ETV Bharat / sitara

ಪಾರ್ಶ್ವ ವಾಯು ನಟನೆಗೆ ಟಿಪ್ಸ್​ ಕೊಟ್ಟಿದ್ದರಂತೆ ರಾಘಣ್ಣ... ಇಕ್ಕಟ್ಟಿಗೆ ಸಿಲುಕಿದ್ದ ನಂಜುಂಡಿ - ತ್ರಯಂಬಕಂ,

ನಟ ರಾಘವೇಂದ್ರ ರಾಜಕುಮಾರ್​ ಮತ್ತೇ ಅಮ್ಮನ ಮನೆ ಚಿತ್ರದ ಮೂಲಕ ಚಿತ್ರರಂಗಕ್ಕೆ ರೀ-ಎಂಟ್ರಿ ಕೊಡುತ್ತಿದ್ದಾರೆ. ನಿಖಿಲ್ ಮಂಜು ನಿರ್ದೇಶನದ ಈ ಚಿತ್ರ ಇದೇ 14ಕ್ಕೆ ಬಿಡುಗಡೆಯಾಗುತ್ತಿದೆ.

ಅಮ್ಮನ ಮನೆ ಚಿತ್ರದಲ್ಲಿ ರಾಘಣ್ಣ
author img

By

Published : Mar 6, 2019, 4:41 PM IST

Updated : Mar 6, 2019, 4:49 PM IST

ಇನ್ನೇನು ರಾಘಣ್ಣನ ಸಿನಿ ಕರಿಯರ್​ ಮುಗಿಯಿತು. ಅವರು ಇನ್ಮೇಲೆ ಬಣ್ಣ ಹಚ್ಚುತ್ತಾರೋ ಇಲ್ವೋ ಅನ್ನೋ ಮಾತು ಕೇಳಿ ಬಂದಿತ್ತು. ಆದರೆ, ಅವರು ಎಲ್ಲ ಕಷ್ಟಗಳನ್ನು ಮೆಟ್ಟಿ ನಿಂತು ಫಿನಿಕ್ಸ್​ನಂತೆ ಮತ್ತೇ ಎದ್ದು ಬಂದು ಪರದೆಯ ಮೇಲೆ 'ಅಮ್ಮನ ಮನೆ' ಚಿತ್ರದ ಮೂಲಕ ಕಾಣಿಸಿಕೊಳ್ಳುತ್ತಿದ್ದಾರೆ.

ಈ ಪುನರಾಗಮನದ ಜೊತೆ ‘ತ್ರಯಂಬಕಂ’, ‘ಪೊಗರು’ ಕನ್ನಡ ಸಿನಿಮಾಗಳು ರಾಘಣ್ಣ ಅವರನ್ನು ಹುಡುಕಿಕೊಂಡು ಬಂದಿವೆ. ಅಮ್ಮನ ಮನೆ ಚಿತ್ರಕಥೆ ರಾಘಣ್ಣನ ನೀಜ ಜೀವನಕ್ಕೆ ಹತ್ತಿರವಾದಂತಿದೆ. ಈ ವಿಚಾರವನ್ನೇ ಅವರೇ ಹೇಳಿಕೊಂಡಿರುವ ರಾಘಣ್ಣ ಚಿತ್ರೀಕರಣ ಸಮಯದಲ್ಲಾದ ಒಂದು ಸಂದಿಗ್ಧ ಸಂದರ್ಭ ರಿವೀಲ್ ಮಾಡಿದ್ದಾರೆ.

ಅಮ್ಮನ ಮನೆ ಚಿತ್ರದಲ್ಲಿ ರಾಘಣ್ಣನ ತಾಯಿ ಪಾತ್ರ ಮಾಡಿರುವ ರೋಹಿಣಿ ಅವರುಸ್ಟ್ರೋಕ್ ಆಗಿ ಹಾಸಿಗೆ ಹಿಡಿದಿರುತ್ತಾರೆ. ಈ ಪಾತ್ರ ಪರಿಣಾಮಕಾರಿಯನ್ನಾಗಿಸಲು ರೋಹಿಣಿ ಅವರು ತಮ್ಮ ಅಭಿನಯಕ್ಕೆ ಟಿಪ್ಸ್ ಪಡೆಯುತ್ತಾ ಇದ್ದದ್ದೇ ರಾಘಣ್ಣ ಅವರಿಂದಂತೆ. ಒಮ್ಮೆಯಂತೂ 'ಸಾರ್ ನಿಮಗೆ ನಿಜ ಜೀವನದ ಅನುಭವ ಇದೆಯಲ್ಲ, ನನ್ನ ಪಾತ್ರದ ರೀತಿ ಸರಿಯಿದೆಯೇ ಎಂದು ಕೇಳಿದ್ದು ರಾಘಣ್ಣನಿಗೆ ಎಲ್ಲೋ ಒಂದು ಕಡೆ ಕರುಳು ಚುರುಕ್ ಅಂದಿತಂತೆ.

