ETV Bharat / sitara

ಹೌ ಈಸ್​ ದ ಜೋಶ್​... ಯೋಧರಿಗಾಗಿ ರೊಟ್ಟಿ ತಟ್ಟಿದ ಉರಿ ಚಿತ್ರದ ಹೀರೋ - vicky-kaushal

ಬಾಲಿವುಡ್​ ನಟ ವಿಕ್ಕಿ ಕೌಶಾಲ್​ ಭಾರತೀಯ ಯೋಧರಿಗೆ ರೊಟ್ಟಿ ತಯಾರಿಸಿ ಉಣಬಡಿಸಿದ್ದಾರೆ.

ಚಿತ್ರಕೃಪೆ: ಇನ್​ಸ್ಟಾಗ್ರಾಂ
author img

By

Published : Aug 2, 2019, 3:29 PM IST

How's the josh ಎಂದು ಬಾಲಿವುಡ್​​ಲ್ಲಿ ಅಬ್ಬರಿಸಿದ್ದ ನಟ ವಿಕ್ಕಿ ಕೌಶಾಲ್​ ಭಾರತೀಯ ಸೈನಿಕರ ಜತೆಗಿನ ನಂಟು ಗಟ್ಟಿಗೊಳಿಸಿದ್ದಾರೆ. ಕಳೆದ ವರ್ಷ ತೆರೆಕಂಡಿದ್ದ ಉರಿ ಚಿತ್ರದ ಮೂಲಕ ವೀರ ಯೋಧರ ತಾಕತ್ತು ಸಾರಿ ಹೇಳಿದ್ದ ಈ ನಟ, ಸದ್ಯ ಸೈನಿಕರ ಸೇವೆ ಮಾಡಿದ್ದಾರೆ. ಭಾರತೀಯ ಯೋಧರಿಗೆ ರೊಟ್ಟಿ ತಯಾರಿಸಿ ಉಣಬಡಿಸಿದ್ದಾರೆ.

ವಿಕ್ಕಿ, ನಿನ್ನೆಯಷ್ಟೆ ಅರುಣಾಚಲ ಪ್ರದೇಶದ ಇಂಡೋ-ಚೀನಾ ಗಡಿ ಪ್ರದೇಶ ತವಾಂಗ್​​ನ ಸೇನಾ ಕ್ಯಾಂಪ್​​ಗೆ ಭೇಟಿ ನೀಡಿದ್ದರು. ಕೆಲ ಹೊತ್ತು ಅಲ್ಲಿಯ ಸೈನಿಕರ ಜತೆ ಕಾಲ ಕಳೆದಿದ್ದಾರೆ. ಈ ವೆಳೆ ಯೋಧರ ಊಟಕ್ಕೆ ತಾವೇ ರೊಟ್ಟಿ ತಯಾರಿಸಿದ್ದಾರೆ. ಈ ಕ್ಷಣಗಳನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಅವರು, ಇದೇ ಮೊದಲ ಬಾರಿಗೆ ರೊಟ್ಟಿ ಮಾಡಿದೆ, ಅದು ನಮ್ಮ ಸೈನಿಕರಿಗೆ ಅನ್ನೋದು ಹೆಮ್ಮೆ ತರಿಸಿದೆ ಎಂದು ಬರೆದುಕೊಂಡಿದ್ದಾರೆ.

ಇನ್ನು 'ಉರಿ-ದಿ ಸರ್ಜಿಕಲ್ ಸ್ಟ್ರೈಕ್' ಸಿನಿಮಾ ಮೂಲಕ ಭಾರತೀಯ ಸಿನಿ ಪ್ರೇಮಿಗಳ ಮನಸ್ಸು ಕದ್ದ ವಿಕ್ಕಿ ಕೌಶಾಲ್​, ಈಗ ಮತ್ತೊಂದು ಭಾರತೀಯ ಸೇನೆ ಕಥಾಹಂದರದ ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.