ಒಂದು ಸಮಯದಲ್ಲಿ ಬಾಲಿವುಡ್ ಬೇಡಿಕೆ ನಟಿ ಆಗಿದ್ದ ಸೋನಾಲಿ ಬೇಂದ್ರೆ ಮದುವೆ, ಮಕ್ಕಳು ಎಂದು ದೂರ ಉಳಿದಿದ್ದಾಗ ಹಿಂದಿ ಚಿತ್ರರಂಗ ಕೂಡಾ ಅವರನ್ನು ಮರೆತಿತ್ತು. ಆದರೆ ಯಾವಾಗ ಸೋನಾಲಿ ತನಗೆ ಕ್ಯಾನ್ಸರ್ ಇದೆ ಎಂದು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡರೋ ಅಂದಿನಿಂದ ಚಿತ್ರರಂಗ ಮಾತ್ರವಲ್ಲ, ಅಭಿಮಾನಿಗಳು ಕೂಡಾ ಅವರ ಚೇತರಿಕೆಗಾಗಿ ಪ್ರಾರ್ಥಿಸಿದರು. ಸುಮಾರು 2 ವರ್ಷಗಳ ಕಾಲ ನ್ಯೂಯಾರ್ಕ್ನಲ್ಲಿ ಕ್ಯಾನ್ಸರ್ಗೆ ಚಿಕಿತ್ಸೆ ಪಡೆದ ಸೋನಾಲಿ ಬೇಂದ್ರೆ ಇದೀಗ ಭಾರತಕ್ಕೆ ವಾಪಸಾಗಿದ್ದಾರೆ.
-
Accepting and facing the reality helped me #SwitchOnTheSunshine. But being able to take all of it #OneDayAtATime, became #MyNewNormal. In conversation with @RajeevMasand today at #FicciFloBangalore
— Sonali Bendre Behl (@iamsonalibendre) May 8, 2019 " class="align-text-top noRightClick twitterSection" data="
Outfit: @MasabaG pic.twitter.com/WaqojFlDt8
">Accepting and facing the reality helped me #SwitchOnTheSunshine. But being able to take all of it #OneDayAtATime, became #MyNewNormal. In conversation with @RajeevMasand today at #FicciFloBangalore
— Sonali Bendre Behl (@iamsonalibendre) May 8, 2019
Outfit: @MasabaG pic.twitter.com/WaqojFlDt8Accepting and facing the reality helped me #SwitchOnTheSunshine. But being able to take all of it #OneDayAtATime, became #MyNewNormal. In conversation with @RajeevMasand today at #FicciFloBangalore
— Sonali Bendre Behl (@iamsonalibendre) May 8, 2019
Outfit: @MasabaG pic.twitter.com/WaqojFlDt8
ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಸೋನಾಲಿ ಬೆಂಗಳೂರಿಗೆ ಆಗಮಿಸಿದ್ದರು. ತಮ್ಮ ಆರೋಗ್ಯದ ಬಗ್ಗೆ ಮಾತನಾಡಿದ ಅವರು, ಕ್ಯಾನ್ಸರ್ನಿಂದ ನಾನು ಬಹಳ ಪ್ರಬುದ್ಧಳಾಗಿದ್ದೇನೆ, ಮಾನಸಿಕವಾಗಿಯೂ ಬಹಳ ಸಧೃಡವಾಗಿದ್ದೇನೆ. ಈಗ ನನ್ನ ಆರೋಗ್ಯ ಸ್ಥಿರವಾಗಿದೆ. ಶೂಟಿಂಗ್ನಲ್ಲಿ ಕೂಡಾ ನನ್ನನ್ನು ತೊಡಗಿಸಿಕೊಳ್ಳಬಹುದು ಎಂದು ಹೇಳುವ ಮೂಲಕ ತಾನು ಮತ್ತೆ ನಟಿಸಲು ರೆಡಿ ಎಂದು ಪರೋಕ್ಷವಾಗಿ ಹೇಳಿದರು.
ಹಲವು ವರ್ಷಗಳ ಕಾಲ ಬೆಂಗಳೂರಲ್ಲೇ ನೆಲೆಸಿ ಅಲ್ಲೇ ವಿದ್ಯಾಭ್ಯಾಸ ಮಾಡಿದ್ದ ಸೋನಾಲಿಗೆ ಬೆಂಗಳೂರು ಮೆಚ್ಚಿನ ಸಿಟಿಯಂತೆ. ಕನ್ನಡತಿ ಅಲ್ಲದಿದ್ದರೂ ಕನ್ನಡಿಗರ ಮನಗೆದ್ದ ಹುಡುಗಿ ಮತ್ತೆ ಸಿನಿಮಾಗಳಲ್ಲಿ ನಟಿಸುವಂತಾಗಲಿ, ಅವರ ಆರೋಗ್ಯ ಮತ್ತಷ್ಟು ಸುಧಾರಿಸಲಿ ಎಂದು ಹಾರೈಸೋಣ.