ETV Bharat / sitara

ಯಶ್​​ಗೆ ಯಾವುದೇ ಜಂಭ ಇಲ್ಲ, ಅಪ್ಪುಗೆ ನಾನು ಫ್ಯಾನ್: ಸೆಂಚುರಿ ಸ್ಟಾರ್..

author img

By

Published : Oct 27, 2021, 2:38 PM IST

Updated : Oct 27, 2021, 10:15 PM IST

ಇದೇ ಅಕ್ಟೋಬರ್ 29ರಂದು ಸರಿ ಸುಮಾರು 400ಕ್ಕೂ ಹೆಚ್ಚು ಚಿತ್ರಮಂದಿಗಳಲ್ಲಿ ಭಜರಂಗಿ 2 ಸಿನಿಮಾ ಬಿಡುಡಗೆ ಆಗುತ್ತಿದೆ. ಶಿವರಾಜ್ ಕುಮಾರ್ ಹೊಸ ಅವತಾರಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಭಜರಂಗಿ 2 ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ..

3 sandalwood stars in 'Bajrangi 2' pre-release event
'ಭಜರಂಗಿ 2' ಪ್ರಿ- ರಿಲೀಸ್ ಈವೆಂಟ್​ನಲ್ಲಿ ಸ್ಟಾರ್​ ನಟರು

''ಭಜರಂಗಿ 2'' ಕನ್ನಡ ಚಿತ್ರರಂಗವಲ್ಲದೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಟಾಕ್ ಆಗುತ್ತಿರುವ ಸಿನಿಮಾ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ವಿಭಿನ್ನ ಶೇಡ್​ನಲ್ಲಿ ಕಾಣಿಸಿರುವ ಭಜರಂಗಿ-2 ಟ್ರೈಲರ್ ಹಾಗೂ ಹಾಡುಗಳಿಂದಲೇ ಅಭಿಮಾನಿಗಳನ್ನು ಆಕರ್ಷಿಸುತ್ತಿದೆ.

'ಭಜರಂಗಿ 2' ಪ್ರಿ- ರಿಲೀಸ್ ಈವೆಂಟ್

ಇದೇ ಅಕ್ಟೋಬರ್ 29ಕ್ಕೆ ಭಜರಂಗಿ 2 ಬಿಡುಗಡೆ ಆಗುತ್ತಿರುವ ಹಿನ್ನೆಲೆ ಸಿನಿಮಾದ ಪ್ರಿ ರಿಲೀಸ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಅತಿಥಿಗಳಾಗಿ ಬಂದಿದ್ದರು. ಒಂದೇ ವೇದಿಕೆ ಮೇಲೆ ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಯಶ್ ಅವರನ್ನು ಒಟ್ಟಿಗೆ ನೋಡುವ ಭಾಗ್ಯ ಅಭಿಮಾನಿಗಳಿಗೆ ಸಿಕ್ತು.

ಈ ವೇಳೆ ಮಾತನಾಡಿದ ಪುನೀತ್ ರಾಜ್ ಕುಮಾರ್, ನಾನು ಶಿವಣ್ಣರ ಮೊದಲ ಅಭಿಮಾನಿ. ಅವರು ಹೆಚ್ಚಾಗಿ ಹಳ್ಳಿ ಪಾತ್ರಗಳಲ್ಲಿ ನನಗೆ ತುಂಬಾ ಇಷ್ಟ ಆಗ್ತಾರೆ. ಜೊತೆಗೆ ಶಿವಣ್ಣನಲ್ಲಿರುವ ಎನರ್ಜಿ ತುಂಬಾನೇ ಇಷ್ಟ ಆಗುತ್ತೆ ಅಂತಾ ಹೇಳುವ ಮೂಲಕ ಪವರ್ ಸ್ಟಾರ್ ಇಡೀ ಭಜರಂಗಿ 2 ಚಿತ್ರ ತಂಡದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸಿನಿಮಾದ ಪ್ರಿ ರಿಲೀಸ್ ಕಾರ್ಯಕ್ರಮ

ನಂತರ ಮಾತನಾಡಿದ ರಾಕಿಂಗ್ ಸ್ಟಾರ್ ಯಶ್, ಶಿವಣ್ಣ ಹಾಗೂ ಪುನೀತ್ ಅವ್ರ ಸಿನಿಮಾಗಳನ್ನು ನೋಡಿ ಸ್ಫೂರ್ತಿಗೊಂಡು ನಾನು ಸಿನಿಮಾ ಇಂಡಸ್ಟ್ರಿಗೆ ಬಂದಿದ್ದು. ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ತುಂಬಾನೇ ಗೌರವ ಕೊಡುವುದರ ಜೊತೆಗೆ ಇಷ್ಟ ಪಡುವ ವ್ಯಕ್ತಿಗಳು ಅಂದ್ರೆ ಅದು ಶಿವಣ್ಣ ಮತ್ತು ಪುನೀತ್ ರಾಜ್ ಕುಮಾರ್​ ಅಂತಾ ಹೇಳುವ ಮೂಲಕ ಅಣ್ಣಾವ್ರ ಕುಟುಂಬದ ಜೊತೆಗಿನ ಒಡನಾಟವನ್ನು ಯಶ್ ಹಂಚಿಕೊಂಡರು.

