ETV Bharat / sitara

ವಿಕ್ಕಿ ಕೌಶಲ್ ಪರ್ಪಲ್ ಹ್ಯಾಟ್ ರ್ಯಾಪ್ ವಿಡಿಯೋ: ಫಿದಾ ಆದ ಫ್ಯಾನ್ಸ್​ - ವಿಕ್ಕಿ ಕೌಶಲ್

ಬಾಲಿವುಡ್​ ನಟ ವಿಕ್ಕಿ ಕೌಶಲ್ ಪರ್ಪಲ್ ಹ್ಯಾಟ್ ರ್ಯಾಪ್ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದನ್ನು ಕಂಡ ಅಭಿಮಾನಿಗಳು, ಸೆಲೆಬ್ರಿಟಿಗಳು ಮೆಚ್ಚುಗೆ ಸೂಚಿಸಿದ್ದಾರೆ.

Vicky Kaushal
ವಿಕ್ಕಿ ಕೌಶಲ್
author img

By

Published : Jul 19, 2021, 12:31 PM IST

ಹೈದರಾಬಾದ್: ಬಾಲಿವುಡ್​ ನಟ ವಿಕ್ಕಿ ಕೌಶಲ್ ತಮ್ಮ ರ್ಯಾಪ್​ ವಿಡಿಯೋವೊಂದನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳು ಫಿದಾ ಆಗಿದ್ದಾರೆ. ರ್ಯಾಪ್​ ಸಾಂಗ್​ನ್ನು ಅನುಕರಣೆ ಮಾಡುವ ವಿಡಿಯೋ ಇದಾಗಿದ್ದು, ದೀಪಿಕಾ ಪಡುಕೋಣೆ, ಆಯುಷ್ಮಾನ್ ಖುರಾನಾ ಮತ್ತು ಹೃತಿಕ್ ರೋಶನ್ ಸೇರಿ ಅನೇಕ ಬಾಲಿವುಡ್​ ಸೆಲೆಬ್ರಿಟಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಭಾನುವಾರದಂದು ವಿಕ್ಕಿ ಪರ್ಪಲ್ ಹ್ಯಾಟ್ ರ್ಯಾಪ್ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿಕ್ಕಿ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ದೀಪಿಕಾ ಮೆಚ್ಚುಗೆ ಸೂಚಿಸಿ ಕಮೆಂಟ್​ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಹೃತಿಕ್​ ರೋಷನ್​ "ಹೊಸದಾಗಿ ಪ್ರತಿಭೆಯೊಂದು ಬಹಿರಂಗಗೊಂಡಿದೆ" ಎಂದು ಕಮೆಂಟ್​ ಮಾಡಿದ್ದಾರೆ.

ಯಾವಾಗಲೂ ವಿಕ್ಕಿಯ ಪೋಸ್ಟ್‌ಗಳ ಬಗ್ಗೆ ತಮಾಷೆಯಾಗಿ ಕಮೆಂಟ್​ ಮಾಡುವ ಅವರ ಸಹೋದರ ಈ ಬಾರಿಯೂ ಆ ಅವಕಾಶವನ್ನು ಮಿಸ್​ ಮಾಡಿಕೊಂಡಿಲ್ಲ. "ಎಂತಹ ಅದ್ಭುತ ಲಿಪ್​ ಮೂವ್​ಮೆಂಟ್​. ಇದು ಕಂಪ್ಯೂಟರ್ ಗ್ರಾಫಿಕ್ಸ್, ವ್ಹಾವ್" ಎಂದು ತಮಾಷೆ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.