ETV Bharat / sitara

ಛಾಯಾಗ್ರಾಹಕರ ಸಂಘಕ್ಕೆ 35 ವರ್ಷ...ಜೆ.ಜಿ. ಕೃಷ್ಣ ಅವರಿಂದ ವಿಶೇಷ ಕಾರ್ಯಕ್ರಮ - ಫೋಟೋಗ್ರಾಫರ್ ಕೃಷ್ಣರಿಂದ ವಿಶೇಷ ಕಾರ್ಯಕ್ರಮ

ಛಾಯಾಗ್ರಾಹಕರ ಸಂಘ 35 ವಸಂತಗಳನ್ನು ಪೂರೈಸಿದೆ. ಆದರೆ, ಯಾವುದೇ ನೆನಪಿನಲ್ಲಿ ಉಳಿಯುವ ಕೆಲಸ ಮಾಡಿಲ್ಲ ಎಂಬ ಬೇಸರದಿಂದ ಸಂಘದ ಅಧ್ಯಕ್ಷ ಜೆ.ಜಿ. ಕೃಷ್ಣ ಒಂದು ಯೋಜನೆ ಸಿದ್ದ ಪಡಿಸಿದ್ದಾರೆ.

J.G. Krishna
ಜೆ.ಜಿ. ಕೃಷ್ಣ
author img

By

Published : Jan 3, 2020, 5:37 PM IST

ಸಿನಿಮಾ ಕ್ಷೇತ್ರ ಎಂದರೆ ಆಡಿಯೋ ಬಿಡುಗಡೆ, ಟ್ರೇಲರ್ ಬಿಡುಗಡೆ, ಮುಹೂರ್ತ, ಸಿನಿಮಾ ಪ್ರೀ ರಿಲೀಸ್ ಕಾರ್ಯಕ್ರಮ ಎಂದೆಲ್ಲ ಸಾಕಷ್ಟು ಕಾರ್ಯಕ್ರಮಗಳು ಇರುತ್ತವೆ. ಇದರಲ್ಲಿ ಕೆಲವೊಂದು ಕಾರ್ಯಕ್ರಮಗಳು ಮಾತ್ರ ಕೊನೆಯವರೆಗೂ ನೆನಪಿನಲ್ಲಿ ಉಳಿಯುತ್ತವೆ. ಇಂತದ್ದೇ ಒಂದು ಕಾರ್ಯಕ್ರಮವನ್ನು ಕರ್ನಾಟಕ ಚಲನಚಿತ್ರ ಛಾಯಾಗ್ರಾಹಕರ ಸಂಘ ಏರ್ಪಾಟು ಮಾಡಿದೆ.

Tara Anuradha
ತಾರಾ ಅನುರಾಧ

ಚಿತ್ರರಂಗದಲ್ಲಿ ಶೂಟಿಂಗ್ ವೇಳೆ ಲೋಟ ತೊಳೆಯುವ, ಕಾರು ಓಡಿಸುವ, ಊಟ ಕೊಡುವ, ಹೀಗೆ ಅನೇಕ ಸ್ತರಗಳಲ್ಲಿ ಕೆಲಸ ಮಾಡುವ ವ್ಯಕ್ತಿಗಳನ್ನು ನೆನಪಿಸಿಕೊಂಡು ಅವರಿಗೆ ಸನ್ಮಾನ ಮಾಡುವ ಕೆಲಸಕ್ಕೆ ಜೆ.ಜಿ. ಕೃಷ್ಣ ಅವರ ತಂಡ ಮುಂದಾಗಿದೆ. ಇದುವರೆಗೂ ಯಾರ ಗಮನಕ್ಕೂ ಇಂತಹ ವ್ಯಕ್ತಿಗಳು ನೆನಪಿಗೆ ಬಂದಿಲ್ಲ. ಇವರೆಲ್ಲ ತೆರೆಮರೆಯಲ್ಲೇ ಇದ್ದು ಬಿಡುತ್ತಾರೆ. ಇನ್ನು ಈ ಕಾರ್ಯಕ್ರಮಕ್ಕೆ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಸಾಥ್ ನೀಡಿದ್ದು, ಈ ಕಾರ್ಯಕ್ರಮಕ್ಕೆ ನಾನು ಬಂದೇ ಬರುತ್ತೇನೆ ಎಂದು ಹೇಳಿದ್ದಾರೆ. ಇವರೊಂದಿಗೆ ಸುದೀಪ್, ದರ್ಶನ್, ಶಿವರಾಜ್​​ಕುಮಾರ್, ತಾರಾ, ಉಮಾಶ್ರೀ ಹಾಗೂ ಇನ್ನಿತರರು ಹಾಜರಿರಲಿದ್ದಾರೆ.

