ಮುಂಬೈ: ಬಾಲಿವುಡ್ ನಟ ವರುಣ್ ಧವನ್ ಹಾಗೂ ಫ್ಯಾಷನ್ ಡಿಸೈನರ್ ನತಾಶಾ ದಲಾಲ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನವ ದಂಪತಿಗಳಿಗೆ ಬಾಲಿವುಡ್ ಗಣ್ಯರು ಶುಭಹಾರೈಸಿದ್ದಾರೆ.
ಅಲಿಬಾಗ್‌ನ ಐಷಾರಾಮಿ 'ದಿ ಮಾನ್ಶನ್' ಹೋಟೆಲ್‌ನಲ್ಲಿ ವಿವಾಹ ಕಾರ್ಯಕ್ರಮ ನಡೆದಿದೆ. ಹಿಂದೂ ಸಂಪ್ರದಾಯದಂತೆ ವರುಣ್, ನತಾಶಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಜ.24ರ ಸಂಜೆ 6.30ರಿಂದ ಮದುವೆ ಕಾರ್ಯ ಆರಂಭವಾಗಿದ್ದು, ಹೋಟೆಲ್ ಒಳಗಡೆ ಮದುವೆ ನಡೆಯುವ ಸ್ಥಳದಲ್ಲಿ ಆಮಂತ್ರಣ ನೀಡಿದವರ ಹೊರತಾಗಿ ಯಾರಿಗೂ ಒಳ ಪ್ರವೇಶಕ್ಕೆ ಅನುಮತಿ ನೀಡಿರಲಿಲ್ಲ.
- " class="align-text-top noRightClick twitterSection" data="
">
ಕೊರೊನಾ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮಗಳನ್ನು ಕೈಗೊಂಡು 40-50 ಆಮಂತ್ರಿತ ಗಣ್ಯರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡಿದ್ದಾರೆ. ಇನ್ನು ಫೆಬ್ರವರಿಯಲ್ಲಿ ಬಾಲಿವುಡ್ ಗಣ್ಯರಿಗಾಗಿ ವರುಣ್ ಅವರು ಮುಂಬೈನಲ್ಲಿ ಆರತಕ್ಷತೆ ಕಾರ್ಯಕ್ರಮ ಆಯೋಜಿಸಿದ್ದಾರೆ.