ETV Bharat / sitara

ಕಾಮ್ರೇಡ್​ ವರ್ಸಸ್​ ನಾರಾಯಣ : ರಶ್ಮಿಕಾಗೆ ರಿಚ್ಚಿ ಅಭಿಮಾನಿಗಳ ಓಪನ್ ಸವಾಲು - ರಿಚ್ಚಿ

ಜನ್ಮದಿನದ ಶುಭ ಕೋರಲಿಲ್ಲ ಎನ್ನುವ ಕಾರಣಕ್ಕೆ ನಟಿ ರಶ್ಮಿಕಾ ಮಂದಣ್ಣ ಅವರಿಗೆ ನಟ ರಕ್ಷಿತ್​ ಶೆಟ್ಟಿ ಅಭಿಮಾನಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ. ಟ್ವಿಟರ್​​, ಇನ್​ಸ್ಟಾಗ್ರಾಂ ಹಾಗೂ ಫೇಸ್​​ಬುಕ್​​ನಲ್ಲಿ ರಶ್ಮಿಕಾ ಅವರನ್ನು ಗುರಿಯಾಗಿಸಿಕೊಂಡು ಟೀಕೆ ಮಾಡಲಾಗುತ್ತಿದೆ.

ಚಿತ್ರಕೃಪೆ: ಟ್ವಿಟ್ಟರ್​
author img

By

Published : Jun 8, 2019, 8:03 AM IST

Updated : Jun 8, 2019, 8:19 AM IST

ಮೊನ್ನೆ ಅಂದ್ರೇ ಜೂನ್‌ 6ರಂದು ಕನ್ನಡದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಹುಟ್ಟುಹಬ್ಬ ಆಚರಿಸಿಕೊಂಡರು. ಕನ್ನಡ ಸಿನಿಮಾಗಳ ಶ್ರೀಮಂತಿಕೆಗೆ ಶ್ರಮಿಸುತ್ತಿರುವ ಈ ಪ್ರತಿಭಾವಂತ ಶ್ರಮಜೀವಿಗೆ ಇಡೀ ಕನ್ನಡ ಚಿತ್ರರಂಗವೇ ಶುಭಾಶಯ ಕೋರಿತು. ಅದರಂತೆ ನಟಿ ರಶ್ಮಿಕಾ ಕೂಡ ವಿಶ್ ಮಾಡಬಹುದು ಎನ್ನುವ ನಿರೀಕ್ಷೆ ಅಭಿಮಾನಿಗಳಲ್ಲಿತ್ತು. ಆದರೆ, ಈ ನಿರೀಕ್ಷೆಯನ್ನು ಹುಸಿಯಾಗಿಸಿದ ಕೊಡಗಿನ ಬೆಡಗಿ, ತಮ್ಮ ಟ್ವಿಟರ್​​ನ್ನಾಗಲಿ, ಇನ್​ಸ್ಟಾಗ್ರಾಂನಲ್ಲಾಗಲಿ ರಕ್ಷಿತ್​ಗೆ ಜನ್ಮದಿನದ ಶುಭ ಕೋರಿಲ್ಲ. ಇದು ರಿಚ್ಚಿಯ ಫ್ಯಾನ್ಸ್​​ಗೆ ಕೋಪ ತರಸಿದೆ. ಮೊನ್ನೆಯಿಂದಲೇ ರಶ್ಮಿಕಾ ವಿರುದ್ಧ ಹರಿಹಾಯುತ್ತಿದ್ದ ಅಭಿಮಾನಿಗಳು ನಿನ್ನೆ ಟ್ವಿಟರ್​​ಗೆ ಬಂದಿದ್ದ ರಶ್ಮಿಕಾಳ ಮೇಲೆ ಮುಗಿಬಿದ್ದು, ಟೀಕೆಗಳ ಸುರಿಮಳೆಗೈದಿದ್ದಾರೆ.

