ಜೂನ್ 14 ರಂದು ಆತ್ಮಹತ್ಯೆಗೆ ಶರಣಾದ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಕೊನೆಯ ಸಿನಿಮಾ 'ದಿಲ್ ಬೇಚಾರ'. ಸುಶಾಂತ್ ಒಪ್ಪಿಕೊಂಡಿದ್ದ ಚಿತ್ರಗಳ ಲಿಸ್ಟ್ ಕೂಡಾ ದೊಡ್ಡದಿದೆ. ಅದರಲ್ಲಿ 26 ನವೆಂಬರ್ ಮುಂಬೈ ದಾಳಿಯಲ್ಲಿ ಪಾಲ್ಗೊಂಡು ಭಾರತ ಸರ್ಕಾರದಿಂದ ನೇಣು ಶಿಕ್ಷೆಗೆ ಒಳಗಾದ ಉಗ್ರ ಅಜ್ಮಲ್ ಕಸಬ್ ಜೀವನ ಆಧಾರಿತ ಸಿನಿಮಾ ಕೂಡಾ ಒಂದು ಎನ್ನಲಾಗಿದೆ.
![Azmal kasab](https://etvbharatimages.akamaized.net/etvbharat/prod-images/768-512-8719765-829-8719765-1599530749081_2011newsroom_1605848889_25.jpg)
ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಮಾಡಿಕೊಳ್ಳುವ ಹಿಂದಿನ ದಿನ ಅಂದರೆ, ಜೂನ್ 13 ರಂದು ಈ ಸಿನಿಮಾಗೆ ಸಂಬಂಧಿಸಿದಂತೆ ನಿರ್ಮಾಪಕರೊಂದಿಗೆ ಚರ್ಚೆ ಮಾಡಿದ್ದರು ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ. ಇದಕ್ಕೆ ಸಂಬಂಧಿಸಿದಂತೆ ಕಾರ್ನ್ರ್ ಸ್ಟೋನ್ ಎಲ್ಎಲ್ಪಿಗೆ ಸೇರಿದ ಉದಯ್ಸಿಂಗ್ ಗೌರಿ ಕೆಲವೊಂದು ಆಸಕ್ತಿಕರ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವ ಹಿಂದಿನ ದಿನ ಉದಯ್ ಸಿಂಗ್ ಸುಶಾಂತ್ಗೆ ಫೋನ್ ಮಾಡಿದ್ದಾರೆ. ಈ ವೇಳೆ ಸಿನಿಮಾ ನಿರ್ದೇಶಕ ನಿಖಿಲ್ ಅಡ್ವಾಣಿ, ನಿರ್ಮಾಪಕ ರಮೇಶ್ ತೌರಾಣಿ ಅವರನ್ನು ಕೂಡಾ ಕಾನ್ಫರೆನ್ಸ್ ಕಾಲ್ ಮೂಲಕ ಮಾತನಾಡಿಸಿದ್ದಾರೆ. ಸುಮಾರು 7-10 ನಿಮಿಷಗಳ ಕಾಲ ಇವರೆಲ್ಲರ ಜೊತೆ ಸುಶಾಂತ್, ಸಿನಿಮಾ ಬಗ್ಗೆ ಚರ್ಚಿಸಿದ್ದಾರೆ.
![Azmal kasab](https://etvbharatimages.akamaized.net/etvbharat/prod-images/768-512-7380033-695-7380033-1590657133117_2011newsroom_1605848889_294.jpg)
ಕೊರೊನಾ ಲಾಕ್ಡೌನ್ ಕಾರಣದಿಂದ ಎಲ್ಲರೂ ಮುಖಾಮುಖಿ ಭೇಟಿ ಮಾಡಲು ಸಾಧ್ಯವಿಲ್ಲದ ಕಾರಣ ವಿಡಿಯೋ ಕಾಲ್ ಮೂಲಕ ಮಾತನಾಡಿದ್ದಾರೆ. ಆದರೆ ಮರುದಿನವೇ ಸುಶಾಂತ್ ಆತ್ಮಹತ್ಯೆ ಮಾಡಿಕೊಂಡ ಕಾರಣ ಈ ಪ್ರಾಜೆಕ್ಟ್ ಕೆಲಸ ಅರ್ಧಕ್ಕೆ ನಿಂತಿದೆ. ಸುಶಾಂತ್ ನಿಧನದ ನಂತರ ಸಿಬಿಐ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರಂಭಿಸಿದ ತನಿಖೆ ಈಗ ಡ್ರಗ್ಸ್ ಪ್ರಕರಣದವರೆಗೂ ಬಂದು ನಿಂತಿದೆ.