುವ ಕಾರಣ ಮುಂಜಾಗ್ರತಾ ಕ್ರಮವಾಗಿ ಆಸ್ಪತ್ರೆಗೆ ದಾಖಲು ಮಾಡಿಕೊಳ್ಳಲಾಗಿದೆ. ವೈರಲ್​ ಜ್ವರ ಕಾಣಿಸಿಕೊಂಡಿರುವ ಕಾರಣ ಈಗಾಗಲೇ ನಟನಿಗೆ ಕೋವಿಡ್​ ಪರೀಕ್ಷೆ ಮಾಡಿಸಲಾಗಿದ್ದು, ವರದಿ ನೆಗೆಟಿವ್​ ಬಂದಿದೆ ಎಂದು ವೈದ್ಯರು ತಿಳಿಸಿದ್ದಾರೆ. ಈಗಾಗಲೇ ಅವರ ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆ ಮುಂದುವರೆದಿದೆ ಎಂದು ವರದಿಯಾಗಿದೆ.

ಇದನ್ನೂ ಓದಿರಿ: Vijay Hazare Trophy: ಸಮರ್ಥ ಬ್ಯಾಟಿಂಗ್​​ ವೈಖರಿ.. ಮುಂಬೈ ವಿರುದ್ಧ ಗೆದ್ದ ಕರ್ನಾಟಕ

ಸಿಂಬು ಹಾಗೂ ಗೌತಮ್​ ಮೆನನ್ ಕಾಂಬಿನೇಷನ್​​ನಲ್ಲಿ ಹೊಸ ಚಿತ್ರ Vendhu Thanindhathu Kaadu ತೆರೆಗೆ ಬರುತ್ತಿದ್ದು, ಕಳೆದ ಕೆಲ ದಿನಗಳ ಹಿಂದೆ ಈ ಚಿತ್ರದ ಟೀಸರ್​ ರಿಲೀಸ್​​​​​​ ಆಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.