ETV Bharat / sitara

'ನಾವು ತುಂಬಾ ಸಂತೋಷವಾಗಿದ್ದೇವೆ': ವಿಚ್ಛೇದನದ ಬಗ್ಗೆ ಅಮೀರ್ ಖಾನ್, ಕಿರಣ್ ರಾವ್ ಹೇಳಿಕೆ - ವಿಚ್ಛೇದನದ ಬಗ್ಗೆ ಅಮೀರ್ ಖಾನ್, ಕಿರಣ್ ರಾವ್ ಮಾತು

ಭಾನುವಾರ ನಡೆದ ವರ್ಚುವಲ್ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅಮೀರ್​ ಮತ್ತು ಕಿರಣ್, ಈ 15 ಸುಂದರ ವರ್ಷಗಳಲ್ಲಿ ನಾವು ಒಟ್ಟಿಗೆ ಅನುಭವ, ಸಂತೋಷ ಹಂಚಿಕೊಂಡಿದ್ದೇವೆ. ಇನ್ನು ಮುಂದೆ ಗಂಡ ಮತ್ತು ಹೆಂಡತಿಯಾಗಿ ಅಲ್ಲ, ಆದರೆ ಪರಸ್ಪರ ಪೋಷಕರು ಮತ್ತು ಕುಟುಂಬವಾಗಿ ನಮ್ಮ ಸಂಬಂಧ ಮುಂದುವರೆಸಲು ಇಚ್ಛಿಸುತ್ತೇವೆ ಎಂದು ಹೇಳಿದ್ದಾರೆ.

Aamir Khan on divorce with Kiran Rao
ವಿಚ್ಛೇದನದ ಬಗ್ಗೆ ಅಮೀರ್ ಖಾನ್, ಕಿರಣ್ ರಾವ್ ಮಾತು
author img

By

Published : Jul 4, 2021, 3:35 PM IST

ಹೈದರಾಬಾದ್: ಬಾಲಿವುಡ್ ನಟ ಅಮೀರ್ ಖಾನ್ ತಮ್ಮ ಎರಡನೇ ಪತ್ನಿ ಕಿರಣ್ ರಾವ್ ಜತೆಗಿನ 15 ವರ್ಷಗಳ ದಾಂಪತ್ಯಕ್ಕೆ ಇತಿಶ್ರೀ ಹಾಡಿದ್ದಾರೆ. ವಿಚ್ಛೇದನದ ಬಗ್ಗೆ ಮಾತನಾಡಿರುವ ಖಾನ್‌, ನಾನು ಮತ್ತು ಕಿರಣ್ ಜೀವನದಲ್ಲಿ ತುಂಬಾ ಸಂತೋಷವಾಗಿರುವುದಾಗಿ ತಿಳಿಸಿದ್ದಾರೆ.

ಈ ಕುರಿತು ಜಂಟಿ ಹೇಳಿಕೆ ನೀಡಿದ ಅಮೀರ್​ ಮತ್ತು ಕಿರಣ್, ತಮ್ಮ ಜಂಟಿ ಉದ್ಯಮವಾದ ಪಾನಿ ಫೌಂಡೇಶನ್‌ನ ಚಿತ್ರಗಳಿಗಾಗಿ ಒಟ್ಟಿಗೆ ಕೆಲಸ ಮುಂದುವರೆಸುವುದಾಗಿ ಅಭಿಮಾನಿಗಳಿಗೆ ಹೇಳಿದ್ದಾರೆ.

