ಬಾಲಿವುಡ್ನ ಹಿರಿಯ ನಟ ಅಮಿತಾಬ್ ಬಚ್ಚನ್ (79) ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ಗಳನ್ನು ಮಾಡುತ್ತಾ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಇತ್ತೀಚೆಗೆ ಮಾಡಿದ ಪೋಸ್ಟ್ ಒಂದಕ್ಕೆ ಬಿಸಿಸಿಐ ಅಧ್ಯಕ್ಷ ಹಾಗೂ ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಕೂಡ ಕಮೆಂಟ್ ಮಾಡಿದ್ದಾರೆ.
'ಸಿಟಿ ಫಾಗ್' ಎಂದು ಬರೆದಿರುವ ಜಾಗಿಂಗ್ ಸೂಟ್, ನೀಲಿ ಕ್ಯಾಪ್ ಧರಿಸಿ ಅಮಿತಾಬ್ ಬಚ್ಚನ್ ಮನೆಯಿಂದ ಹೊರಬರುತ್ತಿರುವ ಫೋಟೋವೊಂದನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿದ್ದರು. ಇದಕ್ಕೆ ಸೌರವ್ ಗಂಗೂಲಿ ‘ಬಾಸ್ ಈಸ್ ಔಟ್. ವಯಸ್ಸು ಅನ್ನೋದು ಅವರಿಗೆ ಕೇವಲ ಒಂದು ಸಂಖ್ಯೆ’ ಎಂದು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: 'ಧನುಷ್-ಐಶ್ವರ್ಯಾ ನಡುವೆ ವಿಚ್ಛೇದನವಾಗಿಲ್ಲ.. ಇದು ಕುಟುಂಬ ಕಲಹವಷ್ಟೇ': ಕಸ್ತೂರಿರಾಜ ಸ್ಪಷ್ಟನೆ
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬಚ್ಚನ್, "ನೀವು ಸರಿಯಾಗಿಯೇ ಹೇಳಿದ್ದೀರಿ. ನಗರದಲ್ಲಿ ಮಂಜು ಇಲ್ಲ. ಈ ಕೋವಿಡ್‌ನ ಶೂನ್ಯತೆಯಿಂದ ದೂರವಿರಲು ನಮ್ಮೆಲ್ಲರನ್ನು ಬೆಳಗಿಸಲು ಮುಂಬೈ ಪ್ರಕಾಶಮಾನವಾಗಿದೆ. ನನ್ನ ಮಾತಿನ ಅರ್ಥ ನಿಮಗೆ ತಿಳಿದಿದೆ" ಎಂದು ಬರೆದಿದ್ದಾರೆ.
ಬಾಲಿವುಡ್ನ ಅನೇಕ ಪ್ರಾಜೆಕ್ಟ್ಗಳಲ್ಲಿ ಬ್ಯುಸಿ ಆಗಿರುವ ಅಮಿತಾಬ್ ಬಚ್ಚನ್ ತಮ್ಮ ಮುಂದಿನ 'ಬ್ರಹ್ಮಾಸ್ತ್ರ', 'ಉಂಚೈ', 'ರನ್ವೇ 34' ಮತ್ತು 'ಗುಡ್ ಬೈ' ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.