ETV Bharat / sitara

ಮೋದಿ ಬಯೋಪಿಕ್ ವಿವಾದ​: ಆಯೋಗದ ತೀರ್ಮಾನಕ್ಕೆ ಫುಲ್​ ಖಷ್​ ಆದ ವಿವೇಕ್​ ಒಬೆರಾಯ್​ - ಬಯೋಪಿಕ್

ಇದೇ 11 ಕ್ಕೆ ತೆರೆ ಕಾಣಬೇಕಿದ್ದ 'ಪಿಎಂ ಮೋದಿ' ಬಯೋಪಿಕ್​ಗೆ ಬಿಡುಗಡೆ ಭಾಗ್ಯ ಸಿಕ್ಕಿರಲಿಲ್ಲ. ಚುನಾವಣೆ ಮೇಲೆ ಈ ಸಿನಿಮಾ ಪ್ರಭಾವ ಬೀರಲಿದೆ ಎಂದು ಪ್ರತಿಪಕ್ಷಗಳು ಚಿತ್ರ ಬಿಡುಗಡೆ ವಿರುದ್ಧ ಕೋರ್ಟ್​ ಮೆಟ್ಟಿಲೇರಿದ್ದರು.

ನಟ ವಿವೇಕ್
author img

By

Published : Apr 18, 2019, 7:42 PM IST

ಪ್ರಧಾನಿ ನರೇಂದ್ರ ಮೋದಿ ಬಯೋಪಿಕ್ 'ಪಿಎಂ ಮೋದಿ'ಗೆ ಎದುರಾಗಿದ್ದ ಅಡೆತಡೆಗಳು ಕೊನೆಗೂ ದೂರುವಾದಂತಿವೆ. ಶೀಘ್ರದಲ್ಲೇ ತೆರೆಯ ಮೇಲೆ ಮೋದಿ ಚಿತ್ರ ಬರುವುದು ಪಕ್ಕಾ ಆದಂತಾಗಿದೆ.

ಚುನಾವಣೆ ಹಿನ್ನೆಲೆ 'ಪಿಎಂ ಮೋದಿ' ಬಯೋಪಿಕ್​ ರಿಲೀಸ್​ಗೆ ಕಾಂಗ್ರೆಸ್​​ ಹಾಗೂ ಪ್ರತಿಪಕ್ಷಗಳು ಅಡ್ಡಗಾಲು ಹಾಕಿದ್ದವು. ಈ ಚಿತ್ರದ ವಿವಾದ ಸುಪ್ರೀಂ ಕೋರ್ಟ್​​ ಅಂಗಳಕ್ಕೂ ಕಾಲಿಟ್ಟಿತ್ತು. ಅಲ್ಲಿಂದ ಚುನಾವಣೆ ಆಯೋಗಕ್ಕೆ ಇದು ಶಿಫ್ಟ್ ಆಗಿತ್ತು. ಅಧಿಕಾರಿಗಳು ಸಿನಿಮಾ ನೋಡಿ ಆಮೇಲೆ ಬಿಡುಗಡೆ ಬಗ್ಗೆ ನಿರ್ಧರಿಸಲಿ ಎಂದು ಇದೇ ಸೋಮವಾರ ಸುಪ್ರೀಂ ಪೀಠ ಅಭಿಪ್ರಾಯಿಸಿತ್ತು. ಅದರಂತೆ ಬುಧವಾರ ಚುನಾವಣಾ ಅಧಿಕಾರಿಗಳು ಪಿಎಂ ಮೋದಿ ಚಿತ್ರ ನೋಡಿದ್ದಾರೆ.

ಇಂದು ಚುನಾವಣಾ ಆಯೋಗ ಭೇಟಿ ಮಾಡಿರುವ ಮೋದಿ ಪಾತ್ರಧಾರಿ ನಟ ವಿವೇಕ್ ಒಬೆರಾಯ್​, ಖುಷಿ ಖುಷಿಯಾಗೇ ಕಚೇರಿಯಿಂದ ಹೊರ ಬಂದಿದ್ದಾರೆ. ಚಿತ್ರದ ಬಗ್ಗೆ ಅಧಿಕಾರಿಗಳಿಂದ ಒಳ್ಳೆಯ ಅಭಿಪ್ರಾಯ ವ್ಯಕ್ತವಾಗಿದೆ. ಅವರು ಏನು ಹೇಳಿದ್ರು ಎಂಬುದನ್ನು ನಿಮ್ಮ ಮುಂದೆ ನಾನು ಹೇಳಲಾರೆ. ಆದರೆ,ಅವರು ನೀಡಿರುವ ಉತ್ತರದಿಂದ ನಾವು ಖುಷಿಯಾಗಿದ್ದೇವೆ ಎಂದಿದ್ದಾರೆ. ಈ ಚಿತ್ರದಲ್ಲಿ ಯಾವುದೇ ರಾಜಕೀಯ ಅಜೆಂಡಾಗಳಿಲ್ಲ. ಶೀಘ್ರದಲ್ಲೇ ಸಿನಿಮಾ ಬಿಡುಗಡೆಯಾಗಬಹುದು ಎನ್ನುವ ನಿರೀಕ್ಷೆಯಿದೆ ಎಂದು ವಿವೇಕ್ ಹೇಳಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಓಮಂಗ್ ಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಮೋದಿ ಪಾತ್ರದಲ್ಲಿ ಬಾಲಿವುಡ್ ನಟ ವಿವೇಕ್ ಒಬೆರಾಯ್ ನಟಿಸಿದ್ದಾರೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.