ETV Bharat / sitara

ಅಮೆರಿಕಾದಲ್ಲಿ 'ಲೈಗರ್'​ ತಂಡ.. ಸಿನಿಮಾ ಚಿತ್ರೀಕರಣ ಫೋಟೋ ಇನ್​ಸ್ಟಾದಲ್ಲಿ ಹಂಚಿಕೊಂಡ ರೌಡಿಬಾಯ್​ ವಿಜಯ್​ ದೇವರಕೊಂಡ.. - ಅಮೆರಿಕಾದಲ್ಲಿ ಲೈಗರ್ ಸಿನಿಮಾ ತಂಡ

ನಟ ವಿಜಯ್​ ದೇವರಕೊಂಡ, ಬಾಕ್ಸಿಂಗ್​ ದಂತಕಥೆ ಮೈಕ್ ಟೈಸನ್​, ನಾಯಕಿ ಅನನ್ಯಾ ಪಾಂಡೆ, ನಿರ್ದೇಶಕ ಪೂರಿ ಜಗನ್ನಾಥ್ ಮತ್ತು ಸಹ-ನಿರ್ಮಾಪಕಿ ಚಾರ್ಮಿ ಕೌರ್ ಅವರ ಜೊತೆ ಒಟ್ಟಾಗಿ ನಿಂತುಕೊಂಡ ಫೋಟೋವನ್ನು ತಮ್ಮ Instagramನಲ್ಲಿ ಹರಿಬಿಟ್ಟಿರುವ ವಿಜಯ್​ ದೇವರಕೊಂಡ 'ಹಲೋ ಫ್ರಂ ಲಾಸ್​ಏಂಜಲೀಸ್​' ಎಂದು ಬರೆದುಕೊಂಡಿದ್ದಾರೆ..

vijay deverakonda
ಅಮೆರಿಕಾದಲ್ಲಿ ಲೈಗರ್ ತಂಡ
author img

By

Published : Nov 28, 2021, 5:23 PM IST

ಹೈದರಾಬಾದ್​(ತೆಲಂಗಾಣ): ಬಹುನಿರೀಕ್ಷಿತ- ಪ್ಯಾನ್​ ಇಂಡಿಯಾ ಸಿನಿಮಾ 'ಲೈಗರ್'​ ಚಿತ್ರೀಕರಣ ಅಮೆರಿಕಾದಲ್ಲಿ ನಡೆಯುತ್ತಿದ್ದು, ಚಿತ್ರೀಕರಣದ ಕೆಲ ಫೋಟೋಗಳನ್ನು ನಟ ವಿಜಯ್​ ದೇವರಕೊಂಡ ತಮ್ಮ ಅಭಿಮಾನಿಗಳಿಗಾಗಿ ಅವರ ಅಧಿಕೃತ ಇನ್​ಸ್ಟಾಗ್ರಾಮ್​ನಲ್ಲಿ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ನಟ ವಿಜಯ್​ ದೇವರಕೊಂಡ, ಬಾಕ್ಸಿಂಗ್​ ದಂತಕಥೆ ಮೈಕ್ ಟೈಸನ್​, ನಾಯಕಿ ಅನನ್ಯಾ ಪಾಂಡೆ, ನಿರ್ದೇಶಕ ಪೂರಿ ಜಗನ್ನಾಥ್ ಮತ್ತು ಸಹ-ನಿರ್ಮಾಪಕಿ ಚಾರ್ಮಿ ಕೌರ್ ಅವರ ಜೊತೆ ಒಟ್ಟಾಗಿ ನಿಂತುಕೊಂಡ ಫೋಟೋವನ್ನು ತಮ್ಮ Instagramನಲ್ಲಿ ಹರಿಬಿಟ್ಟಿರುವ ವಿಜಯ್​ ದೇವರಕೊಂಡ, 'ಹಲೋ ಫ್ರಂ ಲಾಸ್​ಏಂಜಲೀಸ್​' ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಪುನೀತ್​ ರಾಜ್​ ಕುಮಾರ್ ಅಭಿಮಾನಿಯ ಕಷ್ಟಕ್ಕೆ ಸ್ಪಂದಿಸಿದ ಕಿಚ್ಚ ಸುದೀಪ್

ಸದ್ಯ ಸಿನಿಮಾದ ಕ್ಲೈಮ್ಯಾಕ್ಸ್​ ದೃಶ್ಯಗಳ ಚಿತ್ರೀಕರಣ ನಡೆಯುತ್ತಿದೆ. ​ಸಿನಿಮಾ ಸದ್ಯದಲ್ಲೇ ಸೆಟ್ಟೇರಲಿದೆ ಎನ್ನಲಾಗಿದೆ. ಈ ಮೂಲಕ ತೆಲುಗು ನಟ ವಿಜಯ್​ ದೇವರಕೊಂಡ ಬಾಲಿವುಡ್​ಗೆ ಎಂಟ್ರಿ ಕೊಟ್ಟರೆ, ಬಾಲಿವುಡ್​ ನಟಿ ಅನನ್ಯಾ ಪಾಂಡೆ ಟಾಲಿವುಡ್​ಗೆ ಪದಾರ್ಪಣೆ ಮಾಡಲಿದ್ದಾರೆ.

ವಿಶೇಷವೆಂದರೆ ಬಾಕ್ಸಿಂಗ್​ ದಂತಕತೆ ಮೈಕ್​​ ಟೈಸನ್​ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ಹಿಂದಿ, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂನಲ್ಲಿ ಏಕಕಾಲದಲ್ಲಿ ಬಿಡುಗಡೆ ಕಾಣಲಿದೆ ಎನ್ನಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.