ETV Bharat / sitara

Watch - ಸಲ್ಮಾನ್​ ಖಾನ್​ ಜೊತೆ ದೆಹಲಿಯಲ್ಲಿ 'ಟೈಗರ್ 3' ಶೂಟಿಂಗ್​ ಮುಗಿಸಿ ಹಿಂದಿರುಗಿದ ಕತ್ರಿನಾ ಕೈಫ್​ - ಮುಂಬೈ ಏರ್​ಪೋರ್ಟ್​ನಲ್ಲಿ ಸಲ್ಮಾನ್​-ಕತ್ರಿನಾ

ದೆಹಲಿಯಲ್ಲಿ 'ಟೈಗರ್ 3' ಶೂಟಿಂಗ್​ ಮುಗಿಸಿ ಹಿಂದಿರುಗಿದ ಕತ್ರಿನಾ ಕೈಫ್ ಮತ್ತು ಸಲ್ಮಾನ್ ಖಾನ್ ಮುಂಬೈ ಏರ್​ಪೋರ್ಟ್​ನಲ್ಲಿ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದಾರೆ.

ಸಲ್ಮಾನ್​-ಕತ್ರಿನಾ
ಸಲ್ಮಾನ್​-ಕತ್ರಿನಾ
author img

By

Published : Feb 19, 2022, 12:08 PM IST

ಮುಂಬೈ (ಮಹಾರಾಷ್ಟ್ರ): ಬಾಲಿವುಡ್ ದಿವಾ ಕತ್ರಿನಾ ಕೈಫ್ ಮತ್ತು ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ತಮ್ಮ ಮುಂಬರುವ ಸಿನಿಮಾ 'ಟೈಗರ್ 3' ಚಿತ್ರೀಕರಣಕ್ಕಾಗಿ ಈ ವಾರದ ಆರಂಭದಲ್ಲಿ ನವದೆಹಲಿಗೆ ತೆರಳಿದ್ದರು. ಇಂದು ಬೆಳಗ್ಗೆ ದೆಹಲಿಯಿಂದ ಹಿಂದಿರುಗಿದ ಈ ಜೋಡಿ ಮುಂಬೈ ಏರ್​ಪೋರ್ಟ್​ನಲ್ಲಿ ಕಾಣಿಸಿಕೊಂಡಿತು.

10 -12 ದಿನಗಳ ಕಾಲ ದೆಹಲಿಯಲ್ಲಿ ಚಿತ್ರತಂಡ ಶೂಟಿಂಗ್​ ಮಾಡಲಿದೆ ಎಂದು ವರದಿಯಾಗಿತ್ತು. ಆದರೆ, ಐದೇ ದಿನಕ್ಕೆ ಹಿಂದಿರುಗಿದ್ದಾರೆ. 'ಟೈಗರ್ 3' ಚಿತ್ರದಲ್ಲಿ ಇಮ್ರಾನ್ ಹಶ್ಮಿ ನೆಗೆಟಿವ್ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಹೇಳಲಾಗಿದ್ದು, ಇವರೂ ಕೂಡ ಮುಂಬೈನ ವಿಮಾನ ನಿಲ್ದಾಣದಲ್ಲಿ ಸಲ್ಮಾನ್​-ಕತ್ರಿನಾ ಜೊತೆ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದಾರೆ.

ಇದನ್ನೂ ಓದಿ: ಬಾತ್​ಟಬ್​ನಲ್ಲಿ ಕುಳಿತ ಆಲಿಯಾ ಭಟ್​.. ಹಾಟ್ ಪೋಸ್​ ಕೊಟ್ಟ ನಟಿಯ ಚಿತ್ರಕ್ಕೆ ಭಾರಿ ಮೆಚ್ಚುಗೆ

ಸಲ್ಮಾನ್​ ಹಾಗೂ ಕತ್ರಿನಾ ಮುಖ್ಯಭೂಮಿಕೆಯಲ್ಲಿ ನಟಿಸಿರುವ 'ಟೈಗರ್' ಹೆಸರಿನ ಸರಣಿಯ ಮೂರನೇ ಸಿನಿಮಾ ಇದಾಗಿದೆ. 2012 ರಲ್ಲಿ 'ಏಕ್ ಥಾ ಟೈಗರ್' ಹಾಗೂ 2017 ರಲ್ಲಿ 'ಟೈಗರ್ ಜಿಂದಾ ಹೈ' ಚಿತ್ರ ಬಿಡುಗಡೆಯಾಗಿದ್ದು, ಎರಡೂ ಚಿತ್ರಗಳು ಸೂಪರ್-​ಡೂಪರ್​ ಆಗಿದ್ದವು. ಇದೀಗ ಮೂರನೇ ಭಾಗವಾಗಿ ಮನೀಶ್ ಶರ್ಮಾ ನಿರ್ದೇಶನದ 'ಟೈಗರ್ 3' ತೆರೆ ಮೇಲೆ ಬರಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.