ETV Bharat / sitara

ಸಾಮಾಜಿಕ ಜಾಲತಾಣದಲ್ಲಿ ನಟಿ ಸೋನಾಕ್ಷಿ ಸಿನ್ಹಾಗೆ ಬೆದರಿಕೆ​: ವ್ಯಕ್ತಿ ಬಂಧನ - ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್

ಬಾಲಿವುಡ್​ ನಟಿಗೆ ಬೆದರಿಕೆ ಹಾಗೂ ಅವಹೇಳನಕಾರಿಯುತ ಭಾಷೆ ಬಳಸಿ ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್ ಮಾಡಿದ್ದ ವ್ಯಕ್ತಿಯೊಬ್ಬನನ್ನು ಮುಂಬೈ ಸೈಬರ್ ಸೆಲ್ ಪೊಲೀಸರು ಬಂಧಿಸಿದ್ದಾರೆ.

Sonakshi Sinha's cyber bully arrested
ಸಾಮಾಜಿಕ ಜಾಲತಾಣದಲ್ಲಿ ಸೋನಾಕ್ಷಿ ಸಿನ್ಹಾಗೆ ಬೆದರಿಕೆ
author img

By

Published : Aug 21, 2020, 10:22 PM IST

ಮುಂಬೈ: ಬಾಲಿವುಡ್​ ನಟಿ ಸೋನಾಕ್ಷಿ ಸಿನ್ಹಾ ವಿರುದ್ಧ ಅವಹೇಳನಕಾರಿಯಾಗಿ ಕಮೆಂಟ್​ ಮಾಡಿದ್ದಕ್ಕಾಗಿ ಮುಂಬೈ ಸೈಬರ್ ಸೆಲ್ ಪೊಲೀಸರು ವ್ಯಕ್ತಿಯೋರ್ವನನ್ನು ಬಂಧಿಸಿದ್ದಾರೆ. ಪೊಲೀಸರು ತ್ವರಿತವಾಗಿ ಕ್ರಮ ಕೈಗೊಂಡಿದ್ದಕ್ಕಾಗಿ ಸೋನಾಕ್ಷಿ ಸಿನ್ಹಾ ಕೃತಜ್ಞತೆ ಸಲ್ಲಿಸಿದ್ದಾರೆ.

ಸೋನಾಕ್ಷಿ ಸಿನ್ಹಾ ಇತ್ತೀಚೆಗೆ ಸೈಬರ್ ಸುರಕ್ಷತೆ, ಆನ್​ಲೈನ್ ಕಿರುಕುಳದಿಂದಾಗುವ ಪರಿಣಾಮ ಮತ್ತು ಅಂತಹ ಪ್ರಕರಣಗಳನ್ನು ಹೇಗೆ ಎದುರಿಸಬೇಕು ಎಂಬುದರ ಬಗ್ಗೆ ಜಾಗೃತಿ ಮೂಡಿಸಲು ಅಬ್ ಬಸ್ ಎಂಬ ಅಭಿಯಾನವನ್ನು ಪ್ರಾರಂಭಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ಅಭಿಯಾನದ ಬಗ್ಗೆ ಅರಿವು ನೀಡಿದ್ದರು. ತಮ್ಮ ಇನ್ಟಾಗ್ರಾಮ್​ನಲ್ಲಿ ಬಂದ ಕಮೆಂಟ್​ಗಳನ್ನು ತೆರೆದು​ ನೋಡಿದಾಗ ಕೆಲವು ಬೆದರಿಕೆಯ ಕಮೆಂಟ್​ಗಳು ಕಾಣಿಸಿಕೊಂಡಿದ್ದವು.

ಅಲ್ಲದೆ ಅವಹೇಳನಕಾರಿ ಭಾಷೆ ಬಳಸಿ ಕಮೆಂಟ್ ಮಾಡಿದ್ದರು. ಈ ಬಗ್ಗೆ ಸೋನಾಕ್ಷಿ ಸಿನ್ಹಾ ಅವರ ತಂಡವು ಮುಂಬೈ ಸೈಬರ್​ ಕ್ರೈಮ್ ಶಾಖೆಯನ್ನು ಸಂಪರ್ಕಿಸಿ ಆ. 14 ರಂದು ದುಷ್ಕರ್ಮಿಗಳ ವಿರುದ್ಧ ಎಫ್ಐಆರ್ ದಾಖಲಿಸಿತ್ತು.

ತನಿಖೆ ಕೈಗೊಂಡಿದ್ದ ಸೈಬರ್​ ಕ್ರೈಮ್ ಶಾಖಾ ಪೊಲೀಸರು ಆ. 21 ರಂದು ಶಶಿಕಾಂತ್ ಜಾಧವ್ (27) ಎಂಬಾತನನ್ನು ಬಂಧಿಸಿದ್ದಾರೆ. ಬಂಧಿತ ಜಾಧವ್ ನಟಿ ಸೋನಾಕ್ಷಿ ಸಿನ್ಹಾಗೆ ಮಾತ್ರವಲ್ಲದೆ ಇತರೆ ಅನೇಕ ನಟಿಯರಿಗೂ ಕಿರುಕುಳ ನೀಡಿದ್ದನು ಎಂಬುದು ತನಿಖೆಯಿಂದ ತಿಳಿದು ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.