ETV Bharat / sitara

ಬಾಲಿವುಡ್‌ನಲ್ಲಿ ಇದೊಂದು ಹೈಪ್ರೊಫೈಲ್ ಮದುವೆ; ಹಣದ ಹೊಣೆ ಹೊತ್ತವರಾರು ಗೊತ್ತಾ?

ಬಾಲಿವುಡ್​ನ ಲವ್​ ಬರ್ಡ್ಸ್​ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ತಮ್ಮ ಈ ಅದ್ಧೂರಿ ಮದುವೆಗೆ ಎಷ್ಟು ಖರ್ಚು ಮಾಡುತ್ತಿದ್ದಾರೆ ಗೊತ್ತಾ? ಮದುವೆ ಹಣ ನೀಡುತ್ತಿರುವವರು ಯಾರು ಅನ್ನೋದು ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಈ ಜೋಡಿಯ ಖರ್ಚು-ವೆಚ್ಚದ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ಜೊತೆಗೆ ಇವರ ಮದುವೆಯನ್ನು ಬಾಲಿವುಡ್‌ನ ಅತ್ಯಂತ ದುಬಾರಿ ವಿವಾಹಗಳ ಪಟ್ಟಿಗೆ ಸೇರಿಸಲಾಗುತ್ತಿದೆ.

VicKat to tie the knot today: Is bride bearing major expenses for grand wedding?

author img

By

Published : Dec 9, 2021, 4:59 PM IST

ಹೈದರಾಬಾದ್ (ತೆಲಂಗಾಣ): ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಇಂದು ಹಸೆಮಣೆ ಏರುತ್ತಿದ್ದು, ಎಲ್ಲರ ಚಿತ್ರ ಇದೀಗ ಈ ಬಾಲಿವುಡ್​ ಜೋಡಿ ಮೇಲೆಯೇ ನೆಟ್ಟಿದೆ. ಕಾರಣ ಭಾರತೀಯ ಚಿತ್ರರಂಗದಲ್ಲೇ ಇದೊಂದು ಹೈಪ್ರೊಫೈಲ್ ಹಾಗೂ ಅತ್ಯಂತ ದುಬಾರಿ ಮದುವೆ ಎನ್ನಲಾಗುತ್ತಿದ್ದು, ಸಹಜವಾಗಿ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.

ಭಾರಿ ವಿಜೃಂಭಣೆಯಿಂದ ನಡೆಯುತ್ತಿರುವ ಈ ಮದುವೆಗೆ ಈಗಾಗಲೇ ಭರದ ಸಿದ್ಧತೆ ನಡೆದಿದೆ. ಕೋಟ್ಯಂತರ ರೂಪಾಯಿ ವ್ಯಯಿಸಿ ಹಸೆಮಣೆ ಏರುತ್ತಿರುವುದೇನೋ ನಿಜ. ಆದರೆ, ಈ ಹಣದ ಹೊಣೆ ಹೊತ್ತವರಾರು ಗೊತ್ತಾ? ತಮಗೆ ಬೇಕಾದ ಅತಿಥಿಗಳನ್ನು ಕರೆಸಿಕೊಳ್ಳುವುದರಿಂದ ಹಿಡಿದು ರಾಜಸ್ಥಾನದ ಹೋಟೆಲ್​ನಲ್ಲಿ ಕೊಠಡಿಗಳ ಮುಂಗಡ ಬುಕ್ಕಿಂಗ್ ವರೆಗೆ​ ಈಗಾಗಲೇ ಈ ಮದುವೆಗೆ ಅಂದಾಜು ಮಾಡದಷ್ಟು ಖರ್ಷು ಮಾಡಲಾಗಿದೆಯಂತೆ. ಇದನ್ನು ನೀಡಿದವರು ಯಾರು ಗೊತ್ತಾ? ಬೇರಾರು ಅಲ್ಲ- ನಟಿ ಕತ್ರಿನಾ ಕೈಫ್.

VicKat to tie the knot today: Is bride bearing major expenses for grand wedding?
ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್

