ETV Bharat / sitara

ಸುಶಾಂತ್​ ಡೆತ್​ ಕೇಸ್​: ಶೀಘ್ರದಲ್ಲೇ ನಟಿ ಸಾರಾ, ರಕುಲ್, ಸಿಮೋನೆಗೆ ಎನ್‌ಸಿಬಿ ನೋಟಿಸ್​ - ಕೇದಾರನಾಥ್

ಎನ್‌ಸಿಬಿ ವಿಚಾರಣೆ ವೇಳೆ ನಟಿ ರಿಯಾ ಚಕ್ರವರ್ತಿ ನಟಿ ಸಾರಾ ಅಲಿ ಖಾನ್, ನಟಿ ರಕುಲ್ ಪ್ರೀತ್ ಸಿಂಗ್ ಮತ್ತು ಫ್ಯಾಷನ್​ ಡಿಸೈನರ್​​ ಸಿಮೋನೆ ಹೆಸರನ್ನು ಹೇಳಿದ್ದು, ಈ ಹಿನ್ನೆಲೆ ಈ ಮೂವರು ತಾರೆಯರನ್ನು ಎನ್​​ಸಿಬಿ ಕಚೇರಿಗೆ ಕರೆಯಿಸಿಕೊಳ್ಳುವ ಸಾಧ್ಯತೆಯಿದೆ.

Sushant Singh Rajput case
ಸಾರಾ, ರಕುಲ್, ಸಿಮೋನೆ
author img

By

Published : Sep 15, 2020, 3:35 PM IST

ಮುಂಬೈ: ಬಾಲಿವುಡ್ ಸೆಲೆಬ್ರಿಟಿಗಳಾದ ನಟಿ ಸಾರಾ ಅಲಿ ಖಾನ್, ನಟಿ ರಕುಲ್ ಪ್ರೀತ್ ಸಿಂಗ್ ಮತ್ತು ಫ್ಯಾಷನ್​ ಡಿಸೈನರ್​​ ಸಿಮೋನೆ ಖಂಬಟ್ಟಾ ಇವರಿಗೆ ಶೀಘ್ರದಲ್ಲೇ ನೋಟಿಸ್​ ನೀಡಲಾಗುವುದು ಎಂದು ಮಾದಕ ವಸ್ತು ನಿಯಂತ್ರಣ ಬ್ಯೂರೋ (ಎನ್​​ಸಿಬಿ) ಉಪ ನಿರ್ದೇಶಕ ಕೆ.ಪಿ.ಎಸ್. ಮಲ್ಹೋತ್ರಾ ಹೇಳಿದ್ದಾರೆ.

ನಟ ಸುಶಾಂತ್​ ಸಿಂಗ್ ರಜಪೂತ್​ ಸಾವಿನ ಪ್ರಕರಣವನ್ನು ವಿವಿಧ ಆಯಾಮಗಳಲ್ಲಿ ಭೇದಿಸಲಾಗುತ್ತಿದ್ದು, ಡ್ರಗ್ಸ್ ಲಿಂಕ್ ಕುರಿತ ತನಿಖೆ ನಡೆಸಲಾಗುತ್ತಿದೆ. ಈ ಸಂಬಂಧ ಅರೆಸ್ಟ್​ ಆಗಿರುವ ನಟಿ ರಿಯಾ ಚಕ್ರವರ್ತಿ ಎನ್‌ಸಿಬಿ ವಿಚಾರಣೆ ವೇಳೆ ಕೆಲವು ಖ್ಯಾತ ನಟ-ನಟಿಯರು, ನಿರ್ಮಾಪಕರು ಮತ್ತು ನಿರ್ದೇಶಕರ ಹೆಸರನ್ನು ಹೇಳಿದ್ದಾರೆ. ಈ ಹಿಟ್-ಲಿಸ್ಟ್​ನಲ್ಲಿ 20ಕ್ಕೂ ಹೆಚ್ಚು ಬಾಲಿವುಡ್​ ತಾರೆಗಳಿದ್ದಾರೆ ಎಂದು ಹೇಳಲಾಗಿದೆ.

ನಟಿ ಸಾರಾ ಅಲಿ ಖಾನ್, ನಟಿ ರಕುಲ್ ಪ್ರೀತ್ ಸಿಂಗ್ ಮತ್ತು ಫ್ಯಾಷನ್​ ಡಿಸೈನರ್​​ ಸಿಮೋನೆ ಹೆಸರನ್ನು ರಿಯಾ ಹೇಳಿದ್ದು, ಈ ಹಿನ್ನೆಲೆ ಈ ಮೂವರು ತಾರೆಯರನ್ನು ಎನ್​​ಸಿಬಿ ಕಚೇರಿಗೆ ಕರೆಯಿಸಿಕೊಳ್ಳುವ ಸಾಧ್ಯತೆಯಿದೆ.

ಸುಶಾಂತ್​ ಸಿಂಗ್​ ಜೊತೆಗಿನ 'ಕೇದಾರನಾಥ್'​ ಸಿನಿಮಾ ಮೂಲಕ ಬಾಲಿವುಡ್​ಗೆ ಪಾದಾರ್ಪಣೆ ಮಾಡಿದ ಸಾರಾ ಅಲಿ ಖಾನ್ (25), ನಟ ಸೈಫ್ ಅಲಿ ಖಾನ್ ಮತ್ತು ಅವರ ಮೊದಲ ಪತ್ನಿ ಅಮೃತ ಸಿಂಗ್ ಅವರ ಪುತ್ರಿಯಾಗಿದ್ದಾರೆ. ಅಲ್ಲದೇ ದಿವಂಗತ ಕ್ರಿಕೆಟ್ ದಂತಕಥೆ ಪಟೌಡಿ ಮತ್ತು ನಟಿ ಶರ್ಮಿಳಾ ಟ್ಯಾಗೋರ್ ಅವರ ಮೊಮ್ಮಗಳೂ ಹೌದು.

ರಕುಲ್ ಪ್ರೀತ್ ಸಿಂಗ್ (30) ಹಿಂದಿ ಮತ್ತು ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸಿದ್ದು, ಸಿಮೋನೆ ಖಂಬಟ್ಟಾ (29) ಫ್ಯಾಷನ್​ ಡಿಸೈನರ್ ಆಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.