ದಿವಂಗತ ನೃತ್ಯ ಸಂಯೋಜಕಿ ಸರೋಜ್ ಖಾನ್ ಮತ್ತು ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಕಾಂಬಿನೇಷನ್ನಲ್ಲಿ ಅನೇಕ ಹಾಡುಗಳು ಸೂಪರ್ ಹಿಟ್ ಆಗಿವೆ. ಖ್ಯಾತ ನೃತ್ಯ ಸಂಯೋಜಕಿ ಸರೋಜ್ ಖಾನ್, ಜುಲೈ 3ರ ಶುಕ್ರವಾರ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ತಮ್ಮ ಗುರು ಸರೋಜ್ ಖಾನ್ ಅವರ ಅಗಲಿಕೆಗೆ ನಟಿ ಮಾಧುರ ದೀಕ್ಷಿತ್ ಸಂತಾಪ ಸೂಚಿಸಿದ್ದಾರೆ. ಅಲ್ಲದೇ ತಮ್ಮ ಹಾಗೂ ಸರೋಜ್ ನಡುವಿನ ಬಾಂಧವ್ಯದ ಕುರಿತಾದ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಮಾಧುರಿ ದೀಕ್ಷಿತ್, ಸರೋಜ್ ಜಿ ಅವರೊಂದಿಗಿನ ಪ್ರತಿ ಸಂಭಾಷಣೆಯೂ ಜ್ಞಾನ, ಸ್ಫೂರ್ತಿ ಮತ್ತು ಶಕ್ತಿಯಿಂದ ತುಂಬಿತ್ತು. ಅವರು ಜೀವನವನ್ನು ಹಾಗೆಯೇ ಬದುಕಿದರು. ನಾನು ಅವರನ್ನು ಯಾವಾಗಲೂ ನೆನಪಿಸಿಕೊಳ್ಳುತ್ತೇನೆ ಎಂದು ಬರೆದಿದ್ದಾರೆ.
-
Every conversation with Saroj ji was full of knowledge, inspiration and energy. That's how she lived life and that is how I will always remember her ♥️ pic.twitter.com/fzOPg2FU9N
— Madhuri Dixit Nene (@MadhuriDixit) July 4, 2020 " class="align-text-top noRightClick twitterSection" data="
">Every conversation with Saroj ji was full of knowledge, inspiration and energy. That's how she lived life and that is how I will always remember her ♥️ pic.twitter.com/fzOPg2FU9N
— Madhuri Dixit Nene (@MadhuriDixit) July 4, 2020Every conversation with Saroj ji was full of knowledge, inspiration and energy. That's how she lived life and that is how I will always remember her ♥️ pic.twitter.com/fzOPg2FU9N
— Madhuri Dixit Nene (@MadhuriDixit) July 4, 2020
ಮಾಧುರಿ ಹಂಚಿಕೊಂಡಿರುವ ವಿಡಿಯೋ ‘ಏಕ್ ದೋ ತೀನ್ ಚಾರ್’ ಹಾಡಿಗೆ ಮಾಧುರಿ ಮತ್ತು ಸರೋಜ್ ಹೆಜ್ಜೆ ಹಾಕುವುದರೊಂದಿಗೆ ಪ್ರಾರಂಭವಾಗುತ್ತದೆ. ‘ಮೇರಾ ಪಿಯಾ ಘರ್ ಆಯಾ..’, ‘ದಖ್ ದಖ್ ಕರನೇ ಲಗಾ’, ‘ಚೋಲಿ ಕೇ ಪೀಚೆ ಕ್ಯಾ ಯೇ’ ಸೇರಿದಂತೆ ಅನೇಕ ಸೂಪರ್ ಹಿಟ್ ಹಾಡುಗಳು ಸರೋಜ್ ಖಾನ್ ಮತ್ತು ಮಾಧುರಿ ದೀಕ್ಷಿತ್ ಕಾಂಬಿನೇಷನ್ನಲ್ಲಿ ಮೂಡಿ ಬಂದಿವೆ. ಇದೀಗ ತನ್ನ ಗುರು, ಸ್ನೇಹಿತೆ ಸರೋಜ್ ನಿಧನಕ್ಕೆ ಮಾಧುರಿ ಕಂಬನಿ ಮಿಡಿದಿದ್ದಾರೆ.