ಚಂದನವನದ ದೂದ್ ಪೇಡಾ ದಿಗಂತ್ ಯುವರತ್ನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ಅವರು ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಜತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಯುವರತ್ನದಲ್ಲಿ ವಿಶೇಷ ಪಾತ್ರದಲ್ಲಿ ದಿಗಂತ್ ಕಾಣಿಸಿಕೊಳ್ಳಲಿದ್ದಾರೆ ಎಂದು ನಿರ್ದೇಶಕ ಸಂತೋಷ ಆನಂದ್ ರಾಮ್ ಹೇಳಿಕೊಂಡಿದ್ದಾರೆ. ಈ ಚಿತ್ರಕ್ಕೆ ಟಾಲಿವುಡ್ನ ಥಮನ್ ಸಂಗೀತ ನಿರ್ದೇಶನ ಮಾಡಲಿರುವ ಸುದ್ದಿಯನ್ನು ನಿನ್ನೆಯಷ್ಟೆ ಚಿತ್ರತಂಡ ರಿವೀಲ್ ಮಾಡಿದ್ದು, ಈಗ ದಿಗಂತ್ ಅವರನ್ನು ಚಿತ್ರತಂಡಕ್ಕೆ ಬರಮಾಡಿಕೊಂಡಿರುವ ಸಂಭ್ರಮವನ್ನು ಅಭಿಮಾನಿಗಳಿಗೆ ತಿಳಿಸಿದೆ.
-
Welcome Brother To Team #YuvaRathnaa ! Diganth’s character will be special 🙌 you guys will experience it ✌️ @diganthmanchale @PuneethRajkumar @hombalefilms @VKiragandur @Karthik1423 pic.twitter.com/LHx5BSUE3B
— Santhosh Ananddram (@SanthoshAnand15) July 16, 2019 " class="align-text-top noRightClick twitterSection" data="
">Welcome Brother To Team #YuvaRathnaa ! Diganth’s character will be special 🙌 you guys will experience it ✌️ @diganthmanchale @PuneethRajkumar @hombalefilms @VKiragandur @Karthik1423 pic.twitter.com/LHx5BSUE3B
— Santhosh Ananddram (@SanthoshAnand15) July 16, 2019Welcome Brother To Team #YuvaRathnaa ! Diganth’s character will be special 🙌 you guys will experience it ✌️ @diganthmanchale @PuneethRajkumar @hombalefilms @VKiragandur @Karthik1423 pic.twitter.com/LHx5BSUE3B
— Santhosh Ananddram (@SanthoshAnand15) July 16, 2019
ಈಗಾಗಲೇ ಭರದಿಂದ ಸಿನಿಮಾ ಶೂಟಿಂಗ್ ನಡೆಯುತ್ತಿದೆ. ಮೈಸೂರು ಹಾಗೂ ಧಾರವಾಡದಲ್ಲಿ ಪುನೀತ್ ಅವರ ಹೊಸ ಚಿತ್ರದ ಚಿತ್ರೀಕರಣ ನಡೆದಿದೆ. ಮುಂದಿನ ಭಾಗದ ಶೂಟಿಂಗ್ಗೆ ಚಿತ್ರತಂಡ ಅಣಿಯಾಗುತ್ತಿದೆ. ಈ ನಡುವೆ ಚಿತ್ರತಂಡಕ್ಕೆ ದಿಗಂತ್ ಆಗಮಿಸಿರುವುದು ಯುವರತ್ನ ಚಿತ್ರದ ಮೇಲಿನ ನಿರೀಕ್ಷೆ ದುಪ್ಪಟ್ಟು ಮಾಡಿದೆ.