ಹೈದರಾಬಾದ್ : ಬಾಲಿವುಡ್ ನಟ ಸೋನು ಸೂದ್ ಆಂಧ್ರಪ್ರದೇಶದ ಬಡ ರೈತ ಕುಟುಂಬಕ್ಕೆ ಟ್ರ್ಯಾಕ್ಟರ್ ಉಡುಗೊರೆಯಾಗಿ ನೀಡಿದ್ದಾರೆ.
ಈ ಹಿಂದೆಯೂ ಯಾರಾದರೂ ಸಮಸ್ಯೆಯ ಸುಳಿಯಲ್ಲಿ ಸಿಕ್ಕಿಕೊಂಡ ಸಂದರ್ಭದಲ್ಲಿ ಅವರ ಸಹಾಯಕ್ಕೆ ಸೋನು ಸೂದ್ ಬಂದಿದ್ದಾರೆ. ನಿಮ್ಮ ಸಹಾಯಕ್ಕೆ ನಾನಿದ್ದೇನೆ ಎಂದಿದ್ದರು. ಈಗಾಗಲೇ ಅನೇಕ ವಲಸೆ ಕಾರ್ಮಿಕರನ್ನು ತಮ್ಮ ಮನೆಗೆ ಕಳುಹಿಸುವ ಮೂಲಕ ಸೋನು ಸೂದ್ ಮಾನವೀಯತೆ ಮೆರೆದಿದ್ದರು. ಇದರ ಬೆನ್ನಲ್ಲೇ ಆಂಧ್ರದ ಚಿತ್ತೂರು ಜಿಲ್ಲೆಯ ಬಡ ರೈತ ಕುಟುಂಬಕ್ಕೆ ಟ್ರ್ಯಾಕ್ಟರ್ ನೀಡಿದ್ದಾರೆ.
-
जिसके पास ड्रेस होता है वो सूपर्मैन नहीं होते भाई। 😜 https://t.co/GjfwzGgUxm
— sonu sood (@SonuSood) July 26, 2020 " class="align-text-top noRightClick twitterSection" data="
">जिसके पास ड्रेस होता है वो सूपर्मैन नहीं होते भाई। 😜 https://t.co/GjfwzGgUxm
— sonu sood (@SonuSood) July 26, 2020जिसके पास ड्रेस होता है वो सूपर्मैन नहीं होते भाई। 😜 https://t.co/GjfwzGgUxm
— sonu sood (@SonuSood) July 26, 2020
ಇದನ್ನು ಓದಿ- ಸಿನಿಮಾದಲ್ಲಿ ವಿಲನ್, ನಿಜಜೀವನದಲ್ಲಿ ಹೀರೊ.. ಬಡ ರೈತನಿಗೆ ಟ್ರ್ಯಾಕ್ಟರ್ ಕೊಡಿಸ್ತಿರುವ ಸೋನು ಸೂದ್!!
ಚಿತ್ತೂರು ಜಿಲ್ಲೆಯ ಕೆ. ಮಹಲ್ ರಾಜಪಲ್ಲಿ ಮಂಡಲದ ರೈತ ನಾಗೇಶ್ವರ ರಾವ್ ಮತ್ತು ಅವರ ಇಬ್ಬರು ಹೆಣ್ಣುಮಕ್ಕಳ ಕಷ್ಟದ ಕುರಿತು ವಿಡಿಯೋವೊಂದಕ್ಕೆ ನಟ ಸೋನು ಸೂದ್ ಪ್ರತಿಕ್ರಿಯಿಸಿದ್ದರು. "ಈ ಕುಟುಂಬಕ್ಕೆ ಬೇಕಾಗಿರುವುದು ಎತ್ತುಗಳಲ್ಲ. ಇವರಿಗೆ ಟ್ರ್ಯಾಕ್ಟರ್ ಬೇಕು. ಹೀಗಾಗಿ ಇವರ ಮನೆಗೆ ಟ್ರ್ಯಾಕ್ಟರ್ ಕಳುಹಿಸುತ್ತಿದ್ದೇನೆ. ಇಂದು ಸಂಜೆಯ ಒಳಗಡೆ ನಿಮ್ಮ ಗದ್ದೆಯನ್ನು ಟ್ರ್ಯಾಕ್ಟರ್ ಉಳುಮೆ ಮಾಡಲಿದೆ" ಎಂದು ಸೂದ್ ಭರವಸೆ ನೀಡಿದ್ದರು.
ಅಲ್ಲದೆ ಹೆಣ್ಣುಮಕ್ಕಳ ಶಿಕ್ಷಣದತ್ತ ಗಮನ ಹರಿಸುವಂತೆ ಸೋನು ಹೇಳಿದ್ದರು. ನುಡಿದಂತೆ ನಡೆದಿರುವ ಸೂದ್ ಕುಟುಂಬಕ್ಕೆ ಟ್ರ್ಯಾಕ್ಟರ್ ನೀಡುವ ಮೂಲಕ ಕುಟುಂಬದ ಸಂಕಷ್ಟಕ್ಕೆ ಹೆಗಲಾಗಿದ್ದಾರೆ. ರೈತ ಕುಟುಂಬದ ಕಷ್ಟಕ್ಕೆ ಬೆನ್ನೆಲುಬಾಗಿ ನಿಂತ ಸೋನು ಸೂದ್ ಉದಾರತೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.