ಮದುವೆ ಅಂತ ಬಂದಾಗ ಸಾಮಾನ್ಯವಾಗಿ (ಹೆಣ್ಣು ಮತ್ತು ಗಂಡು) ಎರಡೂ ಕಡೆಯರು ಅರ್ಧ ಖರ್ಚು ನೋಡಿಕೊಳ್ಳುತ್ತಿರುತ್ತಾರೆ. ಕೆಲವು ಕಡೆಗಳಲ್ಲಿ ಮದುವೆಗೂ ಮುನ್ನ ಕೊಟ್ಟ ಮಾತಿನ ಪ್ರಕಾರ ನಡೆದುಕೊಳ್ಳುವುದೂ ಉಂಟು. ಆದರೆ, ಇದೀಗ ತಿಳಿದು ಬಂದ ಮಾಹಿತಿ ಪ್ರಕಾರ ಬಾಲಿವುಡ್​ ನಟಿ ಕತ್ರಿನಾ ತಮ್ಮ ಮದುವೆಗಾಗಿ ಇಲ್ಲಿ ಶೇ. 75 ರಷ್ಟು ವೆಚ್ಚವನ್ನು ತಾವೇ ಪಾವತಿಸಲು ಮುಂದಾಗಿದ್ದಾರಂತೆ. ಮದುವೆಪೂರ್ವ ಈಗಾಗಲೇ ಕತ್ರಿನಾ ಭಾರಿ ಮೊತ್ತ ಭರಿಸಿದ್ದಾರೆ ಎನ್ನಲಾಗುತ್ತಿದೆ.

ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್

ರಾಜಸ್ಥಾನದ ಸವಾಯಿ ಮಾಧೋಪುರ್ ಜಿಲ್ಲೆಯಲ್ಲಿರುವ ಸಿಕ್ಸ್ ಸೆನ್ಸಸ್​ ಎಂಬ ಭವ್ಯ ಹೋಟೆಲ್​ನಲ್ಲಿ ಇವರು ಇಂದು ಮದುವೆಯಾಗುತ್ತಿದ್ದು, ಬಾಲಿವುಡ್‌ನ ಅತ್ಯಂತ ದುಬಾರಿ ವಿವಾಹಗಳಲ್ಲಿ ಇದೂ ಒಂದು ಎಂದು ಹೇಳಲಾಗುತ್ತಿದೆ. ವರದಿಗಳ ಪ್ರಕಾರ ಇತ್ತೀಚಿಗೆ ಯಾವ ಜೋಡಿಯೂ ಈ ಪ್ರಮಾಣದಲ್ಲಿ ಖರ್ಚು ಮಾಡಿದ ಉದಾಹರಣೆ ಇಲ್ಲ. ನಟಿ ಕತ್ರಿನಾ ಕೈಫ್​ ಅಲಂಕಾರಕ ವಸ್ತುಗಳಿಂದ ಹಿಡಿದು ಅತಿಥಿಗಳು ಬಂದು ಹೋಗುವ ಪ್ರಯಾಣ ವೆಚ್ಚ ಸೇರಿದಂತೆ ಭಾರಿ ಮೊತ್ತ ಭರಿಸುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ ಎನ್ನಲಾಗುತ್ತಿದೆ.

ಸೆಲೆಬ್ರಿಟಿಗಳ ವಿವಾಹಕ್ಕೆ ಉಚಿತ:

ಮಾಹಿತಿ ಪ್ರಕಾರ ರಾಜಸ್ಥಾನದ ಸಿಕ್ಸ್ ಸೆನ್ಸಸ್​ ಫೋರ್ಟ್ ಹೋಟೆಲ್​ ಮಾಲೀಕರು ಮದುವೆಯಾಗುವ ಸ್ಥಳವನ್ನು ಈ ಸೆಲೆಬ್ರಿಟಿಗಳ ವಿವಾಹಕ್ಕೆ ಉಚಿತವಾಗಿಯೇ ನೀಡಿದ್ದಾರೆ ಎಂದು ಹೇಳಲಾಗುತ್ತದೆ. ಇಂತಹ ಹೈಪ್ರೊಫೈಲ್ ಮದುವೆಯಿಂದ ತಮ್ಮ ಹೋಟೆಲ್​ಗೆ ಮತ್ತಷ್ಟು ಪ್ರಚಾರ ಸಿಗಲಿದೆ ಎಂಬ ಕಾರಣದಿಂದ ಈ ನಿರ್ಧಾರಕ್ಕೆ ಬಂದಿರುವುದಾಗಿ ಹೋಟೆಲ್​ ಮಾಲೀಕರು ಮಾಹಿತಿ ನೀಡಿದ್ದಾರೆ. ಹೋಟೆಲ್​​ ಈಗಾಗಲೇ ಇವರ ಮದುವೆಗೆ ಭಾರಿ ಭದ್ರತೆ ಒದಗಿಸಿದ್ದು ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಿದೆ.

ಇದನ್ನೂ ಓದಿ: ''ಇದು ನಿಮ್ಮ ಕ್ಷಣವಲ್ಲ, ಕತ್ರಿನಾರನ್ನು ಮಿಂಚಲು ಬಿಡಿ'' - ದೀಪಿಕಾ ಪಡುಕೋಣೆ ಮಾಡಿದ್ದಾದರು ಏನು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.