ETV Bharat / sitara

ನಟ ಕಿಶೋರ್ ಇದೀಗ ನಿರ್ಮಾಪಕ.. ಕನ್ನಡ, ತಮಿಳು ಭಾಷೆಗಳಲ್ಲಿ ಚಿತ್ರ ನಿರ್ಮಾಣ - Lakshmi Ramakrishnan

ತಮಿಳು, ತೆಲುಗು, ಮಲಯಾಳಂ ಸಿನಿಮಾಗಳಲ್ಲಿ ಕೂಡಾ ತಮ್ಮನ್ನು ಗುರುತಿಸಿಕೊಂಡಿರುವ ನಟ ಕಿಶೋರ್ ಇದೀಗ ಸಿನಿಮಾವೊಂದನ್ನು ನಿರ್ಮಿಸಲು ಹೊರಟಿದ್ದಾರೆ. ಕನ್ನಡ ಹಾಗೂ ತಮಿಳು ಎರಡೂ ಭಾಷೆಗಳಲ್ಲಿ ತಯಾರಾಗುತ್ತಿರುವ ಸಿನಿಮಾವೊಂದಕ್ಕೆ ಅವರು ಬಂಡವಾಳ ಹೂಡುತ್ತಿದ್ದಾರೆ.

ಕಿಶೋರ್
author img

By

Published : Aug 16, 2019, 6:02 PM IST

ನಟ ಕಿಶೋರ್ ಕನ್ನಡ ಮಾತ್ರವಲ್ಲ ತೆಲುಗು, ತಮಿಳು ಚಿತ್ರರಂಗದಲ್ಲೂ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಈವರೆಗೂ ಆ್ಯಕ್ಟರ್​ ಆಗಿದ್ದ ಕಿಶೋರ್ ಇದೀಗ ನಿರ್ಮಾಪಕ ಕೂಡ ಆಗಿದ್ದಾರೆ. ಕಿಶೋರ್​ ಚಿತ್ರ ನಿರ್ಮಾಣದಲ್ಲೂ ಆಸಕ್ತಿ ತೋರಿದ್ದು, ಕನ್ನಡ ಹಾಗೂ ತಮಿಳು ಎರಡೂ ಭಾಷೆಗಳಲ್ಲಿ ಸಿನಿಮಾವೊಂದನ್ನು ನಿರ್ಮಿಸಲು ಹೊರಟಿದ್ದಾರೆ.

ತಮಿಳಿನ ಪೊಲ್ಲಾದವನ್, ವಿಸಾರನೈ, ವಡೈ ಚೆನ್ನೈ, ಜಯಮ್ ಕೊಂಡಾನ್, ವೆನ್ನಿಲ ಕಬಡ್ಡಿ ಕುಳು, ಹರಿದಾಸ್ ಸೇರಿ ಬಹಳಷ್ಟು ತಮಿಳು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಇತ್ತೀಚೆಗೆ ಲಕ್ಷ್ಮಿ ರಾಮಕೃಷ್ಣನ್​​​​​​ ನಿರ್ದೇಶನದ 'ಹೌಸ್ ಓನರ್' ಸಿನಿಮಾದಲ್ಲೂ ಅವರು ಆ್ಯಕ್ಟ್ ಮಾಡಿದ್ದರು. ಇದೀಗ ಅವರು ನಿರ್ಮಾಪಕರಾಗಿಯೂ ಭಡ್ತಿ ಪಡೆದಿದ್ದಾರೆ. ಈ ಸಿನಿಮಾಗೆ ತಮಿಳಿನಲ್ಲಿ 'ಕದವು' ಹಾಗೂ ಕನ್ನಡದಲ್ಲಿ 'ಕದ' ಎಂದು ಹೆಸರಿಡಲಾಗಿದೆ. ಅನುಪಮ ಕುಮಾರ್​ ಎಂಬುವರು ಈ ಸಿನಿಮಾಗೆ ಸಹ ನಿರ್ಮಾಪಕರಾಗಿದ್ದಾರೆ. ವೆನ್ನಿಲ ಕಬಡ್ಡಿ ಕುಳು 2 ಸಿನಿಮಾದಲ್ಲಿ ಕಿಶೋರ್ ಹಾಗೂ ಅನುಪಮ ಕುಮಾರ್​ ಒಟ್ಟಿಗೆ ನಟಿಸಿದ್ದರು. ಇದೀಗ 'ಕದವು' ಸಿನಿಮಾದಲ್ಲಿ ಕೂಡಾ ಇಬ್ಬರೂ ಜೊತೆಯಾಗಿ ನಟಿಸುತ್ತಿದ್ದಾರೆ. ನಟ, ನಟಿಯರು ಹಾಗೂ ಸಿನಿಮಾ ಕುರಿತ ಇನ್ನಿತರ ಮಾಹಿತಿ ಶೀಘ್ರವೇ ಹೊರಬೀಳಲಿದೆ.

Intro:Body:

producer kishore

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.