ಹೈದರಾಬಾದ್ : ಸಾಮಾಜಿಕ ಜಾಲತಾಣದಲ್ಲಿ ನಟಿ ತಾಪ್ಸಿ ಪನ್ನು ಪೋಸ್ಟ್ ಮಾಡಿದ್ದ ಬಿಕಿನಿ ಫೋಟೋ ಕಳೆದೆರಡು ದಿನದಿಂದ ಸುದ್ದಿಯಲ್ಲಿದೆ. ಜಾಲತಾಣದಲ್ಲಿ ಹಲವರು ಈ ಕುರಿತು ಪ್ರಶಂಸೆ ಮಾತುಗಳನ್ನಾಡಿದರೆ, ಇನ್ನೂ ಹಲವರು ಬಿಕಿನಿ ಫೋಟೋ ವಿರುದ್ಧ ಟೀಕೆ ವ್ಯಕ್ತಪಡಿಸಿದ್ರು.
ಇದೀಗ ಈ ಟೀಕೆಗಳ ವಿರುದ್ಧ ಮೌನ ಮುರಿದಿರುವ ತಾಪ್ಸಿ, ಟೀಕೆ ಮಾಡಿ ಕಾಮೆಂಟ್ ಮಾಡಿದ್ದವರಿಗೆ ತಿರುಗೇಟು ನೀಡಿದ್ದಾರೆ.
- " class="align-text-top noRightClick twitterSection" data="
">
ಹಿಂದಿ ಚಿತ್ರರಂಗದಲ್ಲಿ ಲಿಂಗ ಸಮಾನತೆ ಮತ್ತು ವೇತನ ಸಮಾನತೆಯ ಕುರಿತು ಬಹಳಷ್ಟು ದೂರ ಸಾಗಬೇಕಿದೆ. ಈ ವರ್ಷ 17 ಫಿಲ್ಮ್ಫೇರ್ ಅವಾರ್ಡ್ ಪಡೆದ ಅವರ ಕೊನೆಯ ಚಿತ್ರ ತಪ್ಪಡ್ ಇಂತಹ ಸಾಮಾಜಿಕ ತುಷ್ಟೀಕರಣದ ಪ್ರತಿಬಿಂಬದಂತಿದೆ. ಮಹಿಳೆಯರಿಗೆ ಹೋಲಿಸಿದರೆ ಪುರುಷರನ್ನು ಉತ್ತಮ ಎಂದು ಪರಿಗಣಿಸಲಾಗುತ್ತಿದೆ ಎಂದಿದ್ದಾರೆ.
- " class="align-text-top noRightClick twitterSection" data="
">
ಮುಂಬರುವ ಚಿತ್ರಗಳೆಲ್ಲವೂ ಮಹಿಳಾ ಪ್ರಧಾನವಾಗಿವೆ. ಈ ಕುರಿತು ಮಾತನಾಡಿದಾಗಲೆಲ್ಲಾ ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯನ್ನು ಭಿನ್ನವಾಗಿ ನೋಡಲಾಗುತ್ತದೆ. ನಾನು ಗಮನಿಸಿದಂತೆ ಸಾಮಾನ್ಯವಾಗಿ ನಾನು ನೋಡಿರುವ ಮಹಿಳೆಯರು ಬಿಕಿನಿ ಫೋಟೋ ಹಾಕಿರುವ ಸಂದರ್ಭ ಕೆಟ್ಟದಾಗಿ ನಿಂದನೆಗೊಳಪಟ್ಟಿದ್ದನ್ನು ನೋಡಿದ್ದೇನೆ.
ಆದರೆ, ಅದೇ ಒಬ್ಬ ಪುರುಷ ಬೀಚಿನ ಬಳಿ ತೆಗೆದ ಸ್ವಿಮ್ ಸೂಟ್ ಅಥವಾ ಜಿಮ್ನಲ್ಲಿನ ಅರ್ಧ ಬೆತ್ತಲೆಯಾದ ಚಿತ್ರ ಹಾಕಿದಾಗ ಏನೂ ಆಗುವುದಿಲ್ಲ, ಯಾರು ಮಾತನಾಡುವುದಿಲ್ಲ ಎಂದಿದ್ದಾರೆ.
- " class="align-text-top noRightClick twitterSection" data="
">
ಇದನ್ನೂ ಓದಿ: ‘ಸೈನಾ ನೆಹ್ವಾಲ್’ ಸಿನಿಮಾ ಬಗ್ಗೆ ಪ್ರೇಕ್ಷಕರ ಅಭಿಪ್ರಾಯವೇನು? ನೀವೇ ನೋಡಿ..