ETV Bharat / sitara

ಬಾಲಿವುಡ್‌ನ ಸಿನಿಮಾಗಳಲ್ಲಿ ಯಾವೆಲ್ಲಾ ನಟಿಯರು ಹಿಜಾಬ್ - ಬುರ್ಖಾದಲ್ಲಿ ಕಾಣಿಸಿಕೊಂಡಿದ್ದಾರೆ ಗೊತ್ತಾ? - ಬಾಲಿವುಡ್‌ನ ನಟಿಯರು ಮತ್ತು ಹಿಜಾಬ್​

ಸೋಮವಾರ ನ್ಯಾಯಾಲಯದಲ್ಲಿ ಹಿಜಾಬ್ ವಿಷಯದ ವಿಚಾರಣೆ ನಡೆಯಲಿದೆ. ಈ ನಡುವೆ ಚಲನಚಿತ್ರಗಳಲ್ಲಿ ಹಿಜಾಬ್ ಮತ್ತು ಬುರ್ಖಾ ಧರಿಸಿದ ಬಾಲಿವುಡ್ ನಟಿಯರ ಬಗ್ಗೆ ನೋಡುವುದಾದರೆ. ಈ ಪಟ್ಟಿಯಲ್ಲಿ ಬಾಲಿವುಡ್‌ನ ಅತಿ ಹೆಚ್ಚು ಸಂಭಾವನೆ ಪಡೆಯುವ ಮತ್ತು ಟಾಪ್ ನಟಿ ದೀಪಿಕಾ ಪಡುಕೋಣೆ ಮತ್ತು ಆಲಿಯಾ ಭಟ್ ಸೇರಿದಂತೆ ಅನೇಕ ಹಿರಿಯ ನಟಿಯರಿದ್ದಾರೆ.

ಹಿಜಾಬ್ ಮತ್ತು ಬುರ್ಖಾವನ್ನು ಧರಿಸಿ ಚಿತ್ರಗಳಲ್ಲಿ ಕಾಣಿಸಿಕೊಂಡ ನಟಿಯರು

author img

By

Published : Feb 11, 2022, 5:58 PM IST

ಹೈದರಾಬಾದ್: ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಹಿಜಾಬ್ ವಿಷಯ ಸದ್ದು ಮಾಡ್ತಿದೆ. ಈ ಪ್ರಕರಣ ಕರ್ನಾಟಕದ ಶಾಲೆಯೊಂದರಲ್ಲಿ ಕೆಲ ವಿದ್ಯಾರ್ಥಿನಿಯರು ಹಿಜಾಬ್ ಧರಿಸಲು ಅವಕಾಶ ನೀಡುವಂತೆ ಪ್ರತಿಭಟನೆ ಮಾಡಿದಾಗಿನಿಂದ ಪ್ರಾರಂಭವಾಗಿತ್ತು. ಈ ವಿಚಾರ ಈಗ ದೇಶದ ಮೂಲೆ ಮೂಲೆಗಳಿಗೂ ಹರಡಿದೆ.

ಈ ಸಂಬಂಧ ಸೋಮವಾರ ನ್ಯಾಯಾಲಯದಲ್ಲಿ ವಿಚಾರಣೆ ಮುಂದುವರೆಯಲಿದೆ. ಈ ನಡುವೆ ಚಲನಚಿತ್ರಗಳಲ್ಲಿ ಹಿಜಾಬ್ ಮತ್ತು ಬುರ್ಖಾ ಧರಿಸಿದ ಬಾಲಿವುಡ್ ನಟಿಯರ ಬಗ್ಗೆ ನೋಡುವುದಾದರೆ, ಈ ಪಟ್ಟಿಯಲ್ಲಿ ಬಾಲಿವುಡ್‌ನ ಅತಿ ಹೆಚ್ಚು ಸಂಭಾವನೆ ಪಡೆಯುವ ಮತ್ತು ಟಾಪ್ ನಟಿ ದೀಪಿಕಾ ಪಡುಕೋಣೆ ಮತ್ತು ಆಲಿಯಾ ಭಟ್ ಸೇರಿದಂತೆ ಅನೇಕ ಹಿರಿಯ ನಟಿಯರಿದ್ದಾರೆ.

