ETV Bharat / sitara

ತಾಪ್ಸಿ ಪನ್ನು ಅಭಿನಯದ 'ಲೂಪ್ ಲಪೇಟಾ' ಬಿಡುಗಡೆ ದಿನಾಂಕ ಫಿಕ್ಸ್​​​​​​​​​​​​​​ - ಆಕಾಶ್ ಭಾಟಿಯಾ ನಿರ್ದೇಶನದ ಲೂಪ್ ಲಪೇಟಾ

ಆಕಾಶ್ ಭಾಟಿಯಾ ನಿರ್ದೇಶನದ 'ಲೂಪ್ ಲಪೇಟಾ' ಸಿನಿಮಾ ಅಕ್ಟೋಬರ್ 22 ರಂದು ಬಿಡುಗಡೆಯಾಗುತ್ತಿದೆ. ಈ ಸಿನಿಮಾ ಹೊರತುಪಡಿಸಿ ತಾಪ್ಸಿ ಹಸೀನಾ ದಿಲ್​​ರುಬಾ, ರಶ್ಮಿ ರಾಕೆಟ್, ಶಭಾಷ್ ಮಿಥು, ದುಬಾರಾ ಹಾಗೂ ಹೆಸರಿಡದ ಮತ್ತೊಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

Looop Lapeta
'ಲೂಪ್ ಲಪೇಟಾ'
author img

By

Published : Mar 9, 2021, 1:12 PM IST

ತಾಪ್ಸಿ ಪನ್ನು ಹಾಗೂ ತಹಿರ್​ ರಾಜ್ ಭಾಸಿನ್ ಅಭಿನಯದ 'ಲೂಪ್ ಲಪೇಟಾ' ಸಿನಿಮಾ ಬಿಡುಗಡೆ ದಿನಾಂಕ ನಿಗದಿಯಾಗಿದೆ. ಈ ವಿಚಾರವನ್ನು ತಾಪ್ಸಿ ಹಾಗೂ ತಹಿರ್​ ಇಬ್ಬರೂ ತಮ್ಮ ಇನ್ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ಚಿತ್ರದ ಪೋಸ್ಟರ್ ಇರುವ 12 ಸೆಕೆಂಡ್ ವಿಡಿಯೋ ಮೂಲಕ ಸಿನಿಮಾ ಅಕ್ಟೋಬರ್​ 22 ರಂದು ತೆರೆ ಕಾಣಲಿದೆ ಎಂಬ ವಿಚಾರವನ್ನು ಚಿತ್ರತಂಡ ತಿಳಿಸಿದೆ.

ತೆಲುಗು, ತಮಿಳು, ಹಿಂದಿ ಚಿತ್ರರಂಗದಲ್ಲಿ ಬ್ಯುಸಿ ಇರುವ ತಾಪ್ಸಿ ತಮ್ಮ ಚಿತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಲೇ ಬಂದಿದ್ದಾರೆ. 'ಲೂಪ್ ಲಪೇಟಾ' ಕೂಡಾ ಬಹುನಿರೀಕ್ಷಿತ ಚಿತ್ರವಾಗಿದ್ದು ಈ ಸಿನಿಮಾ ಕೂಡಾ ಅಭಿಮಾನಿಗಳಿಗೆ ಇಷ್ಟವಾಗುವುದರಲ್ಲಿ ನೋ ಡೌಟ್ ಎನ್ನುತ್ತಾರೆ ತಾಪ್ಸಿ. 'ಲೂಪ್ ಲಪೇಟಾ' 1998ರಲ್ಲಿ ಬಿಡುಗಡೆಯಾದ 'ರನ್ ಲೋಲಾ ರನ್'​​​​​​​​​ ಜರ್ಮನ್ ಚಿತ್ರದ ರೀಮೇಕ್ ಆಗಿದ್ದು ಭಾರತದ ನೇಟಿವಿಟಿಗೆ ತಕ್ಕಂತೆ 'ಲೂಪ್ ಲಪೇಟಾ' ಹೊರತುಪಡಿಸಿ ತಾಪ್ಸಿ ಪನ್ನು ನೆಟ್​​​​ಫ್ಲಿಕ್ಸ್​​​​ನಲ್ಲಿ ಬಿಡುಗಡೆಯಾಗಲಿರುವ ಹಸೀನಾ ದಿಲ್​ರುಬಾ, ಸ್ಪ್ಟೋರ್ಟ್ಸ್​ ಸಿನಿಮಾ ರಶ್ಮಿ ರಾಕೆಟ್, ಭಾರತೀಯ ಕ್ರಿಕೆಟ್ ತಂಡದ ಕ್ಯಾಪ್ಟನ್ ಮಿಥಾಲಿ ರಾಜ್ ಜೀವನ ಚರಿತ್ರೆ ಆಧಾರಿತ ಶಭಾಷ್ ಮಿಥು, ಹಾಗೂ ಅನುರಾಗ್ ಕಶ್ಯಪ್ ನಿರ್ದೇಶನದ ದುಬಾರಾ ಸಿನಿಮಾಗಳಲ್ಲಿ ತಾಪ್ಸಿ ನಟಿಸುತ್ತಿದ್ದಾರೆ. ​​​

ಇದನ್ನೂ ಓದಿ: 'ಮಹಿಳೆಗೆ ಅಸಾಧ್ಯವಾದದ್ದು ಏನೂ ಇಲ್ಲ': 2ನೇ ಮಗುವಿನ ಮೊದಲ ಫೋಟೋ ಶೇರ್​ ಮಾಡಿದ ಬೆಬೊ

ಇತ್ತೀಚೆಗೆ ತಾಪ್ಸಿ ಪನ್ನು, ಅನುರಾಗ್ ಕಶ್ಯಪ್ ನಿವಾಸ ಹಾಗೂ ಫ್ಯಾಂಟಮ್ ಪ್ರೊಡಕ್ಷನ್ ಹೌಸ್ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡಿದ್ದರು. ಈ ವೇಳೆ ಇಬ್ಬರ ಬಳಿ ಸುಮಾರು 300 ಕೋಟಿಯಷ್ಟು ಆಸ್ತಿ ಪತ್ತೆಯಾಗಿದ್ದು ಈ ವಿಚಾರವಾಗಿ ಕೇಸ್ ದಾಖಲಾಗಿದ್ದು ವಿಚಾರಣೆ ನಡೆಯುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.