ETV Bharat / sitara

ದೆವ್ವ ಹಿಡಿದವಳ ರೀತಿಯ ಲುಕ್​ ಪಡೆಯಲು 3 ಗಂಟೆಗಳೇ ಬೇಕಾಯಿತು:ನಟಿ ಯಾಮಿ - ದೆವ್ವದ ಲುಕ್​ನಲ್ಲಿ ಯಾಮಿ

ನಟಿ ಯಾಮಿ ಗೌತಮ್​ ತಮ್ಮ ಮುಂದಿನ ಸಿನಿಮಾ 'ಭೂತ್​ ಪೊಲೀಸ್'​​ಗಾಗಿ ಭಾರಿ ಕಸರತ್ತು ನಡೆಸಿದ್ದಾರೆ. ಹಾರರ್​ ಸಿನಿಮಾ ಇದಾಗಿದ್ದು, ದೆವ್ವ ಹಿಡಿದವಳ ರೀತಿ ಕಾಣಿಸಿಕೊಳ್ಳಲು 3 ಗಂಟೆ ಮೇಕ್​ ಅಪ್​ ಮಾಡಿಸಿಕೊಳ್ಳಬೇಕಾಯ್ತು ಎಂದು ಯಾಮಿ ಹೇಳಿಕೊಂಡಿದ್ದಾರೆ.

Bhoot Police
ಭೂತ್​ ಪೊಲೀಸ್ ಸಿನಿಮಾದಲ್ಲಿ ಯಾಮಿ
author img

By

Published : Sep 15, 2021, 7:27 AM IST

'ಭೂತ್​ ಪೊಲೀಸ್​​' ಸಿನಿಮಾ ಚಿತ್ರೀಕರಣದ ಸಂದರ್ಭದ ಕುರಿತು ನಟಿ ಯಾಮಿ ಗೌತಮ್​ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ದೆವ್ವ ಹಿಡಿದಿರುವಂತೆ ಕಾಣಿಸಲು ಅವರು ಮೂರು ಗಂಟೆಗಳಿಗೂ ಹೆಚ್ಚು ಕಾಲ ತಯಾರಿ ನಡೆಸಬೇಕಾಯ್ತು. ನಂತರ ಆ ಲುಕ್​ನಿಂದ ಹೊರಬರಲು 45 ನಿಮಿಷ ಬೇಕಾಯ್ತು. ಹಿಮಾಚಲ ಪ್ರದೇಶದಲ್ಲಿ ನಡುಗುವ ಚಳಿಯಲ್ಲಿ ಬರಿಗಾಲಲ್ಲಿ ಶೂಟಿಂಗ್​ ಮಾಡುತ್ತಿದ್ದೇವೆ. ಇದು ಅಷ್ಟು ಸುಲಭವಲ್ಲ ಎಂದಿದ್ದಾರೆ.

ಭೂತ್​ ಪೊಲೀಸ್ ಸಿನಿಮಾದಲ್ಲಿ ಯಾಮಿ

ನನ್ನ ಕುತ್ತಿಗೆ ಗಾಯದ ಹೊರತಾಗಿಯೂ, ನಾನು ಎಲ್ಲವನ್ನೂ ಮಾಡಲು ಬಯಸಿದ್ದೆ, ಮತ್ತು ನನ್ನ ಯೋಗಾಭ್ಯಾಸವು ಇದಕ್ಕೆ ನನಗೆ ಸಹಾಯ ಮಾಡಿತು. ನಾನು ಕೆಲವು ವೃತ್ತಿಪರ ತರಬೇತಿ ತೆಗೆದುಕೊಳ್ಳಲು ನಿರ್ಧರಿಸಿದ್ದೆ. ಆದರೆ, ಕೊರೊನಾ ಸಾಂಕ್ರಾಮಿಕ ಮಾರ್ಗಸೂಚಿಗಳ ಹಿನ್ನೆಲೆ ಆ ಸಮಯದಲ್ಲಿ ತರಬೇತಿ​ ಪಡೆಯಲು ಸಾಧ್ಯವಾಗಿಲ್ಲ. ಸೆಟ್ ನಲ್ಲಿ ನನ್ನ ಕೈಲಾದಷ್ಟು ಕೆಲಸ, ಸಾಹಸ ಮಾಡಿದ್ದೇನೆ ಎಂದು ಯಾಮಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ:'ತಲೈವಿ' ಆಯ್ತು ಇದೀಗ 'ಸೀತಾ' ಚಿತ್ರದಲ್ಲಿ ನಟಿಸಲಿರುವ ಕಂಗನಾ ರಣಾವತ್

ನಾನು ತುಂಬಾ ಇಷ್ಟಪಡುವ ವೃತ್ತಿಯೊಂದಿಗೆ ಬರುವ ಸವಾಲುಗಳ ಒಂದು ಭಾಗ ಇವು ಎಂದಿರುವ ಯಾಮಿ, ಭೂತ್​ ಪೊಲೀಸ್​ ಚಿತ್ರೀಕರಣದ ಕೆಲವು ದೃಶ್ಯಗಳನ್ನು ಹಂಚಿಕೊಂಡಿದ್ದಾರೆ. ನನಗೆ ತುಂಬಾ ಪ್ರೀತಿಯನ್ನು ನೀಡಿದ್ದಕ್ಕಾಗಿ ಧನ್ಯವಾದಗಳು ಅಂತಾನೂ ಬರೆದುಕೊಂಡಿದ್ದಾರೆ.

ಭೂತ್​ ಪೊಲೀಸ್​ ಹಾರರ್​ ಥ್ರಿಲ್​ ಸಿನಿಮಾವಾಗಿದ್ದು ಇದರಲ್ಲಿ ಯಾಮಿ ಜೊತೆಗೆ ಜಾಕ್ವೆಲಿನ್​ ಫರ್ನಾಂಡಿಸ್​, ಸೈಫ್​ ಅಲಿ ಖಾನ್​, ಅರ್ಜುನ್​ ಕಪೂರ್​ ನಟಿಸಿದ್ದಾರೆ.

ಇದನ್ನೂ ಓದಿ:VIDEO: "ಜೀನೆ ಕೆ ಹೈ ಚಾರ್ ದಿನ್" ಸಾಂಗ್​ಗೆ ಸಖತ್​ ಸ್ಟೆಪ್​ ಹಾಕಿದ ಸಲ್ಮಾನ್ ಖಾನ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.