ಹೈದರಾಬಾದ್ : ಬಾಲಿವುಡ್ ನಟ ರಣ್ವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಭಾನುವಾರ (ಆಗಸ್ಟ್ 22) ರಣ್ವೀರ್ ಸಿಂಗ್ ತಾಯಿ ಅಂಜು ಭಾವನಾನಿಯವರ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.
- " class="align-text-top noRightClick twitterSection" data="
">
ಈ ದಿನದಂದು ರಣ್ವೀರ್ ಹಾಗೂ ದೀಪಿಕಾ ತಮ್ಮ ಆಪ್ತರಿಗೆ ಮುಂಬೈನ ವರ್ಲಿಯಾ ಬಾಸ್ಟಿಯನ್ನಲ್ಲಿ ಔತಣ ಕೂಟ ಏರ್ಪಡಿಸಿದ್ದರು. ಈ ವೇಳೆ ರಣ್ವೀರ್ ಸಿಂಗ್ ಬನಿಯನ್ನಲ್ಲಿ ದೀಪಿಕಾ ಮುಂದೆ ಡ್ಯಾನ್ಸ್ ಮಾಡಿದ್ದಾರೆ. ಸದ್ಯ ರಣ್ವೀರ್ ಡ್ಯಾನ್ಸ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ವೀಡಿಯೋದಲ್ಲಿ ದೀಪಿಕಾ ಸೋಫಾ ಮೇಲೆ ಕುಳಿತುಕೊಂಡಿದ್ದಾರೆ. ಆಗ ರಣ್ವೀರ್ ದೀಪಿಕಾರನ್ನು ಮೆಚ್ಚಿಸಲು ಬನಿಯನ್ನಲ್ಲಿ ಡ್ಯಾನ್ಸ್ ಮಾಡಿದ್ದಾರೆ. ಈ ವೇಳೆ ದೀಪಿಕಾ ರಣ್ವೀರ್ ಡ್ಯಾನ್ಸ್ ನೋಡಿ ನಾಚಿ ನೀರಾಗಿದ್ದಾರೆ.
- " class="align-text-top noRightClick twitterSection" data="
">
ಇದನ್ನೂ ಓದಿ: "1 ಕೋಟಿ ರೂ. ನೀಡಿ" ಎಂದ ನೆಟ್ಟಿಗ: ಸೋನು ಸೂದ್ ಪ್ರತಿಕ್ರಿಯೆ ಹೀಗಿದೆ...
ಮತ್ತೊಂದು ವಿಡಿಯೋದಲ್ಲಿ ರಣ್ವೀರ್ ಹಾಗೂ ದೀಪಿಕಾ ಅಭಿನಯದ ಸೂಪರ್ ಹಿಟ್ ‘ಪದ್ಮಾವತ್’ ಸಿನಿಮಾದ ‘ಖಾಲಿಬಲಿ’ ಹಾಡಿಗೆ ರಣ್ವೀರ್ ತಮ್ಮ ತಂದೆ ಜಗಜೀತ್ ಸಿಂಗ್ ಜೊತೆ ಸ್ಟೆಪ್ಸ್ ಹಾಕಿದ್ದಾರೆ. ಈ ಬರ್ತ್ಡೇ ಕಾರ್ಯಕ್ರಮದಲ್ಲಿ ದೀಪಿಕಾ ಪೋಷಕರಾದ ಪ್ರಕಾಶ್ ಮತ್ತು ಉಜ್ಜಲಾ ಪಡುಕೋಣೆ, ಜಗಜೀತ್ ಸಿಂಗ್, ಸಹೋದರಿ ರಿತಿಕಾ ಭಾವನಾನಿ ಸೇರಿದಂತೆ ಕುಟುಂಬಸ್ಥರು ಪಾಲ್ಗೊಂಡಿದ್ದರು.
- " class="align-text-top noRightClick twitterSection" data="
">