  • ಹತ್ತು 'ಮುತ್ತಿಡುವ' ಚಿತ್ರಗಳಿಗಿಂತ ಒಂದು 'ಮುತ್ತಿನಂತ' ಚಿತ್ರ ಸಾಕು. ಶೆಟ್ರು ಬರ್ತಿದಾರೆ ಸೈಡಾಗಿ ಎಲ್ಲಾ😎#AvaneSrimanNarayana #RakshitShetty #DearComrade

    — Vijaykumar YV (@vyv11195) June 7, 2019 " class="align-text-top noRightClick twitterSection" data=" ">

ಮೇ 31 ರಿಂದ ಟ್ವಿಟರ್​​ಲ್ಲಿ ಯಾವುದೇ ಪೋಸ್ಟ್ ಮಾಡದ ರಶ್ಮಿಕಾ ನಿನ್ನೆ ತಮ್ಮ ಡಿಯರ್ ಕಾಮ್ರೇಡ್ ಸಿನಿಮಾ ಪೋಸ್ಟರ್​ ಹಾಕಿಕೊಂಡಿದ್ದರು. ಇದನ್ನು ನೋಡಿದ ರಕ್ಷಿತ್​ ಅಭಿಮಾನಗಳ ​ ಕೋಪ ನೆತ್ತಿಗೇರಿದಂತೆ ಕಾಣುತ್ತೆ. ತಕ್ಷಣವೇ ಬಾಯಿಗೆ ಬಂದಂತೆ ತರಾಟೆಗೆ ತೆಗೆದುಕೊಂಡಿದ್ದಾರೆ. ನಿನ್ನನ್ನು ಚಿತ್ರರಂಗಕ್ಕೆ ಪರಿಚಯಿಸಿದವರಿಗೆ ಒಂದು ವಿಶ್ ಮಾಡುವ ಯೋಗ್ಯತೆ ಇಲ್ವಾ ಎಂದು ಪ್ರಶ್ನಿಸತೊಡಗಿದ್ದಾರೆ.

ಶುರುವಾಯಿತು ನಾರಾಯಣ ವರ್ಸಸ್​ ಡಿಯರ್ ಕಾಮ್ರೇಡ್​​ :

ರಶ್ಮಿಕಾ ಅವರನ್ನು ಟೀಕಿಸುವುದರ ಜತೆಗೆ ರಕ್ಷಿತ್ ಶೆಟ್ಟಿಯ ಶ್ರೀಮನ್ನಾರಾಯಣ ಸಿನಿಮಾ ಪ್ರಮೋಷನ್ ಶುರುವಿಟ್ಟುಕೊಂಡಿರುವ ಅಭಿಮಾನಿಗಳು, ಡಿಯರ್ ಕಾಮ್ರೇಡ್​ ಐದು ಭಾಷೆಯಲ್ಲಿ ಬರುತ್ತಿದೆ. ನಮ್ಮ ಚಿತ್ರವೂ (ಶ್ರೀಮನ್ನಾರಾಯಣ) ಸೌಥ್​​ನ ಎಲ್ಲ ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ನೋಡೋಣ ಯಾವುದು ಹಿಟ್ ಆಗುತ್ತೆ ಅಂತಾ ಸವಾಲು ಹಾಕಿದ್ದಾರೆ. ಹತ್ತು 'ಮುತ್ತಿಡುವ' ಚಿತ್ರಗಳಿಗಿಂತ ಒಂದು 'ಮುತ್ತಿನಂತ' ಚಿತ್ರ ಸಾಕು. ಶೆಟ್ರು ಬರ್ತಿದಾರೆ ಸೈಡಾಗಿ ಎಲ್ಲಾ ಎಂದು ಅಭಿಮಾನಿಗಳು ರಶ್ಮಿಕಾಗೆ ಕಿಚಾಯಿಸುವ ಕೆಲಸ ಮಾಡಿದ್ದಾರೆ.

Intro:Body:Conclusion:
Last Updated : Jun 8, 2019, 8:19 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.