ETV Bharat / sitara

Watch: ಕಿಯಾರಾ ಅಡ್ವಾಣಿಯ ಮಾಸ್ಕ್​ ತೆಗೆಯಲು ಸಹಕರಿಸಿದ ಅಮೀರ್ ಖಾನ್ - ಕಿಯಾರಾ ಅಡ್ವಾಣಿಯ ಮಾಸ್ಕ್​ ತೆಗೆಯಲು ಸಹಕರಿಸುತ್ತಿರುವ ಅಮೀರ್ ಖಾನ್

ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ವೇದಿಕೆ ಮೇಲೆ ಮಾಸ್ಕ್ ತೆಗೆಯಲು ಹರಸಾಹಸ ಪಡುತ್ತಿದ್ದ ನಟಿಗೆ ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ಸಹಾಯ ಮಾಡಿರುವ ವಿಡಿಯೋ ಇಲ್ಲಿದೆ.

aamir khan kiara advani viral video
ಯಾರಾ ಅಡ್ವಾಣಿಯ ಮಾಸ್ಕ್​ ತೆಗೆಯಲು ಸಹಕರಿಸುತ್ತಿರುವ ಅಮೀರ್ ಖಾನ್
author img

By

Published : Aug 14, 2021, 2:24 PM IST

ಹೈದರಾಬಾದ್: ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ಮತ್ತು ಖ್ಯಾತ ನಟಿ ಕಿಯಾರಾ ಅಡ್ವಾಣಿ ಅವರು ಬುಧವಾರ ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ಕಿಯಾರಾ ಅವರ ಮಾಸ್ಕ್​ ತೆಗೆಯಲು ಅಮೀರ್ ಖಾನ್ ಸಹಕರಿಸುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ ಆಗಿದೆ.

ಬ್ರಾಂಡ್​ವೊಂದರ ಅಂಬಾಸಿಡರ್​​ಗಳಾಗಿರುವ ಅಮೀರ್ ಮತ್ತು ಕಿಯಾರಾ, ಕಂಪನಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ಫೇಸ್​ ಮಾಸ್ಕ್​ ಧರಿಸಿ ಬಂದು ವೇದಿಕೆ ಮೇಲೆ ಬಂದರು. ಮಾಸ್ಕ್​ ತೆಗೆಯುವ ಸಂದರ್ಭ ಕಿಯಾರಾ ಅವರ ಮಾಸ್ಕ್​ ಕಿವಿಯೋಲೆಗೆ ಸಿಕ್ಕಿಹಾಕಿಕೊಂಡಿತ್ತು. ಅದನ್ನು ಬಿಡಿಸಲು ಹರಸಾಹಸ ಪಡುತ್ತಿದ್ದ ನಟಿಗೆ ಅಮೀರ್​ ಸಹಾಯ ಮಾಡಿದ್ದಾರೆ.

ಇದನ್ನೂ ಓದಿ: 'ಲಾಲ್​ಸಿಂಗ್ ಚಡ್ಡಾ' ಶೂಟಿಂಗ್​​: ಲಾಲ್ ಭೇಟಿಯಾದ 'ಬಾಲಾ' ನಾಗಚೈತನ್ಯ

ಕಾರ್ಗಿಲ್ ಯುದ್ಧದ ನಾಯಕ ಕ್ಯಾಪ್ಟನ್ ವಿಕ್ರಮ್ ಬಾತ್ರಾ ಅವರ ಜೀವನಚರಿತ್ರೆಯಾದ 'ಶೇರ್​ ಶಾ' ಸಿನಿಮಾದಲ್ಲಿನ ತಮ್ಮ ನಟನೆಗಾಗಿ ಕಿಯಾರಾ ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯುತ್ತಿದ್ದರೆ, ನಟ ಅಮೀರ್​ ಖಾನ್​ ಸದ್ಯ 'ಲಾಲ್ ಸಿಂಗ್ ಚಡ್ಡಾ' ಚಿತ್ರದ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.