Puneet rajkumar
ಪುನೀತ್ ರಾಜ್​​ಕುಮಾರ್

ಛಾಯಾಗ್ರಾಹಕರ ಸಂಘ ಇದುವರೆಗೂ 35 ವಸಂತಗಳನ್ನು ಕಳೆದಿದೆ. ಆದರೆ, ಯಾವುದೇ ನೆನಪಿನಲ್ಲಿ ಉಳಿಯುವ ಕೆಲಸ ಮಾಡಿಲ್ಲ ಎಂಬ ಬೇಸರದಿಂದ ಸಂಘದ ಅಧ್ಯಕ್ಷ ಜೆ.ಜಿ. ಕೃಷ್ಣ ಒಂದು ಯೋಜನೆ ಸಿದ್ದ ಪಡಿಸಿದ್ದಾರೆ. ನಗರದ ಚೌಡಯ್ಯ ಸ್ಮಾರಕ ಭವನದಲ್ಲಿ ಈ ಕಾರ್ಯಕ್ರಮ ನಡೆಸಲು ಪ್ಲ್ಯಾನ್ ಮಾಡಲಾಗಿದೆ. ಒಂದು ಸಿನಿಮಾ ತಯಾರಾಗಬೇಕೆಂದರೆ ಹಲವಾರು ಕೈಗಳು ಕೆಲಸ ಮಾಡುತ್ತದೆ. ಆದರೆ ಕಾಣಿಸದೆ ಇರುವ ವ್ಯಕ್ತಿಗಳನ್ನು ಗುರುತಿಸಿ ಅಂತವರಿಗೆ ಸನ್ಮಾನ ಹಾಗೂ ಅವರ ಪತ್ನಿಯರಿಗೆ ಸಂಪ್ರದಾಯದಂತೆ ಬಾಗಿನ ಕೊಡುವುದು ಹಾಗೂ ಇನ್ನಿತರ ಗೌರವ ಸಲ್ಲಿಸುವ ಕೆಲಸವನ್ನು ಈ ಕಾರ್ಯಕ್ರಮದಲ್ಲಿ ಮಾಡಲಾಗುವುದು. ನಾನಾ ವಿಭಾಗಗಳಲ್ಲಿ ಕೆಲಸ ಮಾಡುವ ಸುಮಾರು 108 ವ್ಯಕ್ತಿಗಳನ್ನು ಗುರುತಿಸಿ ಆ ದಿನದಂದು ಸನ್ಮಾನ ಮಾಡಲಾಗುವುದು. ‘ಸಿನಿ 35’ ಎಂಬ ಹೆಸರಿನಲ್ಲಿ ಈ ಕಾರ್ಯಕ್ರಮ ಜರುಗಲಿದೆ. ಛಾಯಾಗ್ರಾಹಕರ ಸಂಘಕ್ಕೆ 35 ವರ್ಷ ತುಂಬಿದ ಕಾರಣ ಈ ಕಾರ್ಯಕ್ರಮವನ್ನು ಏರ್ಪಡಿಸಲಾಗುತ್ತಿದೆ. ಈ ಕಾರ್ಯಕ್ರಮದ ಬಗ್ಗೆ ಹೇಳಿಕೊಂಡು ಜೆ.ಜಿ. ಕೃಷ್ಣ ಭಾವುಕರಾದರು.

