ಮುಂಬೈ (ಮಹಾರಾಷ್ಟ್ರ): ಕಳೆದ ಎರಡು ವಾರಗಳ ಹಿಂದೆ ಕೊರೊನಾ ಸೋಂಕಿಗೆ ಒಳಗಾಗಿದ್ದ ನಟಿ ಕಂ ರಾಜಕಾರಣಿ ಊರ್ಮಿಳಾ ಮಾತೋಂಡ್ಕರ್ (Urmila Matondkar) ಚೇತರಿಸಿಕೊಂಡಿದ್ದಾರೆ. COVID-19 ನಿಂದ ಹೊರ ಬಂದ ನಟಿಯು, ತಮ್ಮ ಅಧಿಕೃತ ಟ್ವಿಟರ್ (Twitter) ಮೂಲಕ ಈ ವಿಚಾರವನ್ನು ಹಂಚಿಕೊಂಡಿದ್ದಾರೆ.
- " class="align-text-top noRightClick twitterSection" data="
">
ನಾನು ಭಾನುವಾರ ಕೋವಿಡ್ ಟೆಸ್ಟ್ ಮಾಡಿಸಿಕೊಂಡಿದ್ದು ನೆಗೆಟಿವ್ ವರದಿ ಕಾಣಿಸಿಕೊಂಡಿದೆ. ನಾನು ಸಂಪೂರ್ಣವಾಗಿ ಆರೋಗ್ಯವಾಗಿದ್ದೇನೆ. ನನ್ನ ಆರೋಗ್ಯಕ್ಕಾಗಿ ಪ್ರಾರ್ಥನೆ ಸಲ್ಲಿಸಿದ್ದ ಹಾಗೂ ನನಗಾಗಿ ಮುತುವರ್ಜಿ ವಹಿಸಿಕೊಂಡಿದ್ದ ನನ್ನ ಎಲ್ಲ ಹಿತೈಷಿಗಳಿಗೆ ಧನ್ಯವಾದಗಳನ್ನು ಅರ್ಪಿಸುವೆ ಎಂದಿದ್ದಾರೆ.
ಯಾರಾದರೂ ಇನ್ನೂ ಲಸಿಕೆಯನ್ನು ತೆಗೆದುಕೊಳ್ಳದಿದ್ದರೆ ದಯವಿಟ್ಟು ತ್ವರಿತವಾಗಿ ಲಸಿಕೆಯನ್ನು (Please get vaccinated fast) ಪಡೆಯಿರಿ. ಮೊದಲ ಡೋಸ್ ಪಡೆದಿದ್ದರೆ ದಯವಿಟ್ಟು ಎರಡನೆಯದನ್ನು ತೆಗೆದುಕೊಳ್ಳಿ. ವೈರಸ್‌ಗೆ (virus) ತುತ್ತಾದರೆ ಲಸಿಕೆ ನಿಮ್ಮನ್ನು ಸೋಂಕಿನಿಂದ ಪಾರು ಮಾಡಬಲ್ಲದು. COVID-19 ವಿರುದ್ಧ ಹೋರಾಡಲು ಇದೊಂದೇ ಪರಿಹಾರ (solution) ಎಂದಿದ್ದಾರೆ.
![Urmila Matondkar tests negative for coronavirus](https://etvbharatimages.akamaized.net/etvbharat/prod-images/246151300_400055931575763_8804532129314772563_n_1511newsroom_1636948178_312.jpg)
ಕೋವಿಡ್ ಅನ್ನು ಲಘುವಾಗಿ ಪರಿಗಣಿಸಬೇಡಿ ಎಂದು ಮನವಿ ಮಾಡಿಕೊಂಡಿರುವ ಊರ್ಮಿಳಾ ಮಾತೋಂಡ್ಕರ್, ಕೊರೊನಾ ಇನ್ನೂ ನಮ್ಮ ಪ್ರಪಂಚದಿಂದ ಹೋಗಿಲ್ಲ. ಆದ್ದರಿಂದ, ಆರೋಗ್ಯ ಸಮಾಜಕ್ಕಾಗಿ ನಾವು ಒಟ್ಟಾಗಿ ಹೋರಾಡಬೇಕಿದೆ. ದಯವಿಟ್ಟು ಸಾಧ್ಯವಾದಷ್ಟು ಬೇಗ ಲಸಿಕೆ ಹಾಕಿಸಿಕೊಳ್ಳಿ.
ಮಾಸ್ಕ್ ಇಲ್ಲದೇ ಅನಾವಶ್ಯಕ ಹೊರಗೆ ಬರಬೇಡಿ ಎಂದು ಎಚ್ಚರಿಕೆಯ ಜೊತೆಗೆ ಕೆಲವು ಸಲಹೆಗಳನ್ನು ನೀಡಿದ್ದಾರೆ. ಅಕ್ಟೋಬರ್ 31 (October 31) ರಂದು ನಟಿಯು ಕೋವಿಡ್‌ಗೆ ತುತ್ತಾಗಿದ್ದರು. ಈ ಬಗ್ಗೆ ಟ್ವೀಟ್ನಲ್ಲಿ ಹೇಳಿಕೊಂಡಿದ್ದರು.
ಇದನ್ನೂ ಓದಿ: ಊರ್ಮಿಳಾ ಮಾತೋಂಡ್ಕರ್ 'ಸಾಫ್ಟ್ ಪೋರ್ನ್ ಸ್ಟಾರ್': ಕಂಗನಾ ವಾಗ್ದಾಳಿ