ಕೋಲ್ಕತ್ತಾ: ಬಿಎ ಇಂಗ್ಲಿಷ್‌ಗೆ ಕೋಲ್ಕತ್ತಾದ ಅಶುತೋಷ್ ಕಾಲೇಜಿನ ಪ್ರವೇಶ ಪಟ್ಟಿಯಲ್ಲಿ ಬಾಲಿವುಡ್ ನಟಿ ಸನ್ನಿ ಲಿಯೋನ್ ಹೆಸರು ಅಗ್ರಸ್ಥಾನದಲ್ಲಿದೆ.
ಅಸುತೋಷ್ ಕಾಲೇಜು ತನ್ನ ವೆಬ್‌ಸೈಟ್‌ನಲ್ಲಿ ಅಪ್ಲಿಕೇಶನ್ ಐಡಿ ಮತ್ತು ರೋಲ್ ನಂಬರ್ನೊಂದಿಗೆ ಮೆರಿಟ್ ಲಿಸ್ಟ್ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಸನ್ನಿ ಲಿಯೋನ್ 12ನೇ ತರಗತಿ ಪರೀಕ್ಷೆಯಲ್ಲಿ ನಾಲ್ಕು ವಿಷಯಗಳಲ್ಲಿ 100ಕ್ಕೆ 100 ಅಂಕಗಳನ್ನು ತೆಗೆದುಕೊಂಡಿರುವುದಾಗಿ ನಮೂದಿಸಲಾಗಿದೆ.
"ಯಾರೋ ಉದ್ದೇಶಪೂರ್ವಕವಾಗಿ ಸನ್ನಿ ಲಿಯೋನ್ ಹೆಸರಲ್ಲಿ ಅರ್ಜಿ ಸಲ್ಲಿಸಿದ್ದು, ಇದನ್ನು ಸರಿಪಡಿಸಲು ಕಾಲೇಜು ಮಂಡಳಿಗೆ ಸೂಚಿಸಿದ್ದೇವೆ. ಈ ಬಗ್ಗೆ ತನಿಖೆ ಕೈಗೊಳ್ಳಲಿದ್ದೇವೆ" ಎಂದು ಕಾಲೇಜು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.