ದೀಪಿಕಾ ಪಡುಕೋಣೆ: ನಟಿ ದೀಪಿಕಾ ಪಡುಕೋಣೆ ಬಾಲಿವುಡ್‌ನ ಅತಿ ಹೆಚ್ಚು ಸಂಭಾವನೆ ಪಡೆಯುವ ಮತ್ತು ಬೇಡಿಕೆಯ ನಟಿ. ಶಾರುಖ್ ಖಾನ್ ಜೊತೆಗಿನ ಓಂ ಶಾಂತಿ ಓಂ (2007) ಚಿತ್ರದ ಮೂಲಕ ದೀಪಿಕಾ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರು. ಓಂ ಶಾಂತಿ ಓಂ ಚಿತ್ರದ ದೃಶ್ಯವೊಂದರಲ್ಲಿ ದೀಪಿಕಾ ಪಡುಕೋಣೆ ಬುರ್ಖಾದಲ್ಲಿ ಕಾಣಿಸಿಕೊಂಡಿದ್ದರು. ಶಾರುಖ್ ಖಾನ್ ಅವರನ್ನು ಭೇಟಿಯಾಗಲು ಹೋದಾಗ ಈ ದೃಶ್ಯ ಚಿತ್ರದಲ್ಲಿದೆ.

ಆಲಿಯಾ ಭಟ್: ಇತ್ತೀಚಿನ ದಿನಗಳಲ್ಲಿ, ಬಾಲಿವುಡ್‌ನಲ್ಲಿ ಅಗ್ರಸ್ಥಾನದಲ್ಲಿರುವ ನಟಿ ಆಲಿಯಾ ಭಟ್, ಗಂಗೂಬಾಯಿ ಕಥಿಯಾವಾಡಿ ಬ್ರಹ್ಮಾಸ್ತ್ರ ಮತ್ತು ಪ್ಯಾನ್ ಇಂಡಿಯಾ ಚಿತ್ರ ಆರ್​ಆರ್​ಆರ್​ ನಂತಹ ಮೆಗಾ-ಬಜೆಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ಆಲಿಯಾ ಎರಡು ಚಿತ್ರಗಳಲ್ಲಿ ಹಿಜಾಬ್ ಮತ್ತು ಬುರ್ಖಾ ಧರಿಸಿ ಕಾಣಿಸಿಕೊಂಡಿದ್ದಾರೆ. ರಾಝಿ ಮತ್ತು ಗಲ್ಲಿ ಬಾಯ್ ಚಿತ್ರದಲ್ಲಿ ಆಲಿಯಾ ಮುಸ್ಲಿಂ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆಲಿಯಾ ಅವರ ಈ ಎರಡೂ ಚಿತ್ರಗಳು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿವೆ.

ದಿಯಾ ಮಿರ್ಜಾ: ಬಾಲಿವುಡ್ ನಟಿ ದಿಯಾ ಮಿರ್ಜಾ ಮತ್ತು ಮೋಹಿತ್ ರೈನಾ ಅಭಿನಯದ ಸರಣಿ 'ಕಾಫಿರ್' (2019) ಇಂಡೋ-ಪಾಕ್ ಸಂಬಂಧಗಳ ಸರಣಿಯಾಗಿದೆ. ಈ ಸರಣಿಯಲ್ಲಿ, ದಿಯಾ ಮಿರ್ಜಾ ಗರ್ಭಿಣಿ ಪಾಕಿಸ್ತಾನಿ ಹುಡುಗಿ ಕೈನಾಜ್ ಪಾತ್ರವನ್ನು ನಿರ್ವಹಿಸಿದ್ದಾರೆ. ಅವರು ಕೆಲವು ಕಾರಣಗಳಿಗಾಗಿ ಗಡಿ ದಾಟಿ ಭಾರತವನ್ನು ತಲುಪುತ್ತಾರೆ. ಇದಾದ ನಂತರ, ಅವರನ್ನು ಭಯೋತ್ಪಾದಕರು ಎಂದು ಜೈಲಿಗೆ ತಳ್ಳಲಾಗುತ್ತದೆ. ಪ್ರೇಕ್ಷಕರು ಈ ಸರಣಿಯನ್ನು ಹೆಚ್ಚು ಜನಪ್ರಿಯತೆ ಪಡೆದಿದೆ.

