ಮೈಸೂರು: ದಸರಾ ಮಹೋತ್ಸವದ ಯುವದಸರಾ ವೇದಿಕೆಯಲ್ಲಿ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಅವರ ಲವ್ ಪ್ರಪೋಸ್‌ಗೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಮೂರು ದೂರುಗಳು ದಾಖಲಾಗಿದೆ.
ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಚಂದನ್ ಶೆಟ್ಟಿ ಮೇಲೆ ಮೂರು ಕೇಸ್ ದಾಖಲಾಗಿದೆ. ಸರ್ಕಾರಿ ವೇದಿಕೆ ದುರ್ಬಳಕೆ, ಸಾರ್ವಜನಿಕ ಸ್ಥಳದಲ್ಲಿ ಅನುಚಿತ ವರ್ತನೆ, ನಿವೇದಿತಾರಿಂದ ಅತಿಕ್ರಮ ಪ್ರವೇಶ, ಸಂಚು ರೂಪಿಸಿ ಪ್ರಚಾರ ಪಡೆದ ಆರೋಪಗಳ ಮೇಲೆ ದೂರು ದಾಖಲಾಗಿದೆ.
ಮೈಸೂರು ಯೂತ್ ಕಾಂಗ್ರೆಸ್, ಕರ್ನಾಟಕ ಪ್ರಜಾಪಾರ್ಟಿ ಮತ್ತು ಸಾಮಾಜಿಕ ಹೋರಾಟಗಾರ ಗಂಗರಾಜು ಕೇಸ್ ದಾಖಲು ಮಾಡಿದ್ದಾರೆ. ಈ ಘಟನೆ ದಸರಾ ಗಲಾಟೆ ನಡುವೆ ಪೊಲೀಸರಿಗೆ ಮತ್ತೊಂದು ತಲೆ ಬಿಸಿಯಾಗಿದೆ.
![3 complaint against chandan shetty](https://etvbharatimages.akamaized.net/etvbharat/prod-images/4663887_thumb.jpg)
![3 complaint against chandan shetty](https://etvbharatimages.akamaized.net/etvbharat/prod-images/4663887_thumb123.jpg)