ಈಗಾಗಲೇ ವಿಭಿನ್ನ ಲುಕ್ಗಳ ಮೂಲಕ ಅಭಿಮಾನಿಗಳಿಗೆ ಇಂಪ್ರೆಸ್ ಮಾಡಿರುವ ಆ್ಯಕ್ಷನ್ ಪ್ರಿನ್ಸ್ ಧೃವ ಸರ್ಜಾ, ಈಗ ದೊಡ್ಡ ಸರ್ಪ್ರೈಸ್ ನೀಡಿದ್ದಾರೆ. ಚಿತ್ರದ ಕೊನೆಯ ಹಂತದ ಶೂಟಿಂಗ್ ಪರಿಣಾಮಕಾರಿಯಾಗಿ ಮೂಡಿ ಬರಲು ಶ್ರಮಿಸುತ್ತಿರುವ ಚಿತ್ರತಂಡ, ಇದಕ್ಕಾಗಿ ಹಾಲಿವುಡ್ ದೈತ್ಯ ಮನುಷ್ಯನನ್ನು ಕರೆತಂದಿದೆ.
ಚಿತ್ರದ ಕ್ಲೈಮ್ಯಾಕ್ಸ್ಗೆ ಭರ್ಜರಿ ವರ್ಕೌಟ್ ಮಾಡ್ತಿರೋ ಬಹದ್ದೂರ್ ಹುಡುಗ ಧೃವ ಅವರಿಗೆ ಮಾಜಿ wwe ಆಟಗಾರ ಮೋರ್ಗನ್ ಆಸ್ಟೆ ತರಬೇತು ನೀಡಿದ್ದಾರೆ. ಬರೋಬ್ಬರಿ 49 ದಿನಗಳ ಕಾಲ ಹ್ಯಾಟ್ರಿಕ್ ಪ್ರಿನ್ಸ್ ಸರ್ಜಾಗೆ ಟ್ರೈನಪ್ ಮಾಡಿದ್ದಾರೆ ಮೋರ್ಗನ್.
ಸದ್ಯ ಹೈದರಾಬಾದ್ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಕ್ಲೈಮ್ಯಾಕ್ಸ್ ಶೂಟಿಂಗ್ ನಡೆಯುತ್ತಿದ್ದು, ಮೋರ್ಗನ್ ಜತೆ ಧ್ರುವ ಸರ್ಜಾ ಖುಷಿ ಹಂಚಿಕೊಂಡಿದ್ದಾರೆ. ಮೋರ್ಗನ್ ಬಾಯಲ್ಲಿ ಜೈಶ್ರೀರಾಮ್, ಜೈ ಆಂಜನೇಯ ಎಂದು ಹೇಳಿಸಿದ್ದಾರೆ. ಅಲ್ಲದೆ ಪೊಗರು ಟೀಂನಿಂದ ಇನ್ನಷ್ಟು ಸರ್ಪ್ರೈಸ್ ಸುದ್ದಿ ಕೊಡ್ತೀನಿ ಎಂದು ಹೇಳಿದ್ದಾರೆ ಪೊಗರಿನ ಹುಡುಗ ಧೃವ.