'ಅಮರ್' ನಂತರ ಅಭಿಷೇಕ್ ಅಂಬರೀಶ್ ಎರಡನೇ ಸಿನಿಮಾಗೆ ರೆಡಿಯಾಗುತ್ತಿದ್ದಾರೆ. ಈಗಾಗಲೇ ಅವರು ಎರಡನೇ ಚಿತ್ರಕ್ಕೆ ಸಹಿ ಹಾಕಿದ್ದು, ಈ ಚಿತ್ರವನ್ನು ದಾವಣಗೆರೆ ಮೂಲದ ಹೊಸ ನಿರ್ಮಾಪಕರೊಬ್ಬರು ನಿರ್ಮಾಣ ಮಾಡುತ್ತಿದ್ದಾರೆ. ಹಾಗೂ 'ಸಂತು ಸ್ಟ್ರೈಟ್ ಫಾರ್ವರ್ಡ್' ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದ ಮಹೇಶ್ ರಾವ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಅಭಿ ಎರಡನೇ ಸಿನಿಮಾಗೆ ಸೈನ್ ಮಾಡಿರುವುದನ್ನು ಸ್ವತಃ ಸುಮಲತಾ ಅಂಬರೀಶ್ ಕನ್ಫರ್ಮ್ ಮಾಡಿದ್ದಾರೆ.
ಚಿತ್ರಕ್ಕಾಗಿ ಕಲಾವಿದರ ಹುಡುಕಾಟ ನಡೆಯುತ್ತಿದ್ದು, ಚಿತ್ರತಂಡ ಶೀಘ್ರದಲ್ಲೇ ಚಿತ್ರದ ಬಗ್ಗೆ ಅಧಿಕೃತವಾಗಿ ಅನೌನ್ಸ್ ಮಾಡಲಿದೆ ಎನ್ನಲಾಗಿದೆ. ಅಭಿಷೇಕ್ 4-5 ಸಿನಿಮಾಗಳಲ್ಲಿ ನಟಿಸಿದ ನಂತರ ಅವರೊಂದಿಗೆ ನಟಿಸುವುದಾಗಿ ಸುಮಲತಾ ಕೂಡಾ ಹೇಳಿದ್ದಾರೆ.