ETV Bharat / sitara

ಕಿರಿಕಿರಿ ಉಂಟು ಮಾಡಿದ ಆ ಟ್ಯಾಟೂ ಬಗ್ಗೆ ತಾಪ್ಸಿ ಪನ್ನು ಹೇಳಿದ್ದಿಷ್ಟು!

ಗೇಮ್ ‌ಓವರ್‌ನ ಸೆಟ್‌ನಲ್ಲಿ ಮೊದಲ ದಿನದಿಂದಲೂ ಈ ಟ್ಯಾಟೂ ನನಗೆ ಮತ್ತು ಚಲನಚಿತ್ರವನ್ನು ನೋಡಿದ ಎಲ್ಲರಿಗೂ ಕಿರಿಕಿರಿಯುಂಟು ಮಾಡಿದೆ ಎಂದು ತಾಪ್ಸಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಬಾಲಿವುಡ್​ ಬೆಡಗಿ ತಾಪ್ಸಿ ಪನ್ನು
ಬಾಲಿವುಡ್​ ಬೆಡಗಿ ತಾಪ್ಸಿ ಪನ್ನು
author img

By

Published : May 20, 2020, 8:01 PM IST

ಮುಂಬೈ: ಬಾಲಿವುಡ್​ ಬೆಡಗಿ ತಾಪ್ಸಿ ಪನ್ನು ಟ್ಯಾಟೂ ಪ್ರಿಯೆ. ಆದರೆ ‘ಗೇಮ್​ ಓವರ್​’ ಚಿತ್ರದಲ್ಲಿ ಧರಿಸಿದ್ದ ತಾತ್ಕಾಲಿಕ ಹಚ್ಚೆ ಅವರಿಗೆ ಕಿರಿಕಿರಿಯನ್ನುಂಟು ಮಾಡಿತ್ತು.

‘ಗೇಮ್ ‌ಓವರ್‌ನ ಸೆಟ್‌ನಲ್ಲಿ ಮೊದಲ ದಿನದಿಂದಲೂ ಈ ಟ್ಯಾಟೂ ನನಗೆ ಮತ್ತು ಚಲನಚಿತ್ರವನ್ನು ನೋಡಿದ ಎಲ್ಲರಿಗೂ ಕಿರಿಕಿರಿಯುಂಟು ಮಾಡಿದೆ. ನಾನು ವೈಯಕ್ತಿಕವಾಗಿ ಹಚ್ಚೆ ಪ್ರೀತಿಸುತ್ತೇನೆ. ಹಾಗಾಗಿ ಚಿತ್ರಗಳಲ್ಲಿ ಟ್ಯಾಟೂ ಹಾಕಿಸಿಕೊಳ್ಳಲು ನಾನು ಉತ್ಸುಕಳಾಗಿದ್ದೇನೆ. ಆದರೆ, ತಾತ್ಕಾಲಿಕವಾದ ಹಚ್ಚೆಗಳು ಚೆನ್ನೈ ಹವಾಮಾನದಲ್ಲಿ ಅವು ನೋವನ್ನು ಉಂಟುಮಾಡುತ್ತವೆ. ಈ ಹಚ್ಚೆ ನಿಜಕ್ಕೂ ನನ್ನ ಪರಿಕರವಾಯಿತು (ಸ್ವಪ್ನಾ ಯಾವುದೇ ಪರಿಕರವನ್ನು ಧರಿಸಲಿಲ್ಲವಾದ್ದರಿಂದ) ಇದನ್ನು ಸಾಕಷ್ಟು ಕಾಳಜಿಯಿಂದ ನಿರ್ವಹಿಸಬೇಕಾಗಿತ್ತು’ ಎಂದು ತಾಪ್ಸಿ ಇನ್​ಸ್ಟಾಗ್ರಾಂನಲ್ಲಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ತಾಪ್ಸಿ ಪನ್ನು ಪೋಸ್ಟ್ ಮಾಡಿರುವ ಚಿತ್ರದಲ್ಲಿ ಅವರ ಮಣಿಕಟ್ಟಿನ ಮೇಲೆ ಜಾಯ್‌ಸ್ಟಿಕ್‌ನ ಹಚ್ಚೆಯನ್ನು ನೋಡಬಹುದು. ತಾಪ್ಸಿ ಮುಂದಿನ ದಿನಗಳಲ್ಲಿ ಹಸೀನ್ ದಿಲ್‌ರುಬಾ, ರಶ್ಮಿ ರಾಕೆಟ್ ಮತ್ತು ಶಬಾಶ್ ಮಿಥು ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.