ಹೈದರಾಬಾದ್ : ಡೇವಿಡ್ ಧವನ್ರ 2013ರಲ್ಲಿ ಬಿಡುಗಡೆಯಾದ ಚಶ್ಮೆ ಬಡ್ಡೂರ್ ಚಿತ್ರದ ಮೂಲಕ ನಟಿ ತಾಪ್ಸಿ ಪನ್ನು ಬಾಲಿವುಡ್ ಪ್ರವೇಶಿಸಿದ್ದರು. ಆದರೆ, ಕೆಲ ಸಿನಿಮಾಗಳು ಸೋತ ನಂತರ ನಾನು ಮತ್ತೆ ಹೊಸ ಹುರುಪಿನೊಂದಿಗೆ ಬಾಲಿವುಡ್ ಪ್ರವೇಶಿಸಬೇಕಿದೆ ಎಂದು ನಟಿ ತಾಪ್ಸಿ ಪನ್ನು ಹೇಳಿದ್ದಾರೆ.
- " class="align-text-top noRightClick twitterSection" data="
">
ಈ ಬಗ್ಗೆ ಪ್ರಮುಖ ದಿನಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ತಾಪ್ಸಿ, ನನ್ನ ರೀತಿ ಕೆಲಸದಲ್ಲಿ ನೀವು ತುಂಬಾ ಸಂತೃಪ್ತರಾದಾಗ ನಿಮ್ಮ ಬೆಳವಣಿಗೆ ನಿಲ್ಲುತ್ತದೆ. ಸಿನಿಮಾದಲ್ಲಿ ಪಾತ್ರಗಳಿದ್ದರೂ ಸಹ ನನಗೆ ಇಷ್ಟವಾಗುವ ಪಾತ್ರಗಳಲ್ಲಿ ಮಾತ್ರ ನಟಿಸಿದ್ದೇನೆ. ನನಗೆ ಸರಳ ಪಾತ್ರಗಳಲ್ಲಿ ನಟಿಸಲು ಇಷ್ಟವಿಲ್ಲ. ಇದು ಒಳ್ಳೆಯದಲ್ಲ.
ಜನರು ನನ್ನನ್ನು ಹೇಗೆ ಪರಿಗಣಿಸುತ್ತಾರೆ ಎಂದು ನಾನು ಯೋಚಿಸಲ್ಲ. ಬಾಲಿವುಡ್ ತನ್ನ ತಪ್ಪುಗಳಿಂದ ಕಲಿಯಲು ಅವಕಾಶವನ್ನು ಒದಗಿಸಿದೆ. ದಕ್ಷಿಣ ಭಾಷೆಗಳನ್ನು ಕಲಿಯುವುದಕ್ಕಿಂತ ಹಿಂದಿ ನನ್ನ ಮಾತೃಭಾಷೆ. ಇಲ್ಲಿ ಸಿನಿಮಾಗಳನ್ನು ಮಾಡುವುದು ತುಂಬಾ ಸುಲಭ ಎಂದಿದ್ದಾರೆ.
ದಕ್ಷಿಣದಲ್ಲಿ ಫುಲ್ ಬ್ಯುಸಿಯಾಗಿದ್ದ ನಟಿ ನಂತರ ಬಾಲಿವುಡ್ಗೆ ಹಾರಿ ಚೆನ್ನೈನಿಂದ ಮುಂಬೈನಲ್ಲಿ ವಾಸಿಸತೊಡಗಿದ್ದರು. ಪ್ರಸ್ತುತ ತಾಪ್ಸಿ ಶಭಾಶ್ ಮಿಥು ಚಿತ್ರದ ಚಿತ್ರೀಕರಣದಲ್ಲಿದ್ದಾರೆ. ಈ ಚಿತ್ರ ಭಾರತದ ಮಹಿಳಾ ಏಕದಿನ ಕ್ರಿಕೆಟ್ ತಂಡದ ನಾಯಕ ಮಿಥಾಲಿ ರಾಜ್ ಜೀವನವನ್ನು ಆಧರಿಸಿದೆ. ರಾಹುಲ್ ಧೋಲಾಕಿಯಾ ನಿರ್ದೇಶಿಸಿದ್ದಾರೆ.