ಹೈದರಾಬಾದ್: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ನಿರೂಪಿಸುತ್ತಿರುವ ಚಾಟ್ ಶೋ 'ಶೇಪ್ ಆಫ್ ಯು ವಿತ್ ಫಿಲ್ಮಿ ಮಿರ್ಚಿ'ಯಲ್ಲಿ ನಟಿ, ಗಾಯಕಿ ಶೆಹನಾಜ್ ಗಿಲ್ ಭಾಗವಹಿಸಲಿದ್ದಾರೆ. ಕಪ್ಪು ಬಣ್ಣದ ಉಡುಗೆ ತೊಟ್ಟಿರುವ ಶೆಹನಾಜ್ ಗಿಲ್, ಶಿಲ್ಪಾ ಶೆಟ್ಟಿ ಅವರೊಂದಿಗೆ ಪೋಸ್ ನೀಡುತ್ತಿರುವ ಫೋಟೋ, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆರೋಗ್ಯ ಮತ್ತು ಬ್ಯೂಟಿ ಬಗ್ಗೆ ಆಧರಿಸಿದ ಶಿಲ್ಪಾ ಶೆಟ್ಟಿ ನಿರೂಪಣೆಯಲ್ಲಿ ಬರುತ್ತಿರುವ ಹೊಸ ಕಾರ್ಯಕ್ರಮ ಇದಾಗಿದ್ದು, ಅತಿಥಿಯಾಗಿ ಶೆಹನಾಜ್ ಗಿಲ್ ಭಾಗವಹಿಸಲಿದ್ದಾರೆ. ಹಿಂದಿ ಬಿಗ್ಬಾಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶೆಹನಾಜ್ ಗಿಲ್, ನಟ ಸಿದ್ದಾರ್ಥ್ ಶುಕ್ಲಾ ಅವರ ಜೊತೆ ಹೆಚ್ಚಾಗಿ ಕಾಣಿಸಿಕೊಂಡು ಜನಪ್ರಿಯ ಜೋಡಿಯಾಗಿ ಹೆಸರಾಗಿದ್ದರು.
ಸಿದ್ದಾರ್ಥ್ ಶುಕ್ಲಾ ಹೃದಯಾಘಾತದಿಂದ ಸಾವನ್ನಪ್ಪಿದ್ದ ಬಳಿಕ ಅವರ ನೆನಪಿಗಾಗಿ ಶೆಹನಾಜ್ ಗಿಲ್ 'ತು ಯಾಹೀನ್ ಹೈ' ಹಾಡೊಂದನ್ನು ಬಿಡುಗಡೆ ಮಾಡಿದ್ದಾರೆ.
ಓದಿ: ಕೆಜಿಎಫ್ ಚಾಪ್ಟರ್ 2 ಚಿತ್ರದ ಡಬ್ಬಿಂಗ್ ಮುಗಿಸಿದ ಬಾಲಿವುಡ್ ರವೀನಾ ನಟಿ