ಕನ್ನಡ ಸಿನಿಮಾರಂಗದದಲ್ಲಿ ಇದುವರೆಗೂ ಕೆಲವೇ ಕೆಲವು ಸಂಗೀತ ಆಧಾರಿತ ಸಿನಿಮಾಗಳು ತಯಾರಾಗಿವೆ. ಅದರಲ್ಲಿ ಜನರ ಮನ ಮುಟ್ಟಿದ್ದು ಕೆಲವೇ ಕೆಲವು ಸಿನಿಮಾಗಳು. ಈ ಸಿನಿಮಾಗಳಲ್ಲಿ 'ಗಾನಯೋಗಿ ಪಂಚಾಕ್ಷರ ಗವಾಯಿ' ಕೂಡಾ ಒಂದು.
ಹಾವೇರಿಯಲ್ಲಿ ಜನಿಸಿ, ಗದುಗಿನಲ್ಲಿ ಶ್ರೀ ವೀರೇಶ್ವರ ಪುಣ್ಯಾಶ್ರಮ ಸಂಗೀತ ಆಶ್ರಮವನ್ನು ಸ್ಥಾಪಿಸಿದ ಸಂಗೀ ಸಾಗರ ಶ್ರಿ ಪಂಚಾಕ್ಷರ ಗವಾಯಿಗಳ ಜೀವನ ಆಧಾರಿತ ಈ ಸಿನಿಮಾ 1995 ರಲ್ಲಿ ಬಿಡುಗಡೆಯಾಗಿತ್ತು. ಈಗ ಈ ಚಿತ್ರಕ್ಕೆ 25 ವರ್ಷಗಳು ತುಂಬಿವೆ. ಈ ಚಿತ್ರ ಬಿಡುಗಡೆಯಾದಾಗ ಅನೇಕ ಹೊಸ ದಾಖಲೆಗಳನ್ನು ಸೃಷ್ಟಿ ಮಾಡಿತ್ತು.
ಈ ಚಿತ್ರದ ಮೂಲಕ ಸಂಗೀತ ನಿರ್ದೇಶಕ ಹಂಸಲೇಖ ಹಾಗೂ ಈ ಚಿತ್ರದಲ್ಲಿ ಕರ್ನಾಟಕ, ಹಿಂದೂಸ್ಥಾನಿ ಎರಡೂ ಸಂಗೀತ ಪ್ರಾಕಾರಗಳನ್ನು ಜೊತೆ ಸೇರಿ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ಹಾಡಿದ 'ಉಮಂಡ್ ಗಮಂಡ್' ಹಾಡಿಗೆ ರಾಷ್ಟ್ರಪ್ರಶಸ್ತಿ ಲಭಿಸಿತ್ತು. ಚಿತ್ರವನ್ನು ಚಿಂದೋಡಿ ಲೀಲಾ ನಿರ್ಮಿಸಿದ್ದು ಚಿಂದೋಡಿ ಬಂಗಾರೇಶ್ ನಿರ್ದೇಶಿಸಿದ್ದರು. ಈ ಚಿತ್ರಕ್ಕೆ ಅತ್ಯುತ್ತಮ ರಾಜ್ಯ ಪ್ರಶಸ್ತಿ ದೊರೆತಿದ್ದಲ್ಲದೆ, ಗಿರೀಶ್ ಕಾರ್ನಾಡ್ ಅವರಿಗೆ ಅತ್ಯುತ್ತಮ ಪೋಷಕ ಕಲಾವಿದ ಪ್ರಶಸ್ತಿ ಕೂಡಾ ಲಭಿಸಿತ್ತು.
01 ಸೆಪ್ಟೆಂಬರ್ 1995 ರಂದು ಈ ಸಿನಿಮಾ ಬಿಡುಗಡೆಯಾದಾಗ ನಿರ್ಮಾಪಕಿ ಚಿಂದೋಡಿ ಲೀಲಾ ಸಿನಿಮಾ ಸಂಬಂಧ ಒಂದು ಉತ್ಸವ ಏರ್ಪಡಿಸಿದ್ದರು. ಚಿತ್ರದಲ್ಲಿ ವಿಜಯ ರಾಘವೇಂದ್ರ, ಲೋಕೇಶ್ ಅವರ ಅಭಿನಯಕ್ಕೆ ಕೂಡಾ ಉತ್ತಮ ಪ್ರಶಂಸೆ ದೊರಕಿತ್ತು. ಚಿತ್ರದ 10 ಹಾಡುಗಳಿಗೆ ನಾದಬ್ರಹ್ಮ ಹಂಸಲೇಖ ಸಂಗೀತ ನಿರ್ದೇಶನ ಮಾಡಿದ್ದರು.
ಇನ್ನು ಉಮಂಡ್..ಗಮಂಡ್ ಹಾಡನ್ನು ನಾನು ಹಾಡಲು ಸಾಧ್ಯವೇ ಇಲ್ಲ ಎಂದು ಎಸ್.ಪಿ. ಬಾಲಸ್ರುಬ್ರಹ್ಮಣ್ಯಂ ಹಸಂಲೇಖ ಅವರ ಬಳಿ ಹೇಳಿದ್ದರಂತೆ. ಆದರೆ ಹಂಸಲೇಖ ಅವರ ಒತ್ತಾಯದ ಮೇರೆಗೆ ಎಸ್ಪಿಬಿ ಪ್ರಯತ್ನ ಮಾಡುತ್ತೇನೆ ಎಂದು ಹೇಳಿ ಒಂದು ದಿನ ಅಭ್ಯಾಸ ಮಾಡಿ ನಂತರ ಹಾಡಿದ್ದಾರೆ. 6:25 ನಿಮಿಷ ಅವಧಿಯ ಈ ಹಾಡನ್ನು 6 ಗಂಟೆಗಳ ಕಾಲ ರೆಕಾರ್ಡ್ ಮಾಡಿ ಮುಗಿಸಿದ್ದರಂತೆ. ಹಾಡಲು ಆಗುವುದಿಲ್ಲ ಎಂದ ಹಾಡಿಗೆ ಎಸ್ಪಿಬಿ ರಾಷ್ಟ್ರಪ್ರಶಸ್ತಿ ಪಡೆದದ್ದು ಆಶ್ಚರ್ಯದ ವಿಚಾರ.
ಈ ಚಿತ್ರದ ಮತ್ತೊಂದು ಹಾಡು 'ನೀಡು ಶಿವ ನೀಡದಿರು ಶಿವ' ಕೂಡಾ ಬಹಳ ಫೇಮಸ್. ಇಂದಿಗೂ ಕೂಡಾ ಅನೇಕ ಸ್ಪರ್ಧೆಗಳಲ್ಲಿ ಈ ಹಾಡನ್ನು ಹಾಡುವುದು ಸಾಮಾನ್ಯ. ಚಿತ್ರ ಅವರು ಈ ಹಾಡನ್ನು ಹಾಡಿದ್ದರು. ಶ್ರೀ ಪುಟ್ಟರಾಜ ಗವಾಯಿಗಳು ಈ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿದ್ದರು. ಒಟ್ಟಿನಲ್ಲಿ ಕನ್ನಡ ಚಿತ್ರರಂಗದಲ್ಲಿ ಈ ಚಿತ್ರ ದಾಖಲೆ ಮಾಡಿದ್ದಂತೂ ನಿಜ.
- " class="align-text-top noRightClick twitterSection" data="">