umashree
ಉಮಾಶ್ರೀ

ಜೆ ಜಿ ಕೃಷ್ಣ ಅವರಿಂದ ಛಾಯಾಗ್ರಾಹಕರ ಸಂಘದ ವಿನೂತನ ಕಾರ್ಯಕ್ರಮ

ಕೆಲವು ಕಾರ್ಯಕ್ರಮಗಳು ನೆನಪಿನಲ್ಲಿ ಉಳಿಯುವ ಹಾಗೆ ಆಗುತ್ತದೆ. ಅದಕ್ಕೆ ಒಂದು ಶಕ್ತಿ ಇರುತ್ತದೆ. ಈಗ ಅಂತಹ ಘಳಿಗೆಯನ್ನು ಕರ್ನಾಟಕ ಚಲನಚಿತ್ರ ಛಾಯಾಗ್ರಾಹಕರ ಸಂಘ ಏರ್ಪಾಡು ಮಾಡಲಿದೆ.

ಆದೇನಪ್ಪ ಅಂದರೆ ಚಿತ್ರ ರಂಗದಲ್ಲಿ ಲೋಟ ತೊಳೆಯುವ, ಕಾರು ಓಡಿಸುವ, ಊಟ ಕೊಡುವ ಅನೇಕ ಸ್ತರಗಳಲ್ಲಿ ಕೆಲಸ ಮಾಡುವ ವ್ಯಕ್ತಿಗಳನ್ನು ಜ್ಞಾಪಿಸಿಕೊಂಡು ಅವರಿಗೆ ಸನ್ಮಾನ ಮಾಡುವ ಕೆಲಸಕ್ಕೆ ಜೆ ಜಿ ಕೃಷ್ಣ ಅವರ ತಂಡ ಮುಂದಾಗಿದೆ. ಇದುವರೆವಿಗೂ ಇಂತಹ ವ್ಯಕ್ತಿಗಳ ಯಾರ ಗಮನಕ್ಕು ಬಂದೆ ಇಲ್ಲ ಸಹ.

ನೀವು ಇಂತಹ ಕೆಲಸ ಮಾಡಿದರೆ ಅಲ್ಲಿ ಇರುವುದು ನಾನು ಮೊದಲು ಎಂದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹೇಳಿದ್ದಾರೆ. ಕಿಚ್ಚ ಸುದೀಪ್, ಛಾಲೆಂಜಿಂಗ್ ಸ್ಟಾರ್ ದರ್ಶನ್, ಶಿವರಾಜಕುಮಾರ್, ತಾರಾ, ಉಮಾಶ್ರೀ ಇಂತಹ ಹೊಸ ಬಗೆಯ ಕಾರ್ಯಕ್ರಮಕ್ಕೆ ಸಾಕ್ಷಿ ಆಗಲಿದ್ದಾರೆ.

ಛಾಯಾಗ್ರಾಹಕರ ಸಂಘ ಇದುವರೆವಿಗೂ 35 ವಸಂತಗಳನ್ನು ಕಳೆದಿದೆ. ಆದರೆ ಯಾವುದೇ ನೆನಪಿನಲ್ಲಿ ಉಳಿಯುವ ಕೆಲಸ ಮಾಡಿಲ್ಲ ಎಂದು ಸಂಘದ ಅಧ್ಯಕ್ಷ ಜೆ ಜಿ ಕೃಷ್ಣ ಒಂದು ಯೋಜನೆ ಸಿದ್ದ ಪಡಿಸಿದ್ದಾರೆ. ನಗರದ ಚೌಡಯ್ಯ ಸ್ಮಾರಕ ಭವನದಲ್ಲಿ ಈ ಕಾರ್ಯಕ್ರಮ ಜರುಗಲಿದೆ.

