ಬೆಂಗಳೂರು: ಅಮರ್ ಚಿತ್ರದ ಹಿಟ್ ನಂತರ ಅಂಬಿ ಪುತ್ರ ಯಂಗ್ ರೆಬೆಲ್ ಅಭಿಷೇಕ್ ಏಕೆ ಮತ್ತೊಂದು ಚಿತ್ರಕ್ಕೆ ಕೈ ಹಾಕಲಿಲ್ಲ ಎಂಬ ಕುತೂಹಲಕ್ಕೆ ಸುಮಲತಾ ಅಂಬರೀಶ್ ಕಾರಣ ನಿಡಿದ್ದಾರೆ.
ಯಾವಾಗ ಎರಡನೇ ಚಿತ್ರ ಶುರುವಾಗುತ್ತೋ ಅಂತ ಕಾಯ್ತಿದ್ದ ಜೂನಿಯರ್ ಜಲೀಲನ ಅಭಿಮಾನಿಗಳಿಗೆ ಸುಮಲತಾ ಅಂಬರೀಶ್ ನಿರಾಶೆ ಸುದ್ದಿಯೊಂದನ್ನು ಹೇಳಿದ್ದಾರೆ.
ಅಂಬರೀಶ್ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಅಭಿಷೇಕ್ ಎರಡನೇ ಚಿತ್ರದ ಬಗ್ಗೆ ಮಾತನಾಡಿದ ಸಂಸದೆ ಸುಮಲತಾ, ಕಳೆದ ಆರು ತಿಂಗಳಿನಿಂದ ನಾನು ಬ್ಯುಸಿ ಇದ್ದೆ. ಈ ಕಾರಣದಿಂದ ಅಭಿ ಕಡೆ ಗಮನ ಹರಿಸಲು ಸಾಧ್ಯವಾಗಲಿಲ್ಲ. ಅಭಿ ನನಗಾಗಿ ಕಾಯ್ತಿದ್ದಾನೆ. ನಾನು ಒಂದಷ್ಟು ಕಥೆ ಕೇಳಿ ಯಾವ ಕಥೆ ಫೈನಲ್ ಮಾಡ್ತಿನೋ ಅಂತ ಎದುರು ನೋಡ್ತಿದ್ದಾನೆ. ನನ್ನ ತಪ್ಪಿನಿಂದ ಅಭಿ ಎರಡನೇ ಚಿತ್ರ ಲೇಟಾಗಿದೆ. ನಾನು ಅಭಿಗೆ ಸಮಯ ಮೀಸಲಿಡಲು ಸಾಧ್ಯವಾಗಲಿಲ್ಲ. ಅಲ್ಲದೆ ಈಗಲೂ ಸೆಷನ್ ಇರುವ ಕಾರಣ ನಾನು ಬ್ಯುಸಿ ಇದ್ದೇನೆ. ಅದಕ್ಕಾಗಿ ಅಭಿ ಈ ವರ್ಷ ಸಿನಿಮಾ ಮಾಡೋದು ಬೇಡ, ಮುಂದಿನ ವರ್ಷ ಹೊಸ ಚಿತ್ರ ಶುರು ಮಾಡಲಿ ಅಂದುಕೊಂಡಿದ್ದೇವೆ ಎಂದು ಸುಮಲತಾ ಅಂಬರೀಶ್ ಹೇಳಿದ್ರು.