ಮೊನ್ನೆಯಷ್ಟೆ ರಾಜ್ಯದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ದರ್ಶನ್ ವಿರುದ್ಧ ವಾಕ್ಸಮರ ನಡೆಸಿದ್ದರು. ದಚ್ಚು ಅವರ ಚಾಲೆಂಜಿಂಗ್ ಸ್ಟಾರ್ ಹಾಗೂ ಡಿಬಾಸ್ ಎನ್ನುವ ಬಿರುದುಗಳನ್ನು ಹೀಯಾಳಿಸಿ ವ್ಯಂಗ್ಯವಾಡಿದ್ದರು.
ಎಚ್ಡಿಕೆ ಅವರ ಈ ಮಾತುಗಳಿಗೆ ಡಿಬಾಸ್ ಅಭಿಮಾನಿಗಳು ಕೆಂಡಾಮಂಡಲರಾಗಿ, ಸಿಎಂ ವಿರುದ್ಧ ಟೀಕೆಗಳ ಸುರಿಮಳೆಯನ್ನೇ ಹರಿಸಿದ್ದರು. ಸೋಷಿಯಲ್ ಮೀಡಿಯಾಗಳಲ್ಲಿ ಸಿಎಂ ಅವರನ್ನು ಸಖತ್ ಅಣಕಿಸುವ ಟ್ರೋಲ್ ವಿಡಿಯೋ ವೈರಲ್ ಆಗಿದ್ದವು.
ಈ ಚುನಾವಣೆ ಸಮಯದಲ್ಲಿ ಆಪಾದನೆಗಳನ್ನು ಮಾಡುವುದು ಸರ್ವೇ ಸಾಮಾನ್ಯ. ಇದಕ್ಕೆಲ್ಲ ನಾನು ಬೇಜಾರು, ಕೋಪ ಏನು ಮಾಡ್ಕೊಳಲ್ಲ ಅಂತ ಮೊದಲೇ ಹೇಳಿದ್ದೇನೆ, ಅದೇ ರೀತಿ ನನ್ನ ಪ್ರೀತಿಯ ಅಭಿಮಾನಿಗಳು ಸಹ ಏನೇ ಹೇಳಿದರೂ ಅದರ ವಿರುದ್ಧ ಪೋಸ್ಟ್ ಮಾಡುವುದಾಗಲಿ pic.twitter.com/ejGKVQclu6
— Darshan Thoogudeepa (@dasadarshan) March 27, 2019 " class="align-text-top noRightClick twitterSection" data="
">ಈ ಚುನಾವಣೆ ಸಮಯದಲ್ಲಿ ಆಪಾದನೆಗಳನ್ನು ಮಾಡುವುದು ಸರ್ವೇ ಸಾಮಾನ್ಯ. ಇದಕ್ಕೆಲ್ಲ ನಾನು ಬೇಜಾರು, ಕೋಪ ಏನು ಮಾಡ್ಕೊಳಲ್ಲ ಅಂತ ಮೊದಲೇ ಹೇಳಿದ್ದೇನೆ, ಅದೇ ರೀತಿ ನನ್ನ ಪ್ರೀತಿಯ ಅಭಿಮಾನಿಗಳು ಸಹ ಏನೇ ಹೇಳಿದರೂ ಅದರ ವಿರುದ್ಧ ಪೋಸ್ಟ್ ಮಾಡುವುದಾಗಲಿ pic.twitter.com/ejGKVQclu6
— Darshan Thoogudeepa (@dasadarshan) March 27, 2019ಈ ಚುನಾವಣೆ ಸಮಯದಲ್ಲಿ ಆಪಾದನೆಗಳನ್ನು ಮಾಡುವುದು ಸರ್ವೇ ಸಾಮಾನ್ಯ. ಇದಕ್ಕೆಲ್ಲ ನಾನು ಬೇಜಾರು, ಕೋಪ ಏನು ಮಾಡ್ಕೊಳಲ್ಲ ಅಂತ ಮೊದಲೇ ಹೇಳಿದ್ದೇನೆ, ಅದೇ ರೀತಿ ನನ್ನ ಪ್ರೀತಿಯ ಅಭಿಮಾನಿಗಳು ಸಹ ಏನೇ ಹೇಳಿದರೂ ಅದರ ವಿರುದ್ಧ ಪೋಸ್ಟ್ ಮಾಡುವುದಾಗಲಿ pic.twitter.com/ejGKVQclu6
— Darshan Thoogudeepa (@dasadarshan) March 27, 2019
ಇದೀಗ ದಚ್ಚು ತನ್ನ ಅಭಿಮಾನಿಗಳಿಗೆ ಶಾಂತಿ ಮಂತ್ರ ಬೋಧಿಸಿದ್ದಾರೆ. 'ಈ ಚುನಾವಣೆ ಸಮಯದಲ್ಲಿ ಆಪಾದನೆಗಳನ್ನು ಮಾಡುವುದು ಸರ್ವೇ ಸಾಮಾನ್ಯ. ಇದಕ್ಕೆಲ್ಲ ನಾನು ಬೇಜಾರು, ಕೋಪ ಏನು ಮಾಡ್ಕೊಳ್ಳಲ್ಲ ಅಂತ ಮೊದಲೇ ಹೇಳಿದ್ದೇನೆ, ಅದೇ ರೀತಿ ನನ್ನ ಪ್ರೀತಿಯ ಅಭಿಮಾನಿಗಳು ಸಹ ಏನೇ ಹೇಳಿದರೂ ಅದರ ವಿರುದ್ಧ ಪೋಸ್ಟ್, ವಿಡಿಯೋಗಳನ್ನ ಮಾಡುವ ಗೋಜಿಗೆ ಹೋಗಬೇಡಿ. ಅವೆಲ್ಲದಕ್ಕೂ ಕಿವಿಗೊಡದೆ, ಶಾಂತಿ ಕಾಪಾಡಿಕೊಂಡು ಅರಾಮಾಗಿರಬೇಕಾಗಿ ನಿಮ್ಮಲ್ಲಿ ದಾಸನ ಕಳಕಳಿ' ಎಂದು ಟ್ವಿಟರ್ನಲ್ಲಿ ಕೇಳಿಕೊಂಡಿದ್ದಾರೆ.