ETV Bharat / sitara

ಕೌಶಲ್ - ಕತ್ರಿನಾ ಕೈಫ್​ ವಿವಾಹ ಸುದ್ದಿಗೆ ನಟ ವಿಕ್ಕಿ ಪ್ರತಿಕ್ರಿಯಿಸಿದ್ದು ಹೀಗೆ..! - vicky-kaushal-about-his-wedding-with-katrina-kaif-the-actor-reacts

ವಿಕ್ಕಿ ಕೌಶಲ್ ಹಾಗೂ ನಟಿ ಕತ್ರಿನಾ ಕೈಫ್ ನಡುವೆ ಪ್ರೇಮಾಂಕುರವಾಗಿದ್ದು, ಸದ್ಯದಲ್ಲೇ ವಿವಾಹವಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಜೊತೆಗೆ ಎರಡೂ ಕಡೆಯ ಕುಟುಂಬಸ್ಥರು ಸಹ ಮಾತುಕತೆ ನಡೆಸಿದ್ದಾರೆ ಎನ್ನಲಾಗಿತ್ತು. ಈ ಬಗ್ಗೆ ಕೇಳಲಾದ ಪ್ರಶ್ನೆಗೆ ವಿಕ್ಕಿ ನಗುವಿನಲ್ಲೇ ಉತ್ತರಿಸಿದ್ದಾರೆ.

vicky-kaushal-about-his-wedding-with-katrina-kaif-the-actor-reacts
ವಿಕ್ಕಿ ಕೌಶಲ್-ಕತ್ರಿನಾ ಕೈಫ್​ ವಿವಾಹ
author img

By

Published : Nov 12, 2021, 12:43 PM IST

Updated : Nov 12, 2021, 1:28 PM IST

ಮುಂಬೈ: ಬಾಲಿವುಡ್ ಅಂಗಳದಲ್ಲಿ ಈಗ ಬಿಸಿ ಬಿಸಿ ಚರ್ಚೆಯಾಗ್ತಿರೋದು ನಟ ವಿಕ್ಕಿ ಕೌಶಲ್ (Actor Vicky Kaushal) ಹಾಗೂ ಕತ್ರಿನಾ ಕೈಫ್ (Katrina Kaif) ಮದುವೆ ಬಗ್ಗೆ. ಆದರೆ ಇಬ್ಬರಲ್ಲೂ ಈ ಸುದ್ದಿಗೆ ಯಾವುದೇ ಉತ್ತರವಿಲ್ಲ. ನಿನ್ನೆ ನಟಿ ಸಾರಾ ಅಲಿ ಖಾನ್ (Sara Ali Khan) ಜೊತೆ ಕಾಣಿಸಿಕೊಂಡ ವಿಕ್ಕಿಗೆ ಪತ್ರಕರ್ತರೊಬ್ಬರು ಈ ಬಗ್ಗೆ ಪ್ರಶ್ನೆ ಕೇಳಿದ್ದಾರೆ.

‘ವಿಕ್ಕಿ ಸರ್ ನಿಮ್ಮ ಮದುವೆ ಯಾವಾಗ..?’ ಎಂದಾಗ, ನಟ ವಿಕ್ಕಿ ಹಾಗೂ ಸಾರಾ ಅಲಿ ಖಾನ್ ನಗುತ್ತಾ ಮುಂದೆ ಸಾಗಿದ್ದಾರೆ. ಆದರೆ, ವರದಿಗಳ ಪ್ರಕಾರ ವಿಕ್ಕಿ ಮತ್ತು ಕತ್ರಿನಾ ಇದೇ ಡಿಸೆಂಬರ್​​​ನಲ್ಲಿ ವಿವಾಹವಾಗಲಿದ್ದಾರಂತೆ. ಹೀಗಂತ ಬಾಲಿವುಡ್​ನಲ್ಲಿ ಸುದ್ದಿ ಜೋರಾಗಿದ್ದು, ಇಬ್ಬರು ಸಹ ವಿವಾಹಕ್ಕೆ ಒಪ್ಪಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಬಾಲಿವುಡ್​​ನ ಮತ್ತೊಂದು ಜೋಡಿಗೆ ಕಂಕಣ ಭಾಗ್ಯ..?

ದೀಪಾವಳಿ ವೇಳೆ ಕತ್ರಿನಾ ಆಪ್ತ ನಿರ್ದೇಶಕ ಕಬೀರ್ ಖಾನ್ (Director Kabir Khan) ಅವರ ನಿವಾಸದಲ್ಲಿ ಕತ್ರಿನಾ ತಾಯಿ ಸುಝೇನ್ ಹಾಗೂ ವಿಕ್ಕಿ ಕೌಶಲ್ ಪೋಷಕರ ಸಮ್ಮುಖದಲ್ಲೇ ಮಾತುಕತೆಯಾಗಿದೆ ಎಂಬ ಗುಸು ಗುಸು ಹರಿದಾಡುತ್ತಿದೆ.

ಆದರೆ, ಈ ಕುರಿತು ನಟ - ನಟಿಯ ಕಡೆಯಿಂದ ಯಾವುದೇ ಹೇಳಿಕೆಗಳು ಈವರೆಗೂ ಹೊರಬಿದ್ದಿಲ್ಲ. ಆದರೆ ಇವರಿಬ್ಬರು ವಿವಾಹವಾಗುವುದು ಖಚಿತ ಎಂಬುದಾಗಿ ಬಾಲಿವುಡ್ ಮಂದಿ ಮಾತನಾಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ದೇಶಕ್ಕೆ ನಿಜವಾದ ಸ್ವಾತಂತ್ರ್ಯ ಸಿಕ್ಕಿದ್ದು 2014 ರಲ್ಲಿ: ವಿವಾದಾತ್ಮಕ ಹೇಳಿಕೆ ಮೂಲಕ ಟ್ರೋಲ್​ಗೆ ಗುರಿಯಾದ ಕಂಗನಾ ರಣಾವತ್

Last Updated : Nov 12, 2021, 1:28 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.