ಮುಂಬೈ: ಕೊರೊನಾ ವೈರಸ್ ಬಿಕ್ಕಟ್ಟು ಶೀಘ್ರದಲ್ಲೇ ಕೊನೆಗೊಳ್ಳಲಿದೆ ಎಂದು ಬಾಲಿವುಡ್ ಬೆಡಗಿ ಸೋನಾಕ್ಷಿ ಸಿನ್ಹಾ ಭರವಸೆ ವ್ಯಕ್ತಪಡಿಸಿದ್ದು, ಜೊತೆಗೆ ಇದೆಲ್ಲ ಮುಗಿದ ನಂತರ ಸಮುದ್ರಕ್ಕೆ ಧುಮುಕಿ ಈಜಾಡಲು ಬಯಸುತ್ತೇನೆ ಎಂದು ಹೇಳಿಕೊಂಡಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ಇವರ ಹಿಂಬಾಲಕರ ಸಂಖ್ಯೆ 19 ಮಿಲಿಯನ್ ಆಗಿರುವ ಸಂಭ್ರಮದಲ್ಲಿ ಈ ರೀತಿ ಸೋನಾಕ್ಷಿ ತಮ್ಮ ಮನದಿಂಗಿತ ಬಿಚ್ಚಿಟ್ಟಿದ್ದಾರೆ. ಕಳೆದ ಎಂಟು ದಿನಗಳಿಂದ ಸೋಷಿಯಲ್ ಮೀಡಿಯಾದಿಂದ ದೂರವಿದ್ದ ಸೋನಾಕ್ಷಿ ,ಇದೀಗ ಮತ್ತೆ ಕಾಣಿಸಿಕೊಂಡಿದ್ದು, ಇನ್ಸ್ಟಾದಲ್ಲಿ ತಮ್ಮ ಫಾಲೋವರ್ಸ್ ಸಂಖ್ಯೆ 19 ಮಿಲಿಯನ್ ಆಗಿದಕ್ಕೆ ಧನ್ಯವಾದ ತಿಳಿಸಿದ್ದಾರೆ. ಈ ವೇಳೆ ಹಳೆಯ ಸ್ವಿಮ್ಮಿಂಗ್ ವಿಡಿಯೊವೊಂದನ್ನು ಪೋಸ್ಟ್ ಮಾಡಿದ್ದಾರೆ. ಹಾಗೂ ಕೊರೊನಾ ವಿಚಾರವೆಲ್ಲಾ ಕೊನೆಗೊಂಡ ನಂತರ ಮತ್ತೆ ಈ ರೀತಿ ಸಮುದ್ರಕ್ಕೆ ಧುಮುಕಿ ಈಜುವ ಆಸೆ ಹಂಚಿಕೊಂಡಿದ್ದಾರೆ
ಇತ್ತೀಚೆಗಷ್ಟೇ ಕೆಲವರು ಅವರು ಮದುವೆ ವಿಚಾರವಾದಲ್ಲಿ ಮೂಗು ತೂರಿಸಿದ ಹಿನ್ನೆಲೆ ತಮ್ಮ ಮದುವೆಯ ಯೋಚನೆ ಹಾಗೂ ಯೋಜನೆಗಳನ್ನು ಫ್ಯಾನ್ಸ್ಗಳೊಟ್ಟಿಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ರು.
ಕೆಲವು ಅಭಿಮಾನಿಗಳು ನಿಮ್ಮ ಮದುವೆ ಯಾವಾಗ, ಮದುವೆಯಾದ ನಂತರ ನಿಮ್ಮ ಹೆಸರಿನ ಮುಂದೆ ಗಂಡನ ಹೆಸರನ್ನು ಸೇರಿಸಿಕೊಳ್ತೀರಾ ಎಂದೆಲ್ಲಾ ಪ್ರಶ್ನೆ ಕೇಳಿದ್ರು. ಅದಕ್ಕೆ ಸೋನಾಕ್ಷಿ ನನ್ನ ತಂದೆ ತಾಯಿ ಕೂಡ ನನ್ನ ಮದುವೆಯ ಬಗ್ಗೆ ನಿಮ್ಮಷ್ಟು ಯೋಚಿಸಿಲ್ಲ ಅನ್ನಿಸುತ್ತೆ ಎಂದು ಪ್ರತಿಕ್ರಿಯಿಸಿದ್ದರು.