ರಾಜ್ಯ ರಾಜಧಾನಿ ಬೆಂಗಳೂರಿನ ಮಧ್ಯಮ ಕುಟುಂಬದಲ್ಲಿ ಜನಿಸಿ ಇಡೀ ವಿಶ್ವವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ ಪವರ್ ಫುಲ್ ಮಹಿಳೆ ಶಕುಂತಲಾ ದೇವಿ. 'ಮಾನವ ಕಂಪ್ಯೂಟರ್' ಎಂದೇ ಹೆಸರಾದ ಶಕುಂತಲಾ ದೇವಿ ಅವರ ಹೆಸರು ಗಿನ್ನಿಸ್ ಪುಸ್ತಕದಲ್ಲಿ ದಾಖಲಾಗಿದೆ.
ಮಾನವ ಕಂಪ್ಯೂಟರ್ 'ಶಕುಂತಲಾ ದೇವಿ' ಬಯೋಪಿಕ್ ಬಾಲಿವುಡ್ನಲ್ಲಿ ತಯಾರಾಗಿದ್ದು ವಿದ್ಯಾ ಬಾಲನ್, ಶಕುಂತಲಾ ದೇವಿ ಆಗಿ ನಟಿಸಿದ್ದಾರೆ. ಈಗಾಗಲೇ ಚಿತ್ರದ ಫಸ್ಟ್ಲುಕ್ ಬಹಳ ಗಮನ ಸೆಳೆದಿತ್ತು. ಈ ಫಸ್ಟ್ಲುಕ್ನಲ್ಲಿ ವಿದ್ಯಾಬಾಲನ್ ಥೇಟ್ ಶಕುಂತಲಾ ದೇವಿ ಅವರಂತೆ ಕಾಣುತ್ತಿದ್ದಾರೆ. ಕೊರೊನಾ ಲಾಕ್ ಡೌನ್ ಇರದಿದ್ದರೆ ಇಷ್ಟೊತ್ತಿಗಾಗಲೇ ಸಿನಿಮಾ ಬಿಡುಗಡೆಯಾಗಬೇಕಿತ್ತು.
- " class="align-text-top noRightClick twitterSection" data="">
ಇದೀಗ ಚಿತ್ರತಂಡ ಹಾಡೊಂದನ್ನು ಬಿಡುಗಡೆ ಮಾಡಿದ್ದು ಸುಮಾರು 3 ಮಿಲಿಯನ್ಗೂ ಹೆಚ್ಚು ಮಂದಿ ಈ ಹಾಡನ್ನು ನೋಡಿದ್ದಾರೆ. ಶಕುಂತಲಾ ದೇವಿ ಅಲಿಯಾಸ್ ವಿದ್ಯಾ ಬಾಲನ್ ತರಗತಿಯಲ್ಲಿ ಮಕ್ಕಳಿಗೆ ಗಣಿತ ಪಾಠ ಹೇಳಿಕೊಡುವ ಸನ್ನಿವೇಶವನ್ನು ಈ ಹಾಡಿನ ಮೂಲಕ ಚಿತ್ರೀಕರಿಸಲಾಗಿದೆ. ಮಕ್ಕಳು ಕೂಡಾ ಬಹಳ ಆಸಕ್ತಿಯಿಂದ, ಎಂಜಾಯ್ ಮಾಡುತ್ತಾ ತಮ್ಮ ಮೆಚ್ಚಿನ ಟೀಚರ್ ಹೇಳಿಕೊಡುವ ಪಾಠವನ್ನು ಕಲಿಯುತ್ತಿದ್ದಾರೆ.
'ಪಾಸ್ ನಹಿ ತೊ ಫೇಲ್ ನಹಿ' ಎಂಬ ಈ ಹಾಡನ್ನು ಖ್ಯಾತ ಗಾಯಕಿ ಸುನಿಧಿ ಚೌಹಾಣ್ ಹಾಡಿದ್ದಾರೆ. ವಿಕ್ರಮ್ ಮಲ್ಹೋತ್ರ ಈ ಸಿನಿಮಾವನ್ನು ನಿರ್ಮಿಸಿದ್ದು ಅನು ಮೆನನ್ ನಿರ್ದೇಶಿಸಿದ್ದಾರೆ. ಜುಲೈ 31 ರಂದು ಸಿನಿಮಾ ಅಮೆಜಾನ್ ಪ್ರೈಂನಲ್ಲಿ ಪ್ರಸಾರವಾಗಲಿದೆ.