ಚಿತ್ರ ತಯಾರಿಕೆಯಲ್ಲಿ ಹಲವಾರು ಕೈಗಳು ಕೆಲಸ ಮಾಡುತ್ತದೆ. ಆದರೆ ಕಾಣಿಸದೇ ಇರುವ ವ್ಯಕ್ತಿಗಳನ್ನು ಗುರುತಿಸಿ ಅವರ ಮಡದಿಯರಿಗೆ ಸಂಪ್ರಾದಯದಂತೆ ಬಾಗಿನ ಕೊಡುವುದು. ಜೆ ಜಿ ಕೃಷ್ಣ ಅವರು ಕಾಣಿಸದೇ ಇರುವ 108 ವ್ಯಕ್ತಿಗಳನ್ನು ನಾನಾ ವಿಭಾಗದಲ್ಲಿ ಪತ್ತೆ ಹಚ್ಚಿ ಅವರ ಮನೆಯವರಿಗೆ ಈ ಸನ್ಮಾನ ಅಂತ ತೀರ್ಮಾನಿಸಿದ್ದಾರೆ.

ಈ ಯೋಚನೆಗೆ ಮೊದಲು ತಾರಾ ಅನುರಾಧ 5 ಲಕ್ಷ ರೂಪಾಯಿಗಳನ್ನು ನೀಡುತ್ತೇನೆ ಎಂದು ಮುಂದೆ ಬಂದಿದ್ದಾರೆ. ಆದರೆ ಅದರ ಬದಲಿಗೆ 108 ಹೆಣ್ಣು ಮಕ್ಕಳಿಗೆ ಸೀರೆ, ಬಳೆ, ಅರಿಶಿನ, ಕುಂಕುಮ ಹಾಗೂ ಭಾಗಿನದ ವಸ್ತುಗಳನ್ನು ನೀಡಬಹುದು ಎಂದು ಜೆ ಜಿ ಕೃಷ್ಣ ಹೇಳಿದ್ದಾರೆ. ಅದಕ್ಕೆ ತಾರಾ ಅನುರಾದ ಒಪ್ಪಿದ್ದಾರೆ ಸಹ.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಈ ವಿಚಾರ ತಿಳಿದು ಆ ಕಾರ್ಯಕ್ರಮದಲ್ಲಿ ಹಾಜರಿರುವುದು ಮೊದಲು ನಾನು. ನಾನು ಏನು ಸಹಾಯ ಮಾಡಬೇಕು ಎಂದು ತಿಳಿಸಿ ಎಂದಿದ್ದಾರೆ. ಹಿರಿಯ ನಟಿ ಉಮಾಶ್ರೀ ತತ್ಕ್ಷಣ ಒಂದು ಲಕ್ಷ ರೂಪಾಯಿಯ ಚೆಕ್ ಬರೆದು ನೀಡಿದ್ದಾರೆ. ಶಿವರಾಜಕುಮಾರ್, ಸುದೀಪ್ ಹಾಗೂ ದರ್ಶನ್ ಅವರ ಸಂಪರ್ಕ ಈಗಾಗಲೇ ಮಾಡಲಾಗಿದೆ.

ಈ ಕಾರ್ಯಕ್ರಮ ಸಿನಿ 35 ಎಂಬ ಹೆಸರಿನಲ್ಲಿ ಜರುಗಲಿದೆ. ಅದಕ್ಕೆ ಕಾರಣ ಛಾಯಾಗ್ರಾಹಕರ ಸಂಘ 35 ವರ್ಷ ತುಂಬಿದ ಸಮಯ ಮತ್ತು ಛಾಯಾಗ್ರಾಹಕ 35 ಎಂ ಎಂ ರೀಲ್ ಇಂದ ಅವರ ವೃತ್ತಿ ಶುರು ಮಾಡಿರುತ್ತಾರೆ ಸಹ.

ಈ ಕಾರ್ಯಕ್ರಮವನ್ನು ಹೇಳಿಕೊಳ್ಳುತ್ತ ಜೆ ಜಿ ಕೃಷ್ಣ ಭಾವುಕರಾದರು. ಅದಕ್ಕೆ ಕಾರಣ ಯಾರ ಕಣ್ಣಿಗೂ ಬೀಳದ ವ್ಯಕ್ತಿ ಸಿನಿಮಾ ತಯಾರಿಕೆಗೆ ಸಂಬಂದ ಪಟ್ಟವರನ್ನು ಗುರುತಿಸಿ ಸನ್ಮಾನಿಸುವುದು ಅವರ ಹೃದಯಕ್ಕೆ ಬಹಳ ಹತ್ತಿರವಾಗಿದೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.