ETV Bharat / sitara

ರತನ್​ ಟಾಟಾ ಬಯೋಪಿಕ್​​​ನ ಫ್ಯಾನ್​​ ಮೇಡ್​ ಪೋಸ್ಟರ್​​​​​​​ ಬಗ್ಗೆ ಆರ್​. ಮಾಧವನ್ ಹೇಳಿದ್ದೇನು...?

ಆರ್. ಮಾಧವನ್ ರತನ್ ಟಾಟಾ ಬಯೋಪಿಕ್​​ನಲ್ಲಿ ನಟಿಸುತ್ತಿದ್ದಾರೆ ಎನ್ನಲಾದ ಫ್ಯಾನ್ ಮೇಡ್ ಪೋಸ್ಟರೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಆದರೆ ಇದನ್ನು ನಿರಾಕರಿಸಿರುವ ಮಾಧವನ್ ನಾನು ಅಂತಹ ಯಾವುದೇ ಸಿನಿಮಾವನ್ನು ಒಪ್ಪಿಕೊಂಡಿಲ್ಲ ಎಂದು ಹೇಳಿದ್ದಾರೆ.

author img

By

Published : Dec 14, 2020, 12:29 PM IST

Updated : Dec 14, 2020, 12:36 PM IST

Ratan Tata biopic
ರತನ್​ ಟಾಟಾ ಬಯೋಪಿಕ್

ಮೆಚ್ಚಿನ ನಟ-ನಟಿಯರು ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂದರೆ ಕೆಲವು ಅಭಿಮಾನಿಗಳು ತಮ್ಮದೇ ಕಲ್ಪನೆಯಲ್ಲಿ ಪೋಸ್ಟರ್ ಮಾಡಿ ಸೋಷಿಯಲ್ ಮೀಡಿಯಾಗೆ ಅಪ್​​​ಲೋಡ್ ಮಾಡುವುದು ಇತ್ತೀಚೆಗೆ ಟ್ರೆಂಡ್ ಆಗಿ ಹೋಗಿದೆ. ಇತ್ತೀಚೆಗಷ್ಟೇ ಪ್ರಭಾಸ್ ಅಭಿನಯದ 'ಆದಿಪುರುಷ್' ಸಿನಿಮಾ ಫ್ಯಾನ್ ಮೇಡ್ ಪೋಸ್ಟರೊಂದು ಭಾರೀ ವೈರಲ್ ಆಗಿತ್ತು. ಇದೀಗ ನಟ ಮಾಧವನ್ ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿದ್ದು,ಸಿನಿಮಾ ಪೋಸ್ಟರ್​​ ಕೂಡಾ ವೈರಲ್ ಆಗುತ್ತಿದೆ.

  • Hey unfortunately it’s not true. It was just a wish at some fans will made the poster. No such project is even on the pipeline or being discussed. https://t.co/z6dZfvOQmO

    — Ranganathan Madhavan (@ActorMadhavan) December 11, 2020 " class="align-text-top noRightClick twitterSection" data=" ">

ಇದನ್ನೂ ಓದಿ: ನಟಿ ಸಂಜನಾ ಗಲ್ರಾನಿ ಇಸ್ಲಾಂ ಧರ್ಮಕ್ಕೆ ಮತಾಂತರ...ಮೌಲ್ವಿ ವಿರುದ್ದ ದೂರು ದಾಖಲಿಸಿದ ವಕೀಲ..!

ಆರ್​. ಮಾಧವನ್ ನಟಿಸಿದ್ದ 'ನಿಶ್ಯಬ್ಧಂ' ಸಿನಿಮಾ ಇತ್ತೀಚೆಗೆ ಬಿಡುಗಡೆಯಾಗಿತ್ತು. ತಮಿಳು ಹಾಗೂ ತೆಲುಗಿನಲ್ಲಿ ತಯಾರಾಗಿದ್ದ ಈ ಸಿನಿಮಾ ಅಮೆಜಾನ್​​​​​​ ಪ್ರೈಂನಲ್ಲಿ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಕೂಡಾ ಪಡೆದಿತ್ತು. ಇದೀಗ ಅವರು ರತನ್ ಟಾಟಾ ಬಯೋಪಿಕ್​ನಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿದ್ದು ಫ್ಯಾನ್ ಮೇಡ್ ಪೋಸ್ಟರ್​​​​ವೊಂದು ಭಾರೀ ವೈರಲ್ ಆಗುತ್ತಿದೆ. ಆದರೆ ಮಾಧವನ್ ಮಾತ್ರ ಇದನ್ನು ನಿರಾಕರಿಸಿದ್ದು ಇದೆಲ್ಲಾ ಸುಳ್ಳುಸುದ್ದಿ ನಾನು ಈ ರೀತಿಯ ಯಾವುದೇ ಪ್ರಾಜೆಕ್ಟ್​​​​ನಲ್ಲಿ ನಟಿಸುತ್ತಿಲ್ಲ ಎಂದು ಹೇಳಿದ್ದಾರೆ. ಪೋಸ್ಟರ್​​ವೊಂದನ್ನು ಟ್ವಿಟ್ಟರ್​​​​​​​ನಲ್ಲಿ ಹಂಚಿಕೊಂಡಿರುವ ಮಾಧವನ್ ಅಭಿಮಾನಿ, "ಮಾಧವನ್ ಇದು ನಿಜಾನಾ..ರತನ್ ಟಾಟಾ ಅವರ ಬಯೋಪಿಕ್​​​ನಲ್ಲಿ ನೀವು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದೀರಾ...?ಒಂದು ವೇಳೆ ಹೌದು ಎಂದಾದಲ್ಲಿ ನಿಜಕ್ಕೂ ಈ ಸಿನಿಮಾ ನಿಜಕ್ಕೂ ಎಲ್ಲರಿಗೂ ಸ್ಫೂರ್ತಿಯಾಗಲಿದೆ" ಎಂದು ಟ್ವೀಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಮಾಧವನ್, ಇದು ಸುಳ್ಳುಸುದ್ದಿ, ನಾನು ಆ ಚಿತ್ರದಲ್ಲಿ ನಟಿಬೇಕು ಎಂದು ಆಸೆ ಪಟ್ಟ ಅಭಿಮಾನಿಗಳು ಈ ರೀತಿ ಮಾಡಿರಬಹುದು, ಆದರೆ ಅಂತಹ ಯಾವುದೇ ಸಿನಿಮಾ ಬಗ್ಗೆ ಯಾರೂ ನನ್ನ ಬಗ್ಗೆ ಚರ್ಚಿಸಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

Last Updated : Dec 14, 2020, 12:36 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.