ನ್ಯಾಷನಲ್ ಕ್ರಶ್, ಬಹುಭಾಷಾ ತಾರೆ ರಶ್ಮಿಕಾ ಮಂದಣ್ಣ ಸದ್ಯ ಚಿತ್ರರಂಗದ ರೇಸ್ ಕುದುರೆ. ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಬಹುಬೇಡಿಕೆಯ ನಟಿ. ಚಿತ್ರರಂಗದಲ್ಲಿ ಆಕ್ಟಿವ್ ಆಗಿರುವ ರಶ್ಮಿಕಾ ಸೋಶಿಯಲ್ ಮೀಡಿಯಾದಲ್ಲೂ ಸಿಕ್ಕಾಪಟ್ಟೆ ಆ್ಯಕ್ಟಿವ್ ಆಗಿರ್ತಾರೆ.
ಇತ್ತೀಚೆಗೆ ಫೋಟೋ ಒಂದನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿರುವ ರಶ್ಮಿಕಾ, ಮಹಿಳೆಯರ ಪರ ಬ್ಯಾಟ್ ಬೀಸಿದ್ದಾರೆ. 'ಯಾವ ಹುಡುಗಿ ದೊಡ್ಡ ಕೆಲಸಗಳನ್ನು ಮಾಡಲು ಹೊರಟಿರುವಳೋ, ಆಕೆಗೆ ಸಣ್ಣ ವಿಷಯಗಳು ಯಾವುದೂ ಹತ್ತಿರ ಸುಳಿಯುವುದಿಲ್ಲ. ಇದು ಸಂಪೂರ್ಣವಾಗಿ ನನಗೂ ಅನ್ವಯಿಸುತ್ತದೆ' ಎಂದು ಯುವಜನರಿಗೆ ಮೆಸೇಜ್ ನೀಡಿದ್ದಾಳೆ.
ಇನ್ನು ಕಡು ನೇರಳೆ ಬಣ್ಣದ ಬಟ್ಟೆಯಲ್ಲಿ ಕಂಗೊಳಿಸುವ, ಆಕೆ ಹಾಟ್ ಆಗಿಯೂ ಕಾಣುತ್ತಾಳೆ. ಈ ಪೋಸ್ಟ್ಗೆ ಸುಮಾರು 3 ಮಿಲಿಯನ್ ಮಂದಿ ಲೈಕ್ ಮಾಡಿದ್ದು, ಸಾಕಷ್ಟು ಕಾಮೆಂಟ್ಗಳೂ ಬಂದಿವೆ.