ವಿದ್ಯಾ ಬಾಲನ್: ಅಕ್ಷಯ್ ಕುಮಾರ್, ಇಮ್ರಾನ್ ಖಾನ್ ಮತ್ತು ಸೋನಾಕ್ಷಿ ಸಿನ್ಹಾ ಅಭಿನಯದ ಒನ್ಸ್ ಅಪಾನ್ ಎ ಟೈಮ್ ಇನ್ ಮುಂಬೈ ದೊಬಾರಾ (2013) ಚಿತ್ರದಲ್ಲಿ ವಿದ್ಯಾ ಬಾಲನ್ ಅತಿಥಿ ಪಾತ್ರ ನಿರ್ವಹಿಸಿದ್ದರು. ಮಿಲನ್ ಲುಥ್ರಿಯಾ ನಿರ್ದೇಶನದ ಏಕ್ ಸಾಂಗ್ ಚಿತ್ರದಲ್ಲಿ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡರು. ಈ ಹಾಡಿನಲ್ಲಿ ವಿದ್ಯಾ ಬುರ್ಖಾದಲ್ಲಿ ಕಾಣಿಸಿಕೊಂಡಿದ್ದರು. ನಿರ್ಮಾಪಕಿ ಏಕ್ತಾ ಕಪೂರ್ ಅವರ ಒತ್ತಾಯದ ಮೇರೆಗೆ ವಿದ್ಯಾ ಚಿತ್ರದಲ್ಲಿ ಅತಿಥಿ ಪಾತ್ರವನ್ನು ನಿರ್ವಹಿಸಿದ್ದರು.

ಕತ್ರಿನಾ ಕೈಫ್: ಕತ್ರಿನಾ ಕೈಫ್ ಮೇರೆ ಬ್ರದರ್ ಕಿ ದುಲ್ಹಾನ್ ಮತ್ತು ಏಕ್ ಥಾ ಟೈಗರ್ ಚಿತ್ರಗಳಲ್ಲಿ ಬುರ್ಖಾ ಧರಿಸಿದ್ದರು. ಮೇರೆ ಬ್ರದರ್ ಕಿ ದುಲ್ಹಾನ್ ಚಿತ್ರದಲ್ಲಿ ಕತ್ರಿನಾ ಒಂದು ದೃಶ್ಯದಲ್ಲಿ ಬುರ್ಖಾ ಧರಿಸಿದ್ದರು ಮತ್ತು ಏಕ್ ಥಾ ಟೈಗರ್ ಚಿತ್ರದಲ್ಲಿ ಕತ್ರಿನಾ ಕೈಫ್ ಪಾಕಿಸ್ತಾನಿ ಗೂಢಚಾರಿಕೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ, ಇದರಲ್ಲಿ ಅವರು ಹಲವಾರು ಸಂದರ್ಭಗಳಲ್ಲಿ ಬುರ್ಖಾದಲ್ಲಿ ಕಾಣಿಸಿಕೊಂಡಿದ್ದಾರೆ.

ಪ್ರಿಯಾಂಕಾ ಚೋಪ್ರಾ: ಬಾಲಿವುಡ್‌ನ ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ ತಮ್ಮ ಸಾತ್ ಖೂಬ್ ಮಾಫ್ ಚಿತ್ರದಲ್ಲಿ ಹಿಜಾಬ್ ಧರಿಸಿ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿ ಪ್ರಿಯಾಂಕಾ ಖಳನಾಯಕಿಯ ಪಾತ್ರದಲ್ಲಿ ಅಭಿನಯಿಸಿದ್ದರು.

ಶ್ರದ್ಧಾ ಕಪೂರ್: ಬಾಲಿವುಡ್‌ನ ಮಿಲ್ಕಿ ಬ್ಯೂಟಿ ನಟಿ ಶ್ರದ್ಧಾ ಕಪೂರ್ 'ಹಸೀನಾ ಪಾರ್ಕರ್' ಚಿತ್ರದಲ್ಲಿ ಡಾನ್ ದಾವೂದ್ ಇಬ್ರಾಹಿಂ ಸಹೋದರಿ ಹಸೀನಾ ಪಾತ್ರವನ್ನು ನಿರ್ವಹಿಸಿದ್ದಾರೆ. ಚಿತ್ರದುದ್ದಕ್ಕೂ, ಶ್ರದ್ಧಾ ಕೆಲವೊಮ್ಮೆ ಹಿಜಾಬ್ ಮತ್ತು ಕೆಲವೊಮ್ಮೆ ಬುರ್ಖಾವನ್ನು ಧರಿಸುತ್ತಾರೆ.

ತಬು: 90 ರ ದಶಕದಲ್ಲಿ ಸುಂದರವಾಗಿ ಮತ್ತು ಅದ್ಭುತವಾಗಿ ನಟಿಸಿದ ನಟಿ ತಬು ಶಾಹಿದ್ ಕಪೂರ್ ಅವರು ನಟಿಸಿದ ಹೈದರ್ ಚಿತ್ರದಲ್ಲಿ ಗಜಲ್ ಮಿರ್ ಎಂಬ ಮುಸ್ಲಿಂ ಹುಡುಗಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಸಾಕಷ್ಟು ಪ್ರಶಂಸೆಯನ್ನು ಗಳಿಸಿತ್ತು.

ಓದಿ: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ : ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಸಂತ್ರಸ್ತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.