ಸಿನಿಮಾದ ಪ್ರಿ ರಿಲೀಸ್ ಕಾರ್ಯಕ್ರಮ

ಕೊನೆಯಲ್ಲಿ ಮಾತನಾಡಿದ ಶಿವರಾಜ್ ಕುಮಾರ್, ಯಶ್​​ರನ್ನು ಹಾಡಿ ಹೊಗಳಿದರು. ಯಶ್ ಇಂದು ಅಂತಾರಾಷ್ಟ್ರಿಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಇಷ್ಟು ದೊಡ್ಡ ಮಟ್ಟಕ್ಕೆ ಬೆಳದರೂ ಕೂಡ ಯಶ್ ಮೊದಲು ಹೇಗಿದ್ದರೋ ಹಾಗೇ ಇದ್ದಾರೆ. ಯಶ್​ಗೆ ಯಾವುದೇ ಜಂಬ ಇಲ್ಲ. ಒಳ್ಳೆಯತನ ಇದೆ. ಯಶ್ ಅವರನ್ನು ನೋಡಿದ್ರೆ ಖುಷಿಯಾಗುತ್ತೆ, ಹ್ಯಾಂಡ್ ಸಮ್ ಆಗಿ ಇರ್ತಾರೆ ಅಂತಾ ಶಿವರಾಜ್ ಕುಮಾರ್ ಯಶ್ ಬಗ್ಗೆ ಕೊಂಡಾಡಿದರು.

ನಿಮ್ಮಗೆಲ್ಲ ಗೊತ್ತಿರುವ ಹಾಗೆ ಅಪ್ಪು ಅದ್ಭುತ ನಟ ಎಂದು ಹೆಮ್ಮೆ ವ್ಯಕ್ತಪಡಿಸಿದರು. ಕೊನೆಯಲ್ಲಿ ಭಜರಂಗಿ 2 ಸಿನಿಮಾದ ಹಾಡಿಗೆ ಶಿವಣ್ಣ, ಯಶ್, ಪುನೀತ್ ರಾಜ್ ಕುಮಾರ್ ಡ್ಯಾನ್ಸ್ ಮಾಡಿದರು. ಈ ಸ್ಟಾರ್ ನಟರ ಅಪರೂಪದ ಕ್ಷಣಗಳನ್ನು ಫೋಟೋಗ್ರಾಫರ್ ಚಂದನ್ ಗೌಡ ಸೆರೆ ಹಿಡಿದಿದ್ದಾರೆ.

ಇದನ್ನೂ ಓದಿ: ಲವ್ಲಿ ಸ್ಟಾರ್ 'ಪ್ರೇಮಂ ಪೂಜ್ಯಂ' ಬಿಡುಗಡೆ ಮುಂದೂಡಿಕೆ: ಕಾರಣ ಏನು ಗೊತ್ತಾ?

ಭಜರಂಗಿ 2 ಚಿತ್ರವನ್ನು ನಿರ್ದೇಶಕ ಎ. ಹರ್ಷ ನಿರ್ದೇಶಿಸಿದ್ದಾರೆ. ಶಿವರಾಜಕುಮಾರ್ ಹಾಗೂ ಎ. ಹರ್ಷ ಕಾಂಬಿನೇಷನ್​ನಲ್ಲಿ ಮೂಡಿ ಬರುತ್ತಿರುವ ಮೂರನೇ ಸಿನಿಮಾ ಇದಾಗಿದೆ. ಟ್ರೈಲರ್‌ನಿಂದಲೇ ಸಾಕಷ್ಟು ಕುತೂಹಲ ಹುಟ್ಟಿಸಿರೋ ಭಜರಂಗಿ 2 ಸಿನಿಮಾದಲ್ಲಿ ಭಾವನಾ ಮೆನನ್, ಶ್ರುತಿ, ಭಜರಂಗಿ ಲೋಕಿ​, ಶಿವರಾಜ್​ ಕೆ.ಆರ್​. ಪೇಟೆ ಸೇರಿ ಸಾಕಷ್ಟು ಕಲಾವಿದರ ದಂಡು ಈ ಚಿತ್ರದಲ್ಲಿದೆ.

ಈ ಚಿತ್ರಕ್ಕೆ ಅರ್ಜುನ್​ ಜನ್ಯ ಸಂಗೀತ ನಿರ್ದೇಶನ ನೀಡಿದ್ದಾರೆ. ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ. ಸ್ವಾಮಿ ಜೆ. ಗೌಡ ಛಾಯಾಗ್ರಹಣ, ದೀಪು ಎಸ್​. ಕುಮಾರ್​ ಸಂಕಲನ ಚಿತ್ರಕ್ಕಿದೆ. ಬಹು ಕೋಟಿ ವೆಚ್ಚದಲ್ಲಿ ನಿರ್ಮಾಪಕರಾದ ಜಯಣ್ಣ ಹಾಗೂ ಭೋಗೇಂದ್ರ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.

ಇದೇ ಅಕ್ಟೋಬರ್ 29ರಂದು ಸರಿ ಸುಮಾರು 400ಕ್ಕೂ ಹೆಚ್ಚು ಚಿತ್ರಮಂದಿಗಳಲ್ಲಿ ಭಜರಂಗಿ 2 ಸಿನಿಮಾ ಬಿಡುಡಗೆ ಆಗುತ್ತಿದೆ. ಶಿವರಾಜ್ ಕುಮಾರ್ ಹೊಸ ಅವತಾರಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಭಜರಂಗಿ 2 ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ.

Last Updated : Oct 27, 2021, 10:15 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.