ಬೆಂಗಳೂರು: ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾಮಿಡಿ ಕಿಲಾಡಿಗಳು ಸೆಟ್ ಭೇಟಿ ನೀಡಿದ್ದು, ಇದೀಗ ಆ ಕಾರ್ಯಕ್ರಮ ಪ್ರಸಾರವಾಗುವ ದಿನಾಂಕ ಪ್ರಕಟವಾಗಿದೆ.
ಮುಂದಿನ ವಾರ ಅಂದರೆ ಜನವರಿ 11 ರಂದು ಸಂಜೆ 7.30 ಕ್ಕೆ ಕಾಮಿಡಿ ಕಿಲಾಡಿಗಳು, ವೇದಿಕೆಯಲ್ಲಿ ದರ್ಶನ್ ಪಾಲ್ಗೊಂಡ ಎಪಿಸೋಡ್ ಪ್ರಸಾರವಾಗಲಿದೆ. ಈಗಾಗಲೇ ಜನವರಿ 12 ರಂದು ಅಂದರೆ ಭಾನುವಾರದಂದು ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ಪ್ರಸಾರ ಮಾಡುತ್ತಿರುವುದಾಗಿ ಜೀ ಕನ್ನಡ ಪ್ರಕಟಿಸಿದೆ. ಹೀಗಾಗಿ ಶನಿವಾರ ದರ್ಶನ್, ಭಾನುವಾರ ಸುದೀಪ್ ನಿಮ್ಮ ಮನೆ ಮನೆಗೆ ಬರಲಿದ್ದಾರೆ. ಕುರುಕ್ಷೇತ್ರ ಚಿತ್ರ ಜೀ ಕನ್ನಡದಲ್ಲಿ ಪ್ರಸಾರವಾಗಿ ದಾಖಲೆಯ 19.2 ಟಿಆರ್ ಪಿ ಅಂಕಗಳನ್ನು ಪಡೆದುಕೊಂಡಿದ್ದಕ್ಕೆ ಕೇಕ್ ಕಟ್ ಮಾಡಿ ಸಂಭ್ರಮಿಸಲಾಯಿತು.