ETV Bharat / sitara

ಪತಿ ಬಂಧನದ ಬಗ್ಗೆ ಮೌನ ಮುರಿದ ಶಿಲ್ಪಾಶೆಟ್ಟಿ: 'ಮಾಧ್ಯಮಗಳ ವಿಚಾರಣೆ ಬೇಕಿಲ್ಲ' - Raj Kundra

ಪತಿ ರಾಜ್​ಕುಂದ್ರಾ ಬಂಧನದ ಬಳಿಕ ಇದೇ ಮೊದಲ ಬಾರಿಗೆ ನಟಿ ಶಿಲ್ಪಾಶೆಟ್ಟಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

Shilpa Shetty
ಶಿಲ್ಪಾಶೆಟ್ಟಿ ರಾಜ್​ಕುಂದ್ರಾ
author img

By

Published : Aug 2, 2021, 2:00 PM IST

ಮುಂಬೈ: ಅಶ್ಲೀಲ ಚಿತ್ರಗಳ ನಿರ್ಮಾಣ ಸಂಬಂಧ ಪತಿ ರಾಜ್​ಕುಂದ್ರಾ ಬಂಧನದ ಬಳಿಕ ಪತ್ನಿ ಶಿಲ್ಪಾಶೆಟ್ಟಿ ಮೊದಲ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಈ ಪ್ರಕರಣ ಸಂಬಂಧ ನಾನು ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ನಾನು ನೀಡಿದ್ದೇನೆ ಎನ್ನಲಾದ ಹೇಳಿಕೆಗಳನ್ನು ಸಾಮಾಜಿಕ ಜಾಲತಾಣಗಳಿಂದ ತೆರವುಗೊಳಿಸಬೇಕು ಎಂದು ತಮ್ಮ ಇನ್​ಸ್ಟಾದಲ್ಲಿ ಪೋಸ್ಟ್ ಹಾಕಿದ್ದಾರೆ.

Shilpa Shetty releases first statement
ಶಿಲ್ಪಾಶೆಟ್ಟಿ ಮೊದಲ ಹೇಳಿಕೆ ಬಿಡುಗಡೆ

ಶಿಲ್ಪಾಶೆಟ್ಟಿ ಹೇಳಿಕೆ ವಿವರ..

Shilpa Shetty releases first statement
ಶಿಲ್ಪಾಶೆಟ್ಟಿ ಮೊದಲ ಹೇಳಿಕೆ ಬಿಡುಗಡೆ

‘ಹೌದು, ಕಳೆದ ಕೆಲವು ದಿನಗಳಿಂದ ಸಾಲು ಸಾಲು ಸವಾಲುಗಳು ಎದುರಾಗುತ್ತಿವೆ. ಬಹಳಷ್ಟು ವದಂತಿಗಳು ಮತ್ತು ಆರೋಪಗಳು ಕೇಳಿ ಬರುತ್ತಿವೆ. ಮಾಧ್ಯಮಗಳು ಹಾಗೂ ಹಿತೈಷಿಗಳು ನನ್ನ ವಿರುದ್ಧ ಅನಪೇಕ್ಷಿತ ಆರೋಪಗಳನ್ನು ಮಾಡಿದ್ದಾರೆ. ನನಗೆ ಮಾತ್ರವಲ್ಲ, ನನ್ನ ಕುಟುಂಬದವರ ವಿರುದ್ಧವೂ ಸಾಕಷ್ಟು ಟ್ರೋಲ್​ ಆಗುತ್ತಿವೆ, ಪ್ರಶ್ನೆಗಳು ಬರುತ್ತಿವೆ. ಈ ಪ್ರಕರಣ ಪೂರ್ವಾಗ್ರಹವಾಗಿದ್ದು ನಾನು ಯಾವುದಕ್ಕೂ ಪ್ರತಿಕ್ರಿಯಿಸಿಲ್ಲ. ಆದ್ದರಿಂದ ದಯವಿಟ್ಟು ನನ್ನ ವಿರುದ್ಧ ಆರೋಪಿಸುವುದನ್ನು ನಿಲ್ಲಿಸಿ.

ಈ ಪ್ರಕರಣದಲ್ಲಿ ನಮಗೆ ಲಭ್ಯವಿರುವ ಕಾನೂನುಗಳನ್ನು ಆಶ್ರಯಿಸಿದ್ದೇವೆ. ದಯವಿಟ್ಟು ಸತ್ಯಾಸತ್ಯತೆ ತಿಳಿಯದೆ ಅರೆಬೆಂದ ಮಾಹಿತಿ ಹಂಚಬೇಡಿ, ಪ್ರತಿಕ್ರಿಯಿಸಬೇಡಿ ವಿನಮ್ರವಾಗಿ ಪ್ರಾರ್ಥಿಸುತ್ತೇವೆ.

ಭಾರತೀಯ ಕಾನೂನು ಪಾಲಿಸುವವಳು ನಾನು. ಕಳೆದ 29 ವರ್ಷಗಳಿಂದ ಕಠಿಣ ಪರಿಶ್ರಮದಿಂದ ಈ ಮಟ್ಟಕ್ಕೆ ಬೆಳೆದಿದ್ದೇನೆ. ಜನತೆ ನನ್ನ ಮೇಲೆ ನಂಬಿಕೆ ಇಟ್ಟಿದ್ದು, ಆ ನಂಬಿಕೆಯನ್ನು ಎಂದಿಗೂ ಹುಸಿ ಮಾಡುವುದಿಲ್ಲ. ದಯವಿಟ್ಟು ನಮ್ಮ ಕುಟುಂಬದ ಗೌಪ್ಯತೆ ಕಾಪಾಡಿ. ನಮಗೆ ಮಾಧ್ಯಮ ವಿಚಾರಣೆ ಬೇಕಿಲ್ಲ. ಕಾನೂನಿನ ಹಾದಿಯಲ್ಲಿ ನಾವು ಹೋರಾಟ ಮುಂದುವರಿಸುತ್ತೇವೆ. ಸತ್ಯಮೇವ ಜಯತೇ'. ಧನ್ಯವಾದಗಳೊಂದಿಗೆ ಶಿಲ್ಪಾಶೆಟ್ಟಿ .

ಜುಲೈ 19 ರಂದು ಉದ್ಯಮಿ ರಾಜ್​ಕುಂದ್ರಾ ಬಂಧನದ ಬಳಿಕ ಶಿಲ್ಪಾಶೆಟ್ಟಿ ವಿರುದ್ಧ ಮಾಧ್ಯಮಗಳಲ್ಲಿ ಅವಹೇಳನಕಾರಿ ವಿಷಯವನ್ನು ಪ್ರಕಟಿಸಿವೆ ಎಂದು ಆರೋಪಿಸಿ ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.