ಬಾಲಿವುಡ್ ನಟಿ ಕಂಗನಾ ರಣಾವತ್ ಸಿನಿಮಾಗಳಿಗಿಂತ ಹೆಚ್ಚಾಗಿ ವಾದ-ವಿವಾದಗಳಿಂದಲೇ ಹೆಚ್ಚು ಸುದ್ದಿಯಾಗಿದ್ದಾರೆ. ಮದುವೆಯಾಗುವುದಾಗಿ ನಂಬಿಸಿ ನನಗೆ ಹೃತಿಕ್ ರೋಷನ್ ಮೋಸ ಮಾಡಿದ್ದಾರೆ ಎಂದು ಕೆಲವು ವರ್ಷಗಳ ಹಿಂದೆ ಕಂಗನಾ ರಣಾವತ್ ಆರೋಪಿಸಿದ್ದರು. ನಂತರ ಕೆಲವು ದಿನಗಳ ಕಾಲ ಈ ವಿವಾದ ತಣ್ಣಗಾಗಿತ್ತು. ಆದರೆ ಮತ್ತೆ ಕಂಗನಾ, ಹೃತಿಕ್ ರೋಷನ್ ಅವರನ್ನು ಕೆಣಕಿ ಟ್ವೀಟ್ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಂಗನಾ ರಣಾವತ್, "ಹೃತಿಕ್ ರೋಷನ್ ಮತ್ತೆ ಹಳೆ ವರಸೆಯನ್ನು ಶುರು ಮಾಡಿದ್ದಾರೆ. ಕೆಲವು ವರ್ಷಗಳ ಹಿಂದೆ ನಮ್ಮ ನಡುವೆ ಬ್ರೇಕ್ ಅಪ್ ಆಯ್ತು. ಹೃತಿಕ್ ರೋಷನ್ ವೈಯಕ್ತಿಕ ಬದುಕು ಛಿದ್ರವಾಗಿ ವಿಚ್ಛೇದನ ಕೂಡಾ ಪಡೆದಿದ್ದಾರೆ. ಬೇರೆ ಮಹಿಳೆಯೊಂದಿಗೆ ಕೂಡಾ ಆತ ಡೇಟ್ ಮಾಡಲು ಸಿದ್ಧನಿಲ್ಲ. ನನ್ನ ವೈಯಕ್ತಿಕ ಜೀವನದಲ್ಲಿ ಮತ್ತೆ ನಾನು ಭರವಸೆ ಕಂಡುಕೊಳ್ಳುವಾಗ ಮತ್ತೆ ಅದೇ ನಾಟಕವನ್ನು ಮುಂದುವರೆಸಿದ್ದಾನೆ" ಎಂದು ಕಂಗನಾ ಆರೋಪಿಸಿದ್ದಾರೆ. ಅಷ್ಟೇ ಅಲ್ಲ, ಹೃತಿಕ್ ರೋಷನ್ ಅವರನ್ನು ಉದ್ದೇಶಿಸಿ, "ಸಣ್ಣ ಪುಟ್ಟ ಸಂಬಂಧಗಳ ವಿಚಾರಕ್ಕೆ ತಲೆಕೆಡಿಸಿಕೊಂಡು ಇನ್ನೂ ಎಷ್ಟು ದಿನಗಳು ಹೀಗೆ ಅಳುತ್ತೀಯ...?" ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಲಕ್ಷಾಂತರ ಬದುಕುಗಳನ್ನು ಕಟ್ಟಿದ ಗಿರೀಶ್ ಭಾರದ್ವಾಜ್ ಕುರಿತು ಬಯೋಪಿಕ್
-
This evening I drove to my parents house as my grandfather Shri Braham Chand Ranaut wasn’t keeping well for past few months, just when I reached home he had already passed away.
— Kangana Ranaut (@KanganaTeam) December 14, 2020 " class="align-text-top noRightClick twitterSection" data="
He was 90 years old still had an impeccable sense of humour and we all called him Daddy. OM Shanti 🙏 pic.twitter.com/rbD14T6CCD
">This evening I drove to my parents house as my grandfather Shri Braham Chand Ranaut wasn’t keeping well for past few months, just when I reached home he had already passed away.
— Kangana Ranaut (@KanganaTeam) December 14, 2020
He was 90 years old still had an impeccable sense of humour and we all called him Daddy. OM Shanti 🙏 pic.twitter.com/rbD14T6CCDThis evening I drove to my parents house as my grandfather Shri Braham Chand Ranaut wasn’t keeping well for past few months, just when I reached home he had already passed away.
— Kangana Ranaut (@KanganaTeam) December 14, 2020
He was 90 years old still had an impeccable sense of humour and we all called him Daddy. OM Shanti 🙏 pic.twitter.com/rbD14T6CCD
ಕಂಗನಾ ಹಾಗೂ ತಮ್ಮ ನಡುವಿನ ಯುದ್ಧ ತಣ್ಣಗಾಗಿ ಕೆಲವು ದಿನಗಳಾದ ನಂತರ, ಕಂಗನಾ ರಣಾವತ್ ಈಮೇಲ್ ಖಾತೆಯಿಂದ ನನಗೆ ನೂರಕ್ಕೂ ಹೆಚ್ಚು ಮೇಲ್ಗಳು ಬಂದಿವೆ ಎಂದು ಹೃತಿಕ್ ಆರೋಪಿಸಿದ್ದರು. ಈ ಸಂಬಂಧ ಸೈಬರ್ ಕ್ರೈಂ ಪೊಲೀಸರಿಗೂ ದೂರು ಸಲ್ಲಿಸಿದ್ದರು. ಈ ಪ್ರಕರಣ ಈಗ ಹೃತಿಕ್ ರೋಷನ್ ಮನವಿ ಮೇರೆಗೆ ಮುಂಬೈ ಕ್ರೈಮ್ ಇಂಟೆಲಿಜನ್ಸ್ ಕೇಂದ್ರಕ್ಕೆ ವರ್ಗಾಯಿಸಲಾಗಿದೆ. ಈ ಕಾರಣದಿಂದಲೇ ಕಂಗನಾ ಮತ್ತೆ ಹೃತಿಕ್ನನ್ನು ಉದ್ದೇಶಿಸಿ ಈ ರೀತಿ ಟ್ವೀಟ್ ಮಾಡಿದ್ದಾರೆ. ಕಂಗನಾ ರಣಾವತ್ ತಾತ ನಿನ್ನೆಯಷ್ಟೇ ನಿಧನರಾಗಿದ್ದು ಇಡೀ ಕುಟುಂಬವೇ ದು:ಖದಲ್ಲಿದೆ. ತಮ್ಮ ತಾತ ನಿಧನರಾದ ಸುದ್ದಿಯಲ್ಲಿ ಕಂಗನಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.