ವಿಚ್ಛೇದನದ ಬಗ್ಗೆ ಅಮೀರ್ ಖಾನ್, ಕಿರಣ್ ರಾವ್ ಮಾತು

"ಈ 15 ಸುಂದರ ವರ್ಷಗಳಲ್ಲಿ ನಾವು ಒಟ್ಟಿಗೆ ಅನುಭವಗಳು, ಸಂತೋಷ ಹಂಚಿಕೊಂಡಿದ್ದೇವೆ. ನಮ್ಮ ಸಂಬಂಧವು ನಂಬಿಕೆ, ಗೌರವ ಮತ್ತು ಪ್ರೀತಿಯಲ್ಲಿ ಮಾತ್ರ ಬೆಳೆದಿದೆ. ಈಗ ನಾವು ನಮ್ಮ ಜೀವನದಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸಲು ಇಷ್ಟಪಡುತ್ತೇವೆ. ಇನ್ನು ಮುಂದೆ ಗಂಡ ಮತ್ತು ಹೆಂಡತಿಯಾಗಿ ಅಲ್ಲ, ಆದರೆ ಪರಸ್ಪರ ಪೋಷಕರು ಮತ್ತು ಕುಟುಂಬವಾಗಿ ನಮ್ಮ ಸಂಬಂಧ ಮುಂದುವರೆಸಲು ಇಚ್ಛಿಸುತ್ತೇವೆ" ಎಂದು ಹೇಳಿದ್ದಾರೆ.

ಇದನ್ನೂ ಓದಿ: 'ಕಿರಣ್​ ರಾವ್​​​ ಇಲ್ಲದೇ ಜೀವನ ಊಹಿಸಿಕೊಳ್ಳಲು ಸಾಧ್ಯವಿಲ್ಲ' ಎಂದಿದ್ದ ಅಮೀರ್​!

"ನಾವು ಸ್ವಲ್ಪ ಸಮಯದ ಹಿಂದೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದೆವು. ಇದೀಗ ವಿಚ್ಛೇದನ ದೊರೆತಿದ್ದು, ಪ್ರತ್ಯೇಕವಾಗಿ ವಾಸಿಸುತ್ತಿದ್ದೇವೆ. ನಾವು ನಮ್ಮ ಮಗ ಆಜಾದ್‌ಗೆ ಪೋಷಕರಾಗಿ ಉಳಿದಿದ್ದೇವೆ, ಆತನನ್ನು ನಾವು ಒಟ್ಟಿಗೆ ಪೋಷಿಸುತ್ತೇವೆ ಮತ್ತು ಬೆಳೆಸುತ್ತೇವೆ. ಚಲನಚಿತ್ರಗಳು, ಪಾನಿ ಫೌಂಡೇಶನ್ ಮತ್ತು ನಾವು ಆಸಕ್ತಿ ಹೊಂದಿರುವ ಇತರ ಯೋಜನೆಗಳ ಸಹಯೋಗಿಗಳಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ"ಎಂದು ತಿಳಿಸಿದ್ದಾರೆ.

"ಲಗಾನ್" ಚಿತ್ರದ ಸೆಟ್​ನಲ್ಲಿ ಅಶುತೋಷ್ ಗೋವಾರಿಕರ್ ಅವರಿಗೆ ಸಹಾಯಕ ನಿರ್ದೇಶಕರಾಗಿದ್ದ ಕಿರಣ್ ಅವರನ್ನು ಅಮೀರ್ 2005 ರಲ್ಲಿ ವಿವಾಹವಾದರು. 2011 ರಲ್ಲಿ ಬಾಡಿಗೆ ತಾಯ್ತನದ ಮೂಲಕ ಮಗ ಆಜಾದ್ ರಾವ್ ಖಾನ್​ನನ್ನು ಪಡೆದರು. ಇದೀಗ 15 ವರ್ಷಗಳ ಬಳಿಕ ವಿಚ್ಛೇದನ ಪಡೆದಿದ್ದಾರೆ.

ಇದನ್ನೂ ಓದಿ: Divorce ಘೋಷಿಸಿದ ಅಮೀರ್​ಖಾನ್​-ಕಿರಣ್​ ರಾವ್​.. 15 ವರ್ಷದ ದಾಂಪತ್ಯಕ್ಕೆ ಫುಲ್​ ಸ್ಟಾಪ್​!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.