ಕನ್ನಡದ ಜೊತೆಗೆ ಭಾರತೀಯ ಚಿತ್ರರಂಗದಲ್ಲಿ ಸ್ಟಾರ್ ನಟನಾಗಿ ಗುರುತಿಸಿಕೊಂಡಿರುವವರು ನಟ ಕಿಚ್ಚ ಸುದೀಪ್. ಕಿಚ್ಚನ ಸ್ಟೈಲ್, ನಟನಾ ಪ್ರತಿಭೆಗೆ ಕೋಟ್ಯಂತರ ಅಭಿಮಾನಿಗಳು ಫಿದಾ ಆಗಿದ್ದಾರೆ. ಮಧುಗಿರಿಯ ಪುಟ್ಟ ಬಾಲಕ (7) ಕ್ಯಾನ್ಸರ್‌ನಿಂದ ಬಳಲುತ್ತಿದ್ದು ಕಿಚ್ಚನ ದೊಡ್ಡ ಅಭಿಮಾನಿಯಂತೆ.
ಧನುಷ್ ಎಂಬ ಬಾಲಕನಿಗೆ ಸುದೀಪ್ ಅಂದರೆ ಪಂಚಪ್ರಾಣ. ಅದರಲ್ಲೂ ಸುದೀಪ್ ನಟನೆಯ ಹಾಡುಗಳಂದ್ರೆ ತುಂಬಾ ಇಷ್ಟವಂತೆ. ವೈದ್ಯರು ಹೇಳುವ ಪ್ರಕಾರ, ಕ್ಯಾನ್ಸರ್‌ನಿಂದ ಬಳಲುತ್ತಿರುವ ಧನುಷ್ ಜಾಸ್ತಿ ದಿನ ಬದುಕಿರಲ್ಲ. ಹಾಗಾಗಿ ಸುದೀಪ್ ಅವರನ್ನು ಭೇಟಿ ಮಾಡಿಸುವ ಮಗುವಿನ ಕೊನೆಯ ಆಸೆಯನ್ನು ಈಡೇರಿಸಬೇಕೆಂದು ಆತನ ಅಮ್ಮ ಕೇಳಿಕೊಂಡಿದ್ದಾರೆ.
ಜನ ಸೇವಾ ಟ್ರಸ್ಟ್ ವೃದ್ದಾಶ್ರಮ ಅವರ ಸಹಾಯದಿಂದ ಸುದೀಪ್ ಚಾರಿಟೇಬಲ್ ಟ್ರಸ್ಟ್ ಸದಸ್ಯ ಕಿಟ್ಟಿ ಅವರ ಮೂಲಕ ಸುದೀಪ್ ಅವರೊಂದಿಗೆ ವಿಡಿಯೋ ಕಾಲ್ ಮೂಲಕ ಮಾತನಾಡಿಸುವ ಕೆಲಸವಾಗಿದೆ. ಸುದೀಪ್ ಈ ಪುಟಾಣಿ ಅಭಿಮಾನಿಯ ಕೊನೆಯ ಆಸೆ ಈಡೇರಿಸುವ ಜೊತೆಗೆ, ಈ ಕೊರೊನಾ ಕಡಿಮೆಯಾದ ಮೇಲೆ ನೇರವಾಗಿ ಭೇಟಿ ಮಾಡುವುದಾಗಿ ಭರವಸೆ ಕೊಟ್ಟರು. ಇದೇ ವೇಳೆ ಎಲ್ಲರೂ ಹೆಲ್ಮೆಟ್ ಧರಿಸಿಯೇ ದ್ವಿಚಕ್ರ ವಾಹನಗಳಲ್ಲಿ ಸಂಚರಿಸುವಂತೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಜೂನ್ 21ರಿಂದ ಮತ್ತೆ ಆರಂಭವಾಗಲಿದ್ಯಾ ಬಿಗ್ ಬಾಸ್?