ನಿಜ ಜೀವನದಲ್ಲಿ ರಾಘಣ್ಣ ಅವರಿಗೂ ಸ್ಟ್ರೋಕ್ ಆಗಿತ್ತು. ಈಗ ಅವರು ಸಂಪೂರ್ಣವಾಗಿ ಗುಣಮುಖರಾಗಿ ಎಂದಿನಂತೆ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಇವರು ನಟಿಸಿರುವ ಅಮ್ಮನ ಮನೆ ಚಿತ್ರ ಇದೇ 14 ರಂದು ಬಿಡುಗಡೆಯಾಗುತ್ತಿದೆ.

---------- Forwarded message ---------
From: pravi akki <praviakki@gmail.com>
Date: Wed, Mar 6, 2019, 10:22 AM
Subject: Fwd: RAGHANNA ON QUIXOTIC SITUATION
To: Praveen Akki <praveen.akki@etvbharat.com>

---------- Forwarded message ---------
From: Vasu K.S. Vasu <sasuvas@gmail.com>
Date: Wed, Mar 6, 2019, 9:08 AM
Subject: RAGHANNA ON QUIXOTIC SITUATION
To: pravi akki <praviakki@gmail.com>, <praveen.akki@etvbharath.com>, EenaduIndia kannada <kannadadesk@gmail.com>

ರಾಘವೇಂದ್ರ ರಾಜಕುಮಾರ್ ಹೇಳಿಕೊಂಡ ಇಕ್ಕಟ್ಟಿನ ಸನ್ನಿವೇಶ

ಡಾ ರಾಜಕುಮಾರ್ ಸಂಸ್ಥೆಯ ಪಿಲ್ಲರ್ ರಾಘವೇಂದ್ರ ರಾಜಕುಮಾರ್ ಅವರ ಪುನರ್ಜನ್ಮ ಅಮ್ಮನ ಮನೆ ಸಿನಿಮಾ ಇಂದ 14 ವರ್ಷಗಳ ಬಳಿಕ ಆಗಿರುವುದು ತಿಳಿದಿರುವ ವಿಚಾರ. ಈ ಪುನರಾಗಮನದ ಜೊತೆ ತ್ರಯಂಬಕಮ್’, ಪೊಗರು ಕನ್ನಡ ಸಿನಿಮಗಳು ಸಾಲಾಗಿ ರಾಘಣ್ಣ ಅವರನ್ನು ಹುಡುಕಿಕೊಂಡು ಬಂದಿದೆ.

ಹೇಳಿ ಕೇಳಿ ಅಮ್ಮ ಪಾರ್ವತಮ್ಮ ರಾಜಕುಮಾರ್ ಅವರ ಪ್ರಿಯ ಪುತ್ರ ಅಮ್ಮನ ಮನೆ ಅಂತ ಶೀರ್ಷಿಕೆ ಚಿತ್ರ ಸಿಕ್ಕಿರುವುದು ಅಲ್ಲಿ ಅವರ ಹಾಗೂ ತಾಯಿಯ ಜೀವನದ ಪುಟಗಳಿಂದಲೇ ಕಥೆ ಆಯ್ಕೆ ಮಾಡಿ ನಿಖಿಲ್ ಮಂಜು ಸಿನಿಮಾ ನಿರ್ದೇಶನ ಮಾಡಿದ್ದಾರೆ.

ಆದರೆ ರಾಘಣ್ಣ ಬಹಳ ಫ್ರಾಂಕ್ ಆಗಿ ಮಾತನಾಡುತ್ತಾ ಹೇಳುವುದು ಏನು ಗೊತ್ತೇ. ನನ್ನ ಜೀವನದಲ್ಲಿ 4 ವರ್ಷಗಳ ಹಿಂದೆ ಆದ ಸ್ಟ್ರೋಕ್ ಈಗ ನನಗೆ ವರವಾಗಿ ಮಾರ್ಪಾಟು ಆಗಿದೆ. ಹೀಗೆ ಇರುವುದಕ್ಕೆ ಇಂತಹ ಪಾತ್ರಗಳು ಸಿಕ್ಕಿದೆ. ಇದು ಯಾವ ಜನ್ಮದ ಪುಣ್ಯವೋ ಎನ್ನುತ್ತಾರೆ.

ಅದೆಲ್ಲ ಇರಲಿ. ಆದರೆ ಚಿತ್ರೀಕರಣ ಸಮಯದಲ್ಲಿ ಆದ ಒಂದು ಸಂದಿಗ್ದ ಸಂದರ್ಭವನ್ನು ರಾಘಣ್ಣ ಹೇಳಿಕೊಂಡಿದ್ದಾರೆ. ನಿಜ ಜೀವನದಲ್ಲಿ ನನಗೆ ಸ್ಟ್ರೋಕ್ ಆದ ಜೊತೆಗೆ ಅಮ್ಮನ ಕಾನ್ಸರ್ ಬಾದಿಸುತ್ತಾ ಹೋಯಿತು. ಆದರೆ ಈ ಚಿತ್ರದಲ್ಲಿ ನನ್ನ ತಾಯಿ ಪಾತ್ರ ಮಾಡಿರುವ ರೋಹಿಣಿ ಪಾತ್ರದಾರಿ ಸ್ಟ್ರೋಕ್ ಆಗಿ ಹಾಸಿಗೆ ಹಿಡಿದಿರುವ ಪಾತ್ರ.

ರಾಘಣ್ಣ ಸ್ಟ್ರೋಕ್ ಆಗದೆ ಇರುವ ವ್ಯಕ್ತಿಯ ಪಾತ್ರ ಮಾಡಬೇಕು, ಅವರ ಅಮ್ಮನ ಪಾತ್ರದಾರಿ ಸ್ತ್ರೋಕ್ ಆಗಿರುವ ವ್ಯಕ್ತಿ ಪಾತ್ರ. ರೋಹಿಣಿ ಅವರು ತಮ್ಮ ಅಭಿನಯಕ್ಕೆ ಟಿಪ್ಸ್ ಪಡೆಯುತ್ತಾ ಇದ್ದದ್ದೇ ರಾಘಣ್ಣ ಅವರಿಂದ. ಒಮ್ಮೆಯಂತೂ ಸಾರ್ ನಿಮಗೆ ನಿಜ ಜೀವನದ ಅನುಭವ ಇದೆಯಲ್ಲ ನನ್ನ ಪಾತ್ರದ ರೀತಿ ಸರಿಯಿದೆಯೇ ಎಂದು ಕೇಳಿದ್ದು ರಾಘಣ್ಣ ಎಲ್ಲೋ ಒಂದು ಕಡೆ ಕರುಳು ಚುರುಕ್ ಅಂದಿದೆ. ಆದರೆ ಇದು ಸಿನಿಮಾ ಜಗತ್ತು. ವಯಕ್ತಿಕ ಜೀವನ ಅಡ್ಡ ಬರಬಾರದು ಎಂದು ಅವರು ಸಂಕಲ್ಪ ಮಾಡಿಕೊಂಡಿದ್ದರು. ಚಿತ್ರೀಕರಣಕ್ಕೆ ಹೋಗುವ ಪ್ರತಿ ದಿನ ರಾಘಣ್ಣ ದೇವರಲ್ಲಿ ಪ್ರಾರ್ಥನೆ ಮಾಡುತ್ತಾ ಇದ್ದದ್ದು ಏನು ಗೊತ್ತ ದೇವರೇ ಇವತ್ತು ನನ್ನಿಂದ ಯಾರಿಗೂ ತೊಂದರೆ ಆಗಬಾರದು ಅಂತ’. 

Last Updated : Mar 6, 